Vijayalakshmi Darshan: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೊಸ ಪೋಸ್ಟರ್ ವೈರಲ್
Vijayalakshmi Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ನಟ ದರ್ಶನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಜೈಲಿನಿಂದ ಬಿಡುಗೆ ಆದಾಗಿಂದಲೂ ತಮ್ಮ ಇನ್ಸ್ಟಾ ಖಾತೆಯಲ್ಲಿ ಒಂದಲ್ಲ ಒಂದು ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಹಾಗೆಯೇ ಇದೀಗ ಮತ್ತೊಂದು ಪೋಸ್ಟರ್ ಶೇರ್ ಮಾಡಿಕೊಂಡಿದ್ದು, ಇದು ಭಾರೀ ವೈರಲ್ ಆಗುತ್ತಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದಾಗಿನಿಂದಲೂ ಪತಿ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ವ್ರತಗಳನ್ನು ಮಾಡಿದ್ದರು. ಕೊನೆಗೂ ನಟ ದರ್ಶನ್ ಬಿಡುಗಡೆ ಆಗಿದ್ದು, ವಿಜಯಲಕ್ಷ್ಮಿ ಪಟ್ಟ ಕಷ್ಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ.

ಇನ್ನು ಪತಿ ದರ್ಶನ್ ಜೈಲಿನಿಂದ ಬಿಡುಗಡೆ ಆದಾಗಿನಿಂದಲೂ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಳ್ಳುವ ಮೂಲಕ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಹೊಸ ಲುಕ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಇದಕ್ಕೆ ಈವರೆಗೂ 47.9K ಮೆಚ್ಚುಗೆಗಳು, 464 ಕಾಮೆಂಟ್‌ಗಳು ಬಂದಿದ್ದು, 158 ಜನ ಶೇರ್ ಮಾಡಿಕೊಂಡಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಅವರು ಇದೀಗ ಇನ್ಸ್ಟಾಗ್ರಾಂನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಪರಿ ದರ್ಶನ್‌ಗೆ ಕೊಲೆ ಪ್ರಕರಣದಲ್ಲಿ ರೆಗ್ಯೂಲರ್ ಜಾಮೀನು ಸಿಕ್ಕ ಬಳಿಕ ಅವರು ರಿಲೀಫ್ ಆಗಿದ್ದಾರೆ. ಅಲ್ಲದೆ, ಆಗಿನಿಂದಲೂ ಒಂದಲ್ಲಾ ಒಂದು ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ. ಹಾಗೆಯೇ ಇದೀಗ ಹಸಿರು ಬಣ್ಣದ ಉಡುಪು ಧರಿಸಿ ಹೂವುಗಳ ಪಕ್ಕ ಕುಳಿತುಕೊಂಡು ಸ್ಮೈಲ್ ಕೊಟ್ಟಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ನಮ್ಮ ಅತ್ತಿಗೆ ಬೆಸ್ಟ್ ಅಂತೆಲ್ಲಾ ಕಾಮೆಂಟ್ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಕಲರ್‌ಫುಲ್ ಲೈಟ್ಸ್, ಗಿಡಗಳ ಪಕ್ಕದ ಸೋಫಾದಲ್ಲಿ ಕುಳಿತು ಫೋಟೋಗೆ ವಿಜಯಲಕ್ಷ್ಮಿ ದರ್ಶನ್ ಅವರು ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೇ ಜನವರಿ 14ರಂದು ದರ್ಶನ್ ಸಂಕ್ರಾಂತಿ ಹಬ್ಬವನ್ನು ಕುಟುಂಬದ ಜೊತೆ ಆಚರಣೆ ಮಾಡಿದ್ದರು. ಅಲ್ಲದೆ ಕಳೆದ ಬಾರಿ ಬಿಳಿ ಬಣ್ಣದ ಮುದ್ದಾದ ಬೆಕ್ಕಿನ ಮರಿಯನ್ನು ಎತ್ತಿಕೊಂಡು ಸಮಯ ಕಳೆಯುತ್ತಿರುವ ಪೋಸ್ಟರ್ ಹಂಚಿಕೊಂಡಿದ್ದು, ಇದು ಸಖತ್ ವೈರಲ್ ಆಗಿತ್ತು.
ಮೆರೂನ್ ಕಲರ್ ಡ್ರೆಸ್ ಧರಿಸಿದ್ದ ವಿಜಯಲಕ್ಷ್ಮಿ ಅವರು ಬೆಡ್ರೂಮ್ನಲ್ಲಿ ಮುದ್ದಾದ ಬೆಕ್ಕಿನ ಮರಿಯ ಎತ್ತಿಕೊಂಡಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಪೋಟೋದಲ್ಲಿ ಮುದ್ದಾದ ಬೆಕ್ಕಿನ ಜೊತೆ ಪೋಸ್ ಕೊಟ್ಟಿದ್ದಾರೆ. ಇದು ಸಖತ್ ಕ್ಯೂಟ್ ಆಗಿದೆ ಎಂದು ಹಲವರು ಕಾಮೆಂಟ್ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಪೋಸ್ಟರ್ ಕೆಳಗಡೆ Embracing the slow pace of sunday ಎನ್ನುವ ಕ್ಯಾಪ್ಷನ್ ಅನ್ನು ಬರೆದುಕೊಂಡಿದ್ದರು. ಇನ್ನೂ ಈ ಫೋಟೋಗಳಿಗೆ ಇದುವೆರೆಗೂ 88.4 ಸಾವಿರ ಮೆಚ್ಚುಗೆಗಳು, 841 ಕಾಮೆಂಟ್‌ಗಳು ಬಂದಿವೆ. ಅಲ್ಲದೆ, 836 ಮಂದಿ ಶೇರ್ ಮಾಡಿಕೊಂಡಿದ್ದಾರೆ. ಈ ಪೈಕಿ ಇದಕ್ಕೆ ತುಂಬಾ ಜನ ರೆಡ್ ಹಾರ್ಟ್ ಎಮೋಜಿ ಇಟ್ಟು ಕಮೆಂಟ್ ಮಾಡಿದ್ದಾರೆ.












Click it and Unblock the Notifications