Nagarjuna Akkineni: ಅಂಗರಕ್ಷಕರು ನಿರ್ದಯವಾಗಿ ತಳ್ಳಿದ್ದ ಅಭಿಮಾನಿಯನ್ನು ಭೇಟಿಯಾದ ಸ್ಟಾರ್ ನಟ, ಮುಂದೆ ಆಗಿದ್ದೇನು?

ಈ ವಾರದ ಆರಂಭದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ವಿಡಿಯೋವೊಂದು ಸಕತ್ ವೈರಲ್ ಆಗಿದೆ. ಅವರ ಬಾಡಿಗಾರ್ಡ್‌ಗಳು ಒಬ್ಬ ಅಭಿಮಾನಿಯನ್ನು ನಿರ್ದಯವಾಗಿ ತಳ್ಳಿದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ಟೀಕೆಗೆ ಒಳಗಾಗಿದ್ದರು. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ತೆಲುಗು ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಅವರು ತಮಿಳು ನಟ ಧನುಷ್ ಜೊತೆಗೆ ಹೋಗುತ್ತಿದ್ದರು. ಈ ವೇಳೆ ವಿಶೇಷ ಚೇತನ ಅಭಿಮಾನಿಯೊಬ್ಬರು ನಾಗಾರ್ಜುನ ಅವರನ್ನು ಮಾತನಾಡಿಸಲು ಹತ್ತಿರ ಬಂದಿದ್ದರು. ಆಗ ನಟನ ಅಂಗರಕ್ಷಕ ಅವರನ್ನು ನಿರ್ದಯವಾಗಿ ಪಕ್ಕಕ್ಕೆ ತಳ್ಳಿದರು. ಅಭಿಮಾನಿ ನೆಲಕ್ಕೆ ಬಿದ್ದಿದ್ದರು. ಈ ವಿಡಿಯೋ ಸಕತ್ ಟೀಕೆಗೆ ಒಳಗಾಗಿತ್ತು. ಬಳಿಕ ನಟ ಕ್ಷಮೆ ಕೇಳಿದ್ದರು.

Actor Nagarjuna Akkineni meets specially abled fan who was rudely pushed away by his bodyguard

ಅಂದು ಕ್ಷಮೆ ಕೇಳಿ ಇಂದು ಅಭಿಮಾನಿಯನ್ನು ಭೇಟಿಯಾದ ನಟ

ಇನ್ನು, ತೆಲುಗು ಸ್ಟಾರ್ ನಾಗಾರ್ಜುನ ಅವರು ಬುಧವಾರ (ಜೂನ್ 26) ಮತ್ತೆ ತಮ್ಮ ಅಂಗರಕ್ಷಕರಿಂದ ತಳ್ಳಲ್ಪಟ್ಟ ವಿಶೇಷ ಚೇತನ ಅಭಿಮಾನಿಯನ್ನು ಭೇಟಿಯಾಗಿದ್ದಾರೆ. ಆತನನ್ನು ಅಪ್ಪಿಕೊಂಡು ಫೋಟೋಗೆ ಫೋಸ್ ನೀಡಿದ್ದಾರೆ. ಅಭಿಮಾನಿ ಕ್ಷಮೆ ಕೇಳಿದ್ದಾರೆ ಅದಕ್ಕೆ, ಅದರಲ್ಲಿ ನಿಮ್ಮ ತಪ್ಪಿಲ್ಲ ಎಂದು ಹೇಳಿದ್ದಾರೆ. ನಾಗಾರ್ಜುನ ಅವರು ತಮ್ಮ ಅಭಿಮಾನಿಯನ್ನು ಭೇಟಿಯಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮುಂಬೈನಲ್ಲಿ 'ಕುಬೇರ' ಚಿತ್ರದ ಶೂಟಿಂಗ್‌ನಲ್ಲಿದ್ದ ನಾಗಾರ್ಜುನ ಅವರು ಜೂನ್ 26 ರಂದು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ವಿಮಾನ ನಿಲ್ದಾಣದಲ್ಲಿ ತಮ್ಮ ಕಾರಿನಿಂದ ಇಳಿದ ಕೂಡಲೇ ತಮ್ಮ ಅಭಿಮಾನಿಯನ್ನು ಸ್ವಾಗತಿಸಿದ್ದಾರೆ. ಅವರನ್ನು ತಬ್ಬಿಕೊಂಡು ಚಿತ್ರಗಳಿಗೆ ಪೋಸ್ ನೀಡಿದ್ದಾರೆ.

