Madenur Manu: ನಟ ಮಡೆನೂರು ಮನು ಕೇಸ್ ಬಗ್ಗೆ ಶಾಕಿಂಗ್ ವಿಚಾರ ತಿಳಿಸಿದ ಪತ್ನಿ
ಕಿರುತೆರೆ ನಟಯೊಬ್ಬರಿಗೆ ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪದ ಮೇರೆಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೇಸ್‌ನ ತನಿಖೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಮಡೆನೂರ್ ಮನು ನಾಯಕನಾಗಿ ನಟಿಸಿರುವ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾ ಕೂಡ ಮೇ 23ರಂದು ಬಿಡುಗಡೆಯಾಗಿದ್ದು, ಇದೇ ಹೊತ್ತಿನಲ್ಲಿ ಅವರ ಮೇಲೆ ಈ ಆರೋಪ ಹಾಗೂ ಬಂಧನವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮನು ಅವರ ಮೇಲಿನ ಆರೋಪಗಳ ಅವರ ಪತ್ನಿ ಪ್ರತಿಕ್ರಿಯಿಸಿದ್ದು, ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ನನ್ನ ಗಂಡ ಮನು ಮೂರು ವರ್ಷದಿಂದ ಕಷ್ಟ ಪಟ್ಟು ಈ ಸಿನಿಮಾ ಮಾಡಿದ್ದಾರೆ. ಈ ಸಿನಿಮಾಗಾಗಿ ಟಾರ್ಗೆಟ್ ಇಟ್ಕೊಂಡು ಹೀಗೆ ಮಾಡಿದ್ದಾರೆ. ಇಂದು ಈ ಸಿನಿಮಾ ರಿಲೀಸ್ ಆಗಿದೆ, ಆದ್ರೆ ಅದನ್ನು ನೋಡಲು ಅವರೇ ಇಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ನನಗೂ ಈ ವಿಚಾರ ತುಂಬಾ ನೋವು ಕೊಡ್ತಿದೆ. ನನ್ನ ಗಂಡ ಈ ಸಿನಿಮಾಗಾಗಿ ಎಷ್ಟೆಲ್ಲ ಕಷ್ಟ ಪಟ್ಟರು ಅನ್ನೋದು ನಮಗೆ ಮಾತ್ರ ಗೊತ್ತು. ಈಗ ಅವರೇ ಇಲ್ಲ, ಇದೆಲ್ಲ ಬೇಕಿತ್ತಾ? ಎಂದಿದ್ದಾರೆ.

ಒಂದು ವೇಳೆ ನನ್ನ ಗಂಡ ಹಾಗೇನಾದ್ರೂ ಮಾಡಿದ್ರೆ ಸಿನಿಮಾ ಬಿಡುಗಡೆಗೂ ಮುಂಚೆ ಅಥವಾ ರಿಲೀಸ್ ಆದ ಮೇಲೆ ಆರೋಪ ಮಾಡಬಹುದಿತ್ತಲ್ವಾ? ರಿಲೀಸ್ ಟೈಮಲ್ಲೇ ಯಾಕೆ ಈ ರೀತಿ ಮಾಡಿದ್ದಾರೆ. ನಾಳೆ ಸಿನಿಮಾ ರಿಲೀಸ್ ಇದೆ ಎಂಬ ಸಮಯದಲ್ಲೇ ಈ ರೀತಿ ಮಾಡಿದ್ದಾರೆ ಅಂದ್ರೆ ಇದು ಷಡ್ಯಂತ್ಯ ಅಲ್ಲದೆ ಇನ್ನೇನು? ಎಂದು ದೂರಿದ್ದಾರೆ. ನನ್ನ ಗಂಡ ಯಾವುದೇ ತಪ್ಪು ಮಾಡಿಲ್ಲ. ಇದನ್ನು ಸಾಕ್ಷಿ ಸಮೇತವಾಗಿ ಏನೇನು ಪ್ರೂವ್ ಮಾಡಬೇಕೋ ಮಾಡ್ತೀವಿ. ನಾನು ನನ್ನ ಗಂಡನ್ನ ಎಲ್ಲೂ ಬಿಟ್ಟುಕೊಡಲ್ಲ. ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದಿದ್ದಾರೆ.
ನನ್ನ ಗಂಡನನ್ನ ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ. ಬೇರೆಯವರು ಹೇಗೆ ಮಾಡಿಕೊಂಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಪತಿ ಮನು ಮೇಲೆ ಆಕೆ ಏನೆಲ್ಲ ಆರೋಪಗಳನ್ನು ಮಾಡಿದ್ದಾರೋ ಅದೆಲ್ಲದಕ್ಕೂ ಕೋರ್ಟ್‌ನಲ್ಲೇ ಸಾಕ್ಷಿ ಸಮೇತ ಮಾತನಾಡುತ್ತೇವೆ ಎಂದಿದ್ದಾರೆ. ಅವರು ಜೈಲಿನಲ್ಲಿದ್ದಾರೆ. ಪರದೆ ಮೇಲೆ ಅವರನ್ನು ನೋಡಿದಾಗ ಕಣ್ಣೀರು ಬಂತು. ವೈಯಕ್ತಿಕ ವಿಚಾರಗಳು ಏನೇ ಇರಲಿ, ಈ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ನನ್ನ ಗಂಡನನ್ನ ಇಲ್ಲಿವರೆಗೆ ಕೈಹಿಡಿದು ನಡೆಸಿದ್ದೀರಿ. ಈಗ ಕೈಬಿಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಯೂಟರ್ನ್ ಹೊಡೆದ ಸಂತ್ರಸ್ತೆ
ನಿನ್ನೆ ಮನು ಮೇಲೆ ಸರಣಿ ಆರೋಪಗಳನ್ನು ಮಾಡಿದ್ದ ಸಂತ್ರಸ್ತೆ ಇಂದು ದಿಢೀರ್ ಯೂಟರ್ನ್ ಹೊಡೆದಂತೆ ಮಾತನಾಡಿದ್ದಾರೆ. ನಾನು ಯಾವುದೇ ಒತ್ತಾಯಪೂರ್ವಕವಾಗಿ ದೂರು ಕೊಟ್ಟಿಲ್ಲ. ನಾನು ಸತ್ತರೂ ಯಾರು ಕಾರಣರಲ್ಲ. ಇದು ನನ್ನ ಸ್ವಂತ ಕಾರಣ, ನನ್ನ ಮನು ನಡುವೆ ಒಂದಷ್ಟು ವಿಚಾರಗಳಿಗೆ ಜಗಳ, ಗೊಂದಲಗಳಿತ್ತು. ಆದರೆ ಅವರ ಸಿನಿಮಾ ನಿರ್ಮಾಪಕರಿಗೆ ಮೆಸೇಜ್ ಮಾಡಿದ್ದು ತಪ್ಪು. ನಮ್ಮಿಬ್ಬರ ನಡುವಿನ ಜಗಳ ನಮ್ಮಲ್ಲೇ ಇರಬೇಕಿತ್ತು. ಸಿನಿಮಾಗೆ ತೊಂದರೆ ನೀಡುವ ಉದ್ದೇಶ ನನ್ನದಾಗಿರಲಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications