Ravichandran: ನಟಿಯರು ಗ್ಲಾಮರ್ ಆಗಿದ್ದರಷ್ಟೇ ನನ್ನ ಕಣ್ಣು ಬೀಳೋದು ಎಂದ ರವಿಚಂದ್ರನ್... !
Ravichandran: ನಟ & ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಿನಿಮಾದಲ್ಲಿ ನಟಿಯರ ಬಗ್ಗೆ ಹಾಗೂ ಅವರ ಕಾಲದ ಸಿನಿಮಾಗಳ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಮ್ಮ ಕಾಲದಲ್ಲಿ ಸಿನಿಮಾಗಳನ್ನು ಯಾವ ರೀತಿ ಮಾಡ್ತಿದ್ವಿ ಹಾಗೂ ಆ ಸಿನಿಮಾಗಳನ್ನು ಯಾವ ರೀತಿ ರಿಲೀಸ್ ಮಾಡುತ್ತಿದ್ದೇವು & ನಟಿ ಗ್ಲಾಮರಸ್ ಆಗಿದ್ರೆ ಮಾತ್ರ.... ಅಂತ ಕೆಲವೊಂದು ವಿಚಾರಗಳನ್ನು ಅವರು ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ರವಿಚಂದ್ರನ್ ಅವರನ್ನು ರವಿ ಮಾಮ ಅಂತಲೂ ಕರೆಯುವುದಿದೆ. ಅವರ ಸಿನಿಮಾಗಳಲ್ಲಿ ನಟಿಯರನ್ನು ಅತ್ಯಂತ ಆಕರ್ಷಕವಾಗಿ ಹಾಗೂ ಉತ್ತಮವಾಗಿ ತೋರಿಸುತ್ತಿದ್ದರು ಅಂತ ಅವರ ಜೊತೆ ನಟಿಸಿರುವ ಹಲವು ನಟಿಯರು ಹೇಳಿರುವುದು ಇದೆ. ಇದೀಗ ಅವರೇ ಈ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ನಟಿಯರು ಹಾಗೂ ಗ್ಲಾಮರ್ ಬಗ್ಗೆ ಅವರು ಮೊದಲ ಬಾರಿ ಬಹಿರಂಗವಾಗಿಯೇ ಕೆಲವೊಂದು ಇಂಟ್ರಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅವರು ತೆರೆಯ ಮೇಲೆ ಹಾಗೂ ಸಿನಿಮಾಗಳಲ್ಲಿ ಅತ್ಯಂತ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವುದೇ ಹೆಚ್ಚು.

ಇದೀಗ ಸೂತ್ರಧಾರಿ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಅವರು ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಾವೆಲ್ಲಾ ಸಿನಿಮಾಗಳ ಬಗ್ಗೆ ಮಾತನಾಡುವಾಗ ಎಲ್ಲೂ ಸಿನಿಮಾಗಳ ಬಗ್ಗೆ ಮಾತನಾಡಿಯೇ ಇಲ್ಲ. ಸಿನಿಮಾ ಮಾಡುತ್ತಿದ್ವಿ. ಅದನ್ನು ಬಿಡುಗಡೆ ಮಾಡಲಾಗುತ್ತಿತ್ತು. ಅದನ್ನು ಜನ ನೋಡುತ್ತಿದ್ದರು. ಅದನ್ನು ಇಷ್ಟಪಟ್ಟು ಆ ಸಿನಿಮಾವನ್ನು ಮೇಲಕ್ಕೆ ಎತ್ತುಕೊಂಡು ಹೋಗುತ್ತಿದ್ದರು. ನಾವೆಲ್ಲೂ ಆಗೆಲ್ಲಾ ಸಿನಿಮಾಗಳ ಬಗ್ಗೆ ಮಾತನಾಡಿದ್ದೇ ಇಲ್ಲ ಅಂತ ಅವರು ಹೇಳಿದ್ದಾರೆ.
ಸಿನಿಮಾವನ್ನು ಜನ ಎತ್ತುಕೊಂಡು ಹೋಗಬೇಕು.. ನಾವು ಕಷ್ಟಪಟ್ಟು ಸಿನಿಮಾವನ್ನು ಜನರ ಮುಂದೆ ಇರಿಸಬೇಕು ಅಂತ ಹೇಳಿದ್ದಾರೆ. ಚಂದನ್ ಶೆಟ್ಟಿ ಬಗ್ಗೆಯೂ ಅವರು ಈ ಸಂದರ್ಭದಲ್ಲಿ ಮಾತನಾಡಿದ್ದಾರೆ. ಇದು ಚಂದನ್ ಶೆಟ್ಟಿ ಅವರ ಪೂರ್ಣ ಪ್ರಮಾಣದ ಸಿನಿಮಾ ಅಂತ ಗೊತ್ತಿರಲಿಲ್ಲ. ಅವರು ಹೇಳಿದ ಮೇಲೆಯೇ ಗೊತ್ತಾಗಿದ್ದು. ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಸಿನಿಮಾವೊಂದರಲ್ಲಿ ಹೀರೋವಾಗಿ ನಟಿಸಿರುವುದು ಇದೇ ಮೊದಲ ಸಿನಿಮಾ ಅಂತ ಅವರು ಹೇಳಿದರು. ಚಂದನ್ ಶೆಟ್ಟಿ ಅವರಿಗೆ ಒಳ್ಳೆಯದಾಗಲಿ ಅಂತ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಮುಂದುವರಿದು ನಟಿ ಅಪೂರ್ವ ಅವರ ಬಗ್ಗೆ ಮಾತನಾಡಿದ್ದಾರೆ. ಅಪೂರ್ವ ಗ್ಲಾಮರ್ ಆಗಿದ್ದಾರೆ. ಅವರು ಗ್ಲಾಮರ್ ಆಗಿರುವುದಕ್ಕೆ ಅಲ್ವಾ ರವಿಚಂದ್ರನ್ ಕಣ್ಣು ಬಿದ್ದಿರೋದು.. ಇಲ್ಲ ಅಂದರೆ ಎಲ್ಲಿ ಬೀಳುತ್ತೆ ಅಂತ ಹಾಸ್ಯ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಒಂದು ಕಾಲದಲ್ಲಿ ನಟ ರವಿಚಂದ್ರನ್ ಹಾಗೂ ಅವರೊಂದಿಗೆ ನಟಿಸುತ್ತಿದ್ದ ನಟಿಯರ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿತ್ತು. ರವಿಚಂದ್ರನ್ ಅವರು ಅವರ ಸಿನಿಮಾಗಳಲ್ಲಿ ನಟಿಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದರು. ಅವರ ಸಿನಿಮಾಗಳಲ್ಲಿ ಬಟ್ಟೆ ಹಾಗೂ ಗ್ಲಾಮರಸ್ ಆಗಿ ತೋರಿಸುತ್ತಿದ್ದರು ಎನ್ನುವ ಮಾತಿದೆ.












Click it and Unblock the Notifications