ಚಾಲೆಂಜಿಂಗ್ ಸ್ಟಾರ್ ‘ಕಾಟೇರ’ ಬಗ್ಗೆ ನಟ ಶರಣ್ ಹೇಳಿದ್ದು ಏನು?

ಕಾಟೇರ ಸಿನಿಮಾ ವರ್ಷದ ಕೊನೆಯಲ್ಲಿ ಬಂದ್ರೂ ಧೂಳೆಬ್ಬಿಸಿದೆ, ಈಗಾಗಲೇ ಮೊದಲನೇ ದಿನವೇ ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ ಕಲೆಕ್ಷನ್ ಕೂಡ ಮಾಡಿದೆ. ಇದರ ಜೊತೆಗೆ ಎಲ್ಲೆಲ್ಲೂ ಕಾಟೇರ ಸಿನಿಮಾಗೆ ಗುಡ್ ರೆಸ್ಪಾನ್ಸ್ ಕೂಡ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಕನ್ನಡ ಸೇರಿ, ವಿವಿಧ ಚಿತ್ರರಂಗದವರು 'ಕಾಟೇರ' ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ನಟ ಶರಣ್ ಕೂಡ 'ಕಾಟೇರ' ಬಗ್ಗೆ ಮಾತನಾಡಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿರುವ ನಟ ಶರಣ್ ಅವರು, 'ಕಾಟೇರ ಚಿತ್ರಮಂದಿರದಲ್ಲಿ ನೋಡಿ, ಬಹಳ ಇಷ್ಟಪಟ್ಟ ನನ್ನ ಈ ವರ್ಷದ ಕೊನೆಯ ಚಿತ್ರ. A perfect end to my 2023. ಎಲ್ಲ ಸಿನಿಪ್ರಿಯರಿಗೂ ಮತ್ತು ಅದರಲ್ಲೂ ದರ್ಶನ್‌ ಸರ್‌ ಅಭಿಮಾನಿಗಳಿಗೂ ಇದೊಂದು ಭರ್ಜರಿ ಸಿನಿಮಾ ಹಬ್ಬವಾಗಲಿದೆ ಎಂದರೆ ತಪ್ಪಾಗಲಾರದು.' ಎಂದಿದ್ದಾರೆ ಸ್ಯಾಂಡಲ್‌ವುಡ್ ಅಧ್ಯಕ್ಷ ನಟ ಶರಣ್.

Actor Sharan Reacted On Challenging Star Darshans Kaatera Movie Success

ದರ್ಶನ್‌ ಸರ್‌ ಕರ್ಮಷಿಯಲ್‌ ಸಿನಿಮಾಗಳಲ್ಲೂ...

ಹಾಗೇ ತಮ್ಮ ಮಾತು ಮುಂದುವರಿಸಿರುವ ನಟ ಶರಣ್, 'ದರ್ಶನ್‌ ಸರ್‌ ಕರ್ಮಷಿಯಲ್‌ ಸಿನಿಮಾಗಳಲ್ಲೂ ಒಂದು ಹೆಜ್ಜೆ ಮೀರಿದ ನಟನೆ ಮಾಡುವಲ್ಲಿ ಎತ್ತಿದ ಕೈ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕಮರ್ಷಿಯಲ್‌ ಸಿನಿಮಾದಲ್ಲು ಒಂದೊಳ್ಳೆ ಸಂದೇಶ ನೀಡುವ ಜವಾಬ್ದಾರಿಯನ್ನು ಅವರು ತುಂಬಾ ಅಚ್ಚುಕಟ್ಟಾಗಿ ಹಾಗೆಯೇ ತುಂಬಾ ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. Rockline Productions ಇಂತಹ ಒಂದು ಕಥೆಯನ್ನು ಒಪ್ಪಿಕೊಂಡು ತೆರೆಮೇಲೆ ಮನಮುಟ್ಟುವಂತೆ ತರುವಲ್ಲಿ ಯಶಸ್ವಿಯಾಗಿದ್ದಾರೆ. A big congratulations on your versatility in making good films back-to-back.'

ಅದು ಹೇಗೆ ಕಥೆಯನ್ನು ಹೆಣೆಯುತ್ತಿಯೋ...

