ಯಾರ ಮನೆಯನ್ನೂ ಒಡೆಯಬಾರದು, ಭಾವನೆಗಳ ಜೊತೆ ಆಟ ಆಡಬಾರದು: ನಟ ಶಿವರಾಜ್‌ಕುಮಾರ್

Actor Shiva Rajkumar: ರಾಜ್ಯದಲ್ಲಿ ಗುರುವಾರ (ಡಿಸೆಂಬರ್ 25) ಸ್ಯಾಂಡಲ್‌ವುಡ್‌ನ ದೊಡ್ಡ ಸ್ಟಾರ್‌ಗಳ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. ನಟ ಶಿವರಾಜ್‌ಕುಮಾರ್, ಉಪೇಂದ್ರ ರಾಜ್‌ ಬಿ ಶೆಟ್ಟಿ ನಟನೆಯ 45 ಹಾಗೂ ಕಿಚ್ಚ ಸುದೀಪ್‌ ಅವರ ಮಾರ್ಕ್‌ ಚಿತ್ರಗಳು ತೆರೆ ಕಂಡಿವೆ. ಇನ್ನೂ ಶಿವಣ್ಣ ತಮ್ಮ ಸಿನಿಮಾ ವೀಕ್ಷಣೆ ಮಾಡಿ ಹೊರಗಡೆ ಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಹಾಗೂ ದಚ್ಚು ಫ್ಯಾನ್ಸ್‌ ನಡುವೆ ನಡೆದ ವಾಕ್‌ ಸಮರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ದರ್ಶನ್‌ ಹಾಗೂ ಸುದೀಪ್‌ ಅಭಿಮಾನಿಗಳ ವಾರ್ ನಡೆದಿದೆ. ಇನ್ನೂ ಶಿವರಾಜ್​​ಕುಮಾರ್ ಅಭಿನಯದ 45 ಸಿನಿಮಾ ಸಹ ಬಿಡುಗಡೆಯಾಗಿದ್ದು, ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ವೀಕ್ಷಣೆ ಮಾಡಿದ ಬಳಿಕ ಶಿವಣ್ಣ ಫ್ಯಾನ್ಸ್ ವಾರ್ ಕುರಿತು ಮಾತನಾಡಿದ್ದಾರೆ.

Actor Shiva Rajkumar Reaction on Darshan and Kiccha Sudeep Fans War

ಶಿವಣ್ಣ ಕಿವಿಮಾತು: "ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾರ ಮನೆಯನ್ನೂ ಒಡೆಯೋಕೆ ಹೋಗಬಾರದು. ಯಾರ ಭಾವನೆಗಳ ಜೊತೆಗೂ ಆಟ ಆಡಬಾರದು. ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು. ಇದ್ದಷ್ಟು ದಿನ ಎಲ್ಲಾರೂ ಚೆನ್ನಾಗಿರೋಣ. ಬದುಕೋಣ, ಬದುಕೋಕೆ ಬಿಡೋಣ ಎಂಬ ಭಾವನೆ ಎಲ್ಲರಿಗೂ ಇರಬೇಕು. ನಾವೆಲ್ಲರೂ ಅನ್ಯೋನ್ಯವಾಗಿ ಹೊಂದಿಕೊಂಡು ಇರಬೇಕು," ಎಂದು ನಟ ಶಿವರಾಜ್​ಕುಮಾರ್ ಹೇಳಿದರು.

45 ಸಿನಿಮಾ ಬಗ್ಗೆ ಶಿವಣ್ಣ ಹೇಳಿದ್ದೇನು?: ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಶಿವರಾಜ್​ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆ ಮಾಡಿದ್ದಾರೆ. ಸಿನಿಮಾದ ಬಗ್ಗೆ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ಅರ್ಜುನ್ ಜನ್ಯ ಫಸ್ಟ್ ಟೈಂ ನಿರ್ದೇಶನ ಅಂದಾಗ ಒಂದು ಕಾತರವಿತ್ತು. ಅವರು ಜನರಿಗೆ ಇಷ್ಟವಾಗುವ ವಿಷಯವನ್ನು ಕೊಟ್ಟಿದ್ದಾರೆ. ಕಮರ್ಷಿಯಲ್ ಜೊತೆಗೆ ಫಿಲಾಸಫಿ ಕೂಡ ಹೇಳಿದ್ದಾರೆ ಎಂದು ಹೇಳಿದ್ದಾರೆ.

ಮಾರ್ಕ್‌ಗೆ ಶುಭಹಾರೈಸಿದ ಶಿವಣ್ಣ: ರಾಯಪ್ಪ, ಶಿವಪ್ಪ ಎರಡು ಅಪ್ಪನೇ ವರ್ಕ್ ಆಗಿದೆ. ಅಭಿಮಾನಿ ದೇವರುಗಳ ಪ್ರೀತಿ ವಿಶ್ವಾಸದಿಂದ ನಾವು ಇಲ್ಲಿದ್ದೀವಿ. ಕಳೆದ ವರ್ಷ ನಿನ್ನೆಗೆ (ಡಿಸೆಂಬರ್ 24) ಒಂದು ವರ್ಷದ ಹಿಂದೆ ಅಮೆರಿಕಾದಲ್ಲಿ ಆಪರೇಷನ್ ಆಗಿತ್ತು. ಅಭಿಮಾನಿಗಳನ್ನ ಅಪ್ಪಾಜಿ ದೇವರು ಅಂತಾ ಕರೆದರು ಎಂದು ಹೇಳಿದ್ದಾರೆ. ಇನ್ನೂ ಮಾರ್ಕ್ ಸಿನಿಮಾ ಬಗ್ಗೆ ಮಾತನಾಡಿದ ಅವರು, ಮಾರ್ಕ್‌ ಸಿನಿಮಾ ಕೂಡ ಇವತ್ತು ಬಿಡುಗಡೆಯಾಗಿದೆ. ಆ ಸಿನಿಮಾಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.

ಇನ್ನೂ ಥಿಯೇಟರ್‌ನಲ್ಲಿ ಇಂದು ಮೂವರು ನಟರ ಅಭಿಮಾನಿಗಳು ಅಭಿಮಾನಿಗಳು ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಟ್ರೈಲರ್ ಮೂಲಕ ಕುತೂಹಲ ಸೃಷ್ಟಿಸಿದ್ದ 45 ಸಿನಿಮಾ ಇದೀಗ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಬಡಿಸಿದೆ. ಹೊಸ ರೀತಿಯ ಕಥೆ ಒಳಗೊಂಡ ಈ ಸಿನಿಮಾ ಅಭಿಮಾನಿಗಳ ಮನಸು ಕದ್ದುಬಿಟ್ಟಿದೆ. ಅಷ್ಟರ ಮಟ್ಟಿದೆ ಮೂವರು ನಟರು ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗೂ ಇಡೀ ಚಿತ್ರತಂಡ ಅಭಿಮಾನಿಗಳೊಟ್ಟಿಗೆ ಬೆಂಗಳೂರಿನಲ್ಲಿರುವ ತ್ರಿವೇಣಿ ಚಿತ್ರಮಂದಿರಕ್ಕೆ ಆಗಮಿಸಿ ಸಿನಿಮಾ ವೀಕ್ಷಣೆ ಮಾಡಿ ಸಂಭ್ರಮಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+