ಕೆಲವು ಅಭಿಮಾನಿಗಳು ಈ ಕ್ಲಿಪ್ ನೋಡಿ ಹರ್ಷ ವ್ಯಕ್ತಪಡಿಸಿ, ನಟನನ್ನು ಶ್ಲಾಘಿಸಿದ್ದಾರೆ. ವಿಡಿಯೋಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆದಾರರು "ಇದು ಸಾಮಾಜಿಕ ಮಾಧ್ಯಮದ ಶಕ್ತಿ" ಎಂದು ಬರೆದಿದ್ದಾರೆ. ನಾಗಾರ್ಜುನರನ್ನು ಶ್ಲಾಘಿಸಿ, "ನಾಗರ್ಜುನ ತುಂಬಾ ವಿನಮ್ರ ಮತ್ತು ಡೌನ್ ಟು ಅರ್ಥ್ ವ್ಯಕ್ತಿ" ಎಂದು ಹಲವರು ಬರೆದಿದ್ದಾರೆ.

ಆದರೆ, ಮತ್ತೆ ಕೆಲಸವರು ಇದೆಲ್ಲಾ ಪಿಆರ್ ಸ್ಟಂಟ್ ಎಂದಿದ್ದಾರೆ. ಹಳೆಯ ವೀಡಿಯೋ ವೈರಲ್ ಆದ ಕಾರಣ ಈಗ ಇದೆಲ್ಲವನ್ನೂ ಮಾಡುತ್ತಿದ್ದಾರೆ. ಸುಮ್ಮನೆ ತೋರಿಸಿಕೊಳ್ಳಲು ಇವತ್ತು ಇದು ಮಾಡಿದ್ದಾರೆ. ಘಟನೆ ನಡೆದ ಆ ಕ್ಷಣದಲ್ಲಿ ಅವರು ಏಕೆ ವಿಷಾದ ವ್ಯಕ್ತಪಡಿಸಲಿಲ್ಲ. ಆ ಬಡ ಹುಡುಗ ಅಂಗವಿಕಲನಾಗಿದ್ದರೂ ಅವರು ನೋಡಿಲ್ಲ ಎಂದು ಟೀಕಿಸಿದ್ದಾರೆ.

ಜೂನ್ 23 ರಂದು, ನಟ ಜೊತೆಗೆ ಫೋಟೋತೆಗೆದುಕೊಳ್ಳಲು ಪ್ರಯತ್ನಿಸಿದ ಅಂಗವಿಕಲ ಅಭಿಮಾನಿಯನ್ನು ಅಂಗರಕ್ಷಕ ಒರಟಾಗಿ ತಳ್ಳಿದ್ದರು. ಅಂದು ನಟ ನಾಗಾರ್ಜುನ, ಧನುಷ್ ಮತ್ತು ಅವರ ಪುತ್ರರು 'ಕುಬೇರ' ಚಿತ್ರೀಕರಣಕ್ಕಾಗಿ ಮುಂಬೈಗೆ ಆಗಮಿಸಿದ್ದರು. ವಿಡಿಯೋ ವೈರಲ್ ಆದ ಕೂಡಲೇ ನಾಗಾರ್ಜುನ್ ಕ್ಷಮೆಯಾಚಿಸಿದ್ದು, ಮುಂದೆ ಹೀಗಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+