'ಇನ್ನ ನಮ್ಮ ತರುಣ್‌, ನಿನ್ನ ಪ್ರತಿಯೊಂದು ಹೆಜ್ಜೆಯನ್ನು ಬಹಳ ಹತ್ತಿರದಿಂದ ಕಂಡವನು ನಾನು. ಬಹಳ ಚಿಕ್ಕ ವಯಸ್ಸಿನಲ್ಲೇ ಅತ್ಯಂತ ಪ್ರಭಾವಶಾಲಿ ವಿಷಯವನ್ನು ಅಷ್ಟೇ ಪರಿಣಾಮಕಾರಿಯಾಗಿ ಅದು ಹೇಗೆ ಕಥೆಯನ್ನು ಹೆಣೆಯುತ್ತಿಯೋ ನಾ ಅರಿಯೇ. ಹರಿಕೃಷ್ಣ ಅವರ ಸಂಗೀತ ಮತ್ತು background score ಅದ್ಬುತವಾಗಿದೆ. ಸುಧಾಕರ್‌ ಅವರ ಚಾತುರ್ಯದ ಛಾಯಾಗ್ರಹಣ, ನಮ್ಮ ಕನ್ನಡದ ಆಸ್ತಿ ಮಾಸ್ತಿಯವರ ಹರಿತವಾದ ಸಂಭಾಷಣೆಗಳು, ಕೆ ಎಂ ಪ್ರಕಾಶ್‌ ರವರ ಸಂಕಲನ, ಜಡೇಶ್‌ ಹಾಗೂ ಇಡೀ ತಂಡದ ಪರಿಶ್ರಮ ತೆರೆಯ ಮೇಲೆ ಎದ್ದು ಕಾಣಿಸುತ್ತಿದೆ.'

Actor Sharan Reacted On Challenging Star Darshans Kaatera Movie Success

ನಟ & ನಟಿಯರ ಬಗ್ಗೆ ಮೆಚ್ಚುಗೆ

'ಇನ್ನು ತಾರಾಗಣ ಅನನ್ಯ! ಪ್ರತಿಭಾವಂತರ ಸಮ್ಮಿಲನ. ನಮ್ಮ ಶೃತಿ ಇರಬಹುದು, ಅವಿನಾಶ್‌ ರವರು, ಅಚ್ಯುತ್‌ ರವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ಮಿನುಗುತ್ತಾರೆ. ಅದರಲ್ಲೂ ನಮ್ಮ ಬಿರಾದಾರ್‌ ಅವರ ಪಾತ್ರ‌ ಬಹಳ ಮೆಚ್ಚುಗೆಯಾಗುವಂತಹದ್ದು.'

ಮಾಲಾಶ್ರೀ ಪುತ್ರಿಯ ಬಗ್ಗೆ ಮಾತು

'ಇನ್ನೊಂದು ಮನಸ್ಸಿಗೆ ಹತ್ತಿರವಾಗುವಂತಹ ಅಂಶವೆಂದರೆ ಬಹಳಷ್ಟು ರಂಗ ಪ್ರತಿಭೆಗಳ ಅನಾವರಣ, ತಮ್ಮ ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. Last but not the least, ಆರಾಧನಾ ರಾಮ್ ಮೊದಲನೇ ಸಿನಿಮಾದಲ್ಲಿಯೇ ಸ್ಟಾರ್‌ ನಟಿಯಾಗಿ ಹೊರಹೊಮ್ಮಿದ್ದಾರೆ. ನಮ್ಮ ಕನ್ನಡ ಚಿತ್ರರಂಗಕ್ಕೆ ಒಬ್ಬ ಭರವಸೆಯಯುಳ್ಳ ನಾಯಕ ನಟಿ ದೊರಕಿದ್ದಾರೆ ಕಾಟೇರ ಚಿತ್ರದ ಮೂಲಕ. Welcome to Sandalwood.'

'ಮತ್ತೊಮ್ಮೆ ಇಡೀ ಕಾಟೇರ ಚಿತ್ರ ತಂಡಕ್ಕೆ ಶುಭ ಹಾರೈಸುತ್ತ, ಇಂತಹ ಸದಭಿರುಚಿಯ ಚಿತ್ರ ನೀಡಿದ್ದಕ್ಕಾಗಿ ಧನ್ಯವಾದಗಳು.' ಎಂದು ಬರೆದುಕೊಂಡು ಕಾಟೇರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ನಟ ಶರಣ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+