Darshan Thoogudeepa: ದರ್ಶನ್ ತೂಗುದೀಪ್‌ರ ಅಭಿಮಾನಿಗಳ ಬಗ್ಗೆ ಕಿಚ್ಚ ಸುದೀಪ್ ಹೇಳಿಕೆ ಮೂಡಿಸಿದೆ ಸಂಚಲನ!

ದರ್ಶನ್ ತೂಗುದೀಪ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿ, ಪರಪ್ಪನ ಅಗ್ರಹಾರ ಜೈಲು ಸೇರಿದ ನಂತರ ಪರಿಸ್ಥಿತಿ ಬಿಗಡಾಯಿಸಿದೆ. ಅದರಲ್ಲೂ ಇದೀಗ, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಜೈಲಿನಿಂದ ರಿಲೀಸ್ ಹೊರಗೆ ಬರುವ ತನಕ ಯಾವುದೇ ಕನ್ನಡ ಸಿನಿಮಾ ನೋಡಲ್ಲ ಅಂತಿದ್ದಾರೆ. ಹೀಗಿದ್ದಾಗಲೇ ಕನ್ನಡ ಸಿನಿಮಾಗಳನ್ನ ಪರೋಕ್ಷವಾಗಿ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಇದೀಗ ನಟ ಕಿಚ್ಚ ಸುದೀಪ್ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿರುವ ವಿಡಿಯೋ ಫುಲ್ ವೈರಲ್ ಆಗುತ್ತಿದೆ!

ದರ್ಶನ್ ತೂಗುದೀಪ್ ಅವರು 25 ವರ್ಷದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಮ್ರಾಜ್ಯ ಕಟ್ಟಿಕೊಂಡಿದ್ದರು. ದರ್ಶನ್ ತೂಗುದೀಪ್ ಅವರ ಹೆಸರು ಕೇಳಿದ್ರೆ ಬಾಲಿವುಡ್ ಟು ಟಾಲಿವುಡ್, ಕಾಲಿವುಡ್ ಟು ಮಾಲಿವುಡ್ ನಟರು ಒಂದು ಕ್ಷಣ ಯೋಚನೆ ಮಾಡುತ್ತಿದ್ರು. ಯಾಕಂದ್ರೆ ನಮ್ಮ ಕನ್ನಡದ ನಟ ದರ್ಶನ್ ತೂಗುದೀಪ್ ಸಿನಿಮಾಗಳು ಆ ಮಟ್ಟಿಗೆ ಹವ ಇಟ್ಟಿದ್ದವು. ನಟ ದರ್ಶನ್ ಅವರ ಸಿನಿಮಾಗಳ ಎದುರು ಪರಭಾಷೆ ಸಿನಿಮಾಗಳನ್ನ ರಿಲೀಸ್ ಮಾಡಲು ಪರಭಾಷಿಕರು ಅತ್ತ ಇತ್ತ ಯೋಚಿಸುವ ಪರಿಸ್ಥಿತಿ ಇತ್ತು. ಹೀಗಿದ್ದಾಗಲೇ ನಡೆಯಬಾರದ ದುರಂತ ಒಂದು ಇದೀಗ ನಡೆದು ಹೋಗಿದೆ.

Actor Kiccha Sudeep Is Said This About Darshan Thoogudeepa Fans Challenge

ಕಿಚ್ಚ ಸುದೀಪ್ ಹೇಳಿದ್ದು ಏನು?

ದರ್ಶನ್ ತೂಗುದೀಪ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ, ಪರದಾಡುವ ಸ್ಥಿತಿ ಬಂದಿದೆ. ಪವಿತ್ರಾ ಗೌಡಗೆ ಕೆಟ್ಟದಾಗಿ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಕಾರಣ ರೇಣುಕಾ ಸ್ವಾಮಿ ಕೊಲೆ ಮಾಡಿದ್ದಾರೆ ದರ್ಶನ್ & ಸ್ನೇಹಿತರು ಎಂಬ ಆರೋಪವಿದೆ. ಹೀಗಿದ್ದಾಗ ದರ್ಶನ್ ಅವರ ಅಭಿಮಾನಿಗಳು ಹೊಸ ಶಪಥ ಮಾಡಿದ್ದು, ತಮ್ಮ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ಆದ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿ ಬರುವ ತನಕ ಬೇರೆ ಯಾವುದೇ ಕನ್ನಡ ಸಿನಿಮಾ ನೋಡಲ್ಲ ಅಂತಿದ್ದಾರೆ. ಈ ಹೇಳಿಕೆಗಳ ಬೆನ್ನಲ್ಲೇ ಕಿಚ್ಚ ಸುದೀಪ್ ಅವರು ನೀಡಿದ ಪ್ರತಿಕ್ರಿಯೆ ಸಂಚಲನ ಸೃಷ್ಟಿ ಮಾಡಿದೆ! ಅಲ್ಲದೆ ಕಿಚ್ಚ ಸುದೀಪ್ ಅವರ ಹೇಳಿಕೆ ವಿಡಿಯೋ ವೈರಲ್ ಆಗ್ತಿದೆ.

ಕನ್ನಡ ಸಿನಿಮಾಗಳ ಬಗ್ಗೆ ನಟ ಸುದೀಪ್...

ನಟ ಸುದೀಪ್ ಅವರು ಇತ್ತೀಚೆಗೆ ವಿನಯ್ ರಾಜ್‌ಕುಮಾರ್ ಅಭಿನಯದ 'ಪೇಪೆ' ಚಿತ್ರ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ನಿರೂಪಕಿಯ ಮಾತುಗಳಿಂದ ಕಿಚ್ಚ ಸುದೀಪ್ ಅವರು ದಿಢೀರ್ ಕೋಪಗೊಂಡರು. ಈ ವೇಳೆ ಮಾತನಾಡಿದ ಅವರು, 'ಕನ್ನಡ ಸಿನಿಮಾ ರಂಗವನ್ನು ಉಳಿಸಿ ಅಂತಾ ಯಾರೂ ಹೇಳುವ ಅಗತ್ಯತೆ ಇಲ್ಲ, ಯಾಕಂದ್ರೆ ಕನ್ನಡ ಸಿನಿಮಾ ರಂಗವೇ ದೊಡ್ಡ ಶಕ್ತಿ. ಉತ್ತಮವಾದ ಸಿನಿಮಾಗಳನ್ನು ನಮ್ಮ ಜನರು ನೋಡೇ ನೋಡುತ್ತಾರೆ. ಯಾರೋ ಕೆಲವರು ನೋಡಲ್ಲ ಅಂದರೆ ಒತ್ತಾಯ ಬೇಡ' ಎನ್ನುವ ರೀತಿ ಮಾತನಾಡಿದರು.

ಈ ಮೂಲಕ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕನ್ನಡ ಸಿನಿಮಾಗಳನ್ನ ಬ್ಯಾನ್ ಮಾಡ್ತೀವಿ ಅಂತಾ ಗುಡುಗಿರುವ ಬಗ್ಗೆ, ಪರೋಕ್ಷ ಉತ್ತರ ನೀಡಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಅಲ್ಲದೆ, ಸುದೀಪ್ ಅವರು ನೀಡಿದ ಹೇಳಿಕೆ ವಿಡಿಯೋ ಇದೀಗ ಫುಲ್ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+