Hanumantha: ಹನುಮಂತನ ಮನೆಗೆ ರವಿಮಾಮ- ಕೊಟ್ಟ ಗಿಫ್ಟ್ ಏನು?
ಬಿಗ್‌ಬಾಸ್ ಸ್ಪರ್ಧಿ ಹನುಮಂತ ಗೆದ್ದು ಟ್ರೋಫಿಯನ್ನು ಹಿಡಿದುಕೊಂಡು ಹುಟ್ಟೂರಿಗೆ ಹೋಗಿದ್ದಾರೆ. ಇವರಿಗೆ ಅನೇಕ ಸೆಲೆಬ್ರಿಟಿಗಳು ಸಪೋರ್ಟ್ ಮಾಡಿ ಓಟ್ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಹೀಗೆ ಹನುಮಂತನಿಗೆ ಓಟ್ ಮಾಡಿದ ಸೆಲೆಬ್ರಿಟಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. ಅಲ್ಲದೆ ಅವರ ಮನೆಗೆ ಹೋಗಿ ಶುಭಾಶಯ ಕೋರಿ ಸನ್ಮಾನ ಮಾಡುತ್ತಿರುವುದು ಕಂಡು ಬಂದಿದೆ. ಹಾಗಾದರೆ ಹನುಮಂತನ ಮನೆಗೆ ಹೋದ ಆ ಸೆಲೆಬ್ರಿಟಿ ಯಾರು? ಹನುಮಂತನಿಗೆ ನೀಡಿದ ಉಡುಗೊರೆ ಏನು? ಎಲ್ಲವನ್ನೂ ತಿಳಿಯೋಣ.
ಬಿಗ್‌ಬಾಸ್ ಮನೆಯಿಂದ ಹೊರಬಂದ ಹನುಮಂತ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಅಲ್ಲೂ ಕೂಡ ಸಾಕಷ್ಟು ಜನ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ. ಈ ನಡುವೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹನುಮಂತನ ಮನೆಗೆ ಭೇಟಿ ನೀಡಿ ಶುಭ ಕೋರಿದ್ದಾರೆ. ಜೊತೆಗೆ ದುಬಾರಿ ಗಿಫ್ಟ್ ಅನ್ನೂ ಕೂಡ ಕೊಟ್ಟಿದ್ದಾರೆ.

ಹನುಮಂತನಿಗೆ ರವಿಚಂದ್ರನ್ ಸಪೋರ್ಟ್
ಬಿಗ್‌ಬಾಸ್ ಮನೆಯಲ್ಲಿ ಇರುವಾಗ ಸ್ಯಾಂಡಲ್‌ವುಡ್ ಹಿರಿಯ ನಟ ರವಿಚಂದ್ರನ್ ಹನುಮಂತನಿಗೆ ಸಪೋರ್ಟ್ ಮಾಡಿದ್ದರು. ಹನುಮಂತ ಹಾಗೂ ರವಿಚಂದ್ರನ್ ಅವರ ನಡುವಿನ ಒಡನಾಟ ತುಂಬಾ ಚೆನ್ನಾಗಿ ಇದೆ. ಹಾಗಾಗಿ ಬಿಗ್‌ಬಾಸ್ ಮನೆಗೆ ಹೋಗುವ ಹನುಮಂತನಿಗೆ ನಟ ರವಿಚಂದ್ರನ್ ಸಪೋರ್ಟ್ ಮಾಡುವುದಾಗಿ ಹೇಳಿದ್ದರು. ಹಾಗಾಗಿ ರವಿಚಂದ್ರನ್ ಅವರು ಹನುಮಂತನಿಗೆ ಓಟ್ ಮಾಡಿ ವಿನ್ ಆಗಲಿ ಎಂದು ಹಾರೈಸಿದ್ದರು.
ಹಳ್ಳಿ ಪ್ರತಿಭೆ ಗೆಲ್ಲಬೇಕು ಅನ್ನೋದು ರವಿಚಂದ್ರನ್ ಅವರ ಆಸೆಯಾಗಿತ್ತು. ಹೀಗೆ ಹಳ್ಳಿಯಿಂದ ಬಂದ ಹನುಮಂತನಿಗೆ ಹಲವಾರು ಸೆಲೆಬ್ರಿಟಿಗಳು ಮತ ನೀಡಿ ಗೆಲ್ಲಿಸಿದ್ದಾರೆ. ಇದೀಗ ಹನುಮಂತ ಗೆಲುವಿನ ಬಳಿಕ ತುಂಬಾ ಜನ ಸೆಲೆಬ್ರಿಟಿಗಳು ವಿಶ್ ಮಾಡಿದ್ದರು.
ಹನುಮಂತನಿಗೆ ದುಬಾರಿ ಗಿಫ್ಟ್ ಕೊಟ್ಟ ರವಿಚಂದ್ರನ್
ಹಾಗೇ ಹನುಮಂತ ಅವರ ಮನೆಗೆ ಹೋಗಿ ನಟ ರವಿಂದ್ರನ್ ಅವರು ವಿಶ್ ಮಾಡಿದ್ದಾರೆ. ಅಲ್ಲದೆ ಸಿನಿಮಾವೊಂದರಲ್ಲಿ ನಟಿಸಲು ಅವಕಾಶವನ್ನು ಕೊಡುತ್ತೇವೆ ಎಂದು ಭರವಸೆಯನ್ನೂ ಕೊಟ್ಟಿದ್ದಾರೆ. ರವಿಚಂದ್ರನ್ ಅವರ ಈ ಒಳ್ಳೆಯ ಗುಣಕ್ಕೆ ಅನೇಕ ಅಭಿಮಾನಿಗಳು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಿಗ್‌ಬಾಸ್ ಮನೆಗೆ ಹೋಗಿದ್ದ ಹನುಮಂತನಿಗೆ ರವಿಚಂದ್ರನ್ ಅವರಿಂದ ದುಬಾರಿ ಗಿಫ್ಟ್ ಕೂಡ ಸಿಕ್ಕಿದೆ. ಈ ಗಿಫ್ಟ್ ನೋಡಿ ಅನೇಕರು ಖುಷಿಪಟ್ಟಿದ್ದಾರೆ.
ಹನುಮಂತನ ಹವಾ
ಬಿಗ್‌ಬಾಸ್ ಮುಗಿದ ಬಳಿಕ ಹನುಮಂತ ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದಲ್ಲಿ ತಮ್ಮದೇ ಆದ ಡೈಲಾಗ್ ಹೊಡೆಯುವ ಮೂಲಕ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ನಿವೇದಿತಾ, ಅನುಪಮಾ, ರಚಿತಾ ಹೀಗೆ ಹನುಮಂತನ ಡೈಲಾಗ್‌ಗಳಿಗೆ ಕೌಂಟರ್ ಕೊಡಲು ಆಗದೆ ಸೈಲೆಂಟ್ ಆಗಿದ್ದಾರೆ. ಹನುಮಂತನ ಮಾತು, ಕಾಮಿಡಿ, ಹಾಡು, ಡೈಲಾಗ್ ಎಲ್ಲವೂ ಮತ್ತೆ ಜನರಿಗೆ ಕೇಳುವ ಅವಕಾಶ ಸಿಕ್ಕಿದ್ದು ಜನ ಖುಷಿ ಆಗಿದ್ದಾರೆ. ಹೀಗಾಗಿ ಕಾರ್ಯಕ್ರಮ ಜನ ಮೆಚ್ಚುಗೆಯನ್ನು ಪಡೆಯುತ್ತಿದೆ.












Click it and Unblock the Notifications