Raja Vardan: ರಾಗಿಣಿ ಜೊತೆಗಿನ ಮುದ್ದಾದ ಫೋಟೋ ಶೇರ್‌ ಮಾಡಿದ ನಟ ರಾಜವರ್ಧನ್‌

ಕನ್ನಡ ಚಿತ್ರರಂಗದ ಹಿರಿಯ ನಟ ಡಿಂಗ್ರಿ ನಾಗರಾಜ್‌ ಅವರ ಪುತ್ರ ರಾಜವರ್ಧನ್‌ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಒಂದಾದ ಮೇಲೊಂದು ಸಿನಿಮಾ ನೀಡುತ್ತಿದ್ದಾರೆ. ಇದೀಗ ರಾಜವರ್ಧನ್ ಅಭಿನಯದ ಗಜರಾಮ ಸಿನಿಮಾ ತೆರೆ ಕಂಡಿದ್ದು, ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಕುಸ್ತಿ ಪಟುವಿನ ಕಥಾ ಹಂದರ ಹೊಂದಿರುವ ಗಜರಾಮ ಸಿನಿಮಾದಲ್ಲಿ ರಾಜವರ್ಧನ್ ಜೊತೆ ಕಬೀರ್ ಸಿಂಗ್, ತಪಸ್ವಿನಿ ಮುಂತಾದವರು ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದು, ಸ್ಯಾಂಡಲ್‌ವುಡ್‌ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕೂಡ ಈ ಸಿನಿಮಾದಲ್ಲಿ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಾಗಿಣಿ ದ್ವಿವೇದಿ ಹೆಜ್ಜೆ ಹಾಕಿರುವ ಗಜರಾಮ ಸಿನಿಮಾದ ಸಾರಾಯಿ ಶಾಂತಮ್ಮ ಹಾಡು ಈಗಾಗಲೇ ಸಖತ್ ಹಿಟ್ ಆಗಿದೆ.

Actor Rajvardhan Shares Adorable Photos with Actress Ragini Dwivedi

ಈ ಖುಷಿಯಲ್ಲಿ ರಾಜವರ್ಧನ್ ರಾಗಿಣಿ ದ್ವಿವೇದಿ ಜೊತೆಗಿರುವ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದು, ನಟಿ ರಾಗಿಣಿಯವರ ಬಗ್ಗೆ ಒಂದಿಷ್ಟು ಮೆಚ್ಚುಗೆಯ ಮಾತುಗಳನ್ನು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮ ಬೆಂಬಲಕ್ಕೆ ನಾನು ಎಷ್ಟು ಕೃತಜ್ಞನಾಗಿದ್ದೇನೆಂದು ನಿಮಗೆ ತಿಳಿಸಲು ಬಯಸುತ್ತೇನೆ.

ಈ ಪ್ರಯಾಣದಲ್ಲಿ ನನಗೆ ದೊರೆತ ನಿಮ್ಮ ಬೆಂಬಲಕ್ಕೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನೀವು ನನಗೆ ಸಹನಟಿ ಮಾತ್ರವಲ್ಲದೇ ಪ್ರೀತಿಯ ಸ್ನೇಹಿತೆಯಾಗಿದ್ದಕ್ಕೆ ಧನ್ಯವಾದಗಳು. ನನ್ನ ಈ ಪಯಣಕ್ಕೆ ನಿಮ್ಮ ಬೆಂಬಲವನ್ನು ಪದಗಳು ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ರಾಜವರ್ಧನ್ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ರಾಜವರ್ಧನ್ ಪೋಸ್ಟ್‌ಗೆ ರಾಗಿಣಿ ದ್ವಿವೇದಿ ಪ್ರತಿಕ್ರಿಯಿಸಿದ್ದು, MASSIVE STAR ಎಂದು ರಾಜವರ್ಧನ್ ಅವರನ್ನು ಕರೆದಿದ್ದಾರೆ. ಅಲ್ಲದೇ ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೀರಿ. ನಿಮಗೆ ಶುಭವಾಗಲಿ, ಎಲ್ಲರ ಪ್ರೀತಿ ಸಿಗಲಿ ಎಂದು ಹಾರೈಸುತ್ತೇನೆ. ಇದು ಕೇವಲ ಆರಂಭ ಎಂದು ಗಜರಾಮ ಸಿನಿಮಾಗೆ ರಾಗಿಣಿ ದ್ವಿವೇದಿ ಶುಭಾಶಯ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+