Darshan Case: ದರ್ಶನ್ ಜೈಲು ಸೌಲಭ್ಯದ ಅರ್ಜಿ: ಕಾವೇರಿದ ವಾದ-ಪ್ರತಿವಾದ: ಅ.09ಕ್ಕೆ ಆದೇಶ ಸಾಧ್ಯತೆ
Darshan Thoogudeepa: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ತೂಗುದೀಪಗೆ ಜೈಲಿನಲ್ಲಿ ಅಗತ್ಯ ಸೌಲಭ್ಯ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ 57ನೇ ಸೆಷನ್ಸ್ ಕೋರ್ಟ್‌ನಲ್ಲಿ ಇಂದು ವಾದ ವಿವಾದ ನಡೆಯಿತು. ನ್ಯಾಯಾಧೀಶರು ಅರ್ಜಿಯ ಆದೇಶವನ್ನು ಅಕ್ಟೋಬರ್ 09ಕ್ಕೆ ಕಾಯ್ದಿರಿಸಿದರು. ಇವತ್ತಿನ ವಿಚಾರಣೆ ವೇಳೆ ಎಸ್‌ಪಿಪಿ ಪ್ರಸನ್ನ ಕುಮಾರ್ ಮತ್ತು ದರ್ಶನ್ ಪರ ವಕೀಲ ಸುನೀಲ ಅವರ ಮಧ್ಯ ವಾದ ಪ್ರತಿವಾದದ ಕಾವು ಏರಿತ್ತು.
ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆ ದರ್ಶನ್ ಪರ ವಕೀಲ ಸುನೀಲ್ ಅವರು, ದರ್ಶನ್ ಅವರಿಗೆ ಜೈಲಿನಲ್ಲಿ ಸೌಲಭ್ಯಗಳನ್ನು ನೀಡುತ್ತಿಲ್ಲ. ಜೈಲಾಧಿಕಾರಿಗಳಿಗೆ ಕೋರ್ಟ್‌ನ ಆದೇಶ ಪ್ರತಿ ಓದಲು ಬರಲ್ಲ. ಇಂಗ್ಲಿಷ್ ಓದಲು ಬರಲ್ಲ ಎಂದು ಹೇಳಿದರು. ಬೇರೆ ಕೈದಿಗಳಿಗೆ ಸೌಲಭ್ಯ ನೀಡಲಾಗುತ್ತಿದೆ. ಪ್ರಮುಖ ರೇಪಿಸ್ಟ್ ಆರೋಪಿ ಉಮೇಶ್ ರೆಡ್ಡಿಗೂ ಕಲರ್ ಟಿವಿ ಸೌಲಭ್ಯ ನೀಡಲಾಗಿದೆ. ಆದರೆ ನನ್ನ ಕಕ್ಷಿದಾರರಿಗೆ ಮಾತ್ರ ನೀಡಲಾಗುತ್ತಿಲ್ಲ ಎಂದು ನ್ಯಾಯಾಧೀಶರ ಮುಂದೆ ಅವರು ಆರೋಪಿಸಿದರು. ನ್ಯಾಯಾಧೀಶರು ಅಧಿಕಾರಿಗಳ ಬಗ್ಗೆ ಮಾತನಾಡುವಾಗ ಇತಿ -ಮಿತಿ ಇರಲಿ ಎಂದು ಸೂಚಿಸಿತು.

ಎಸ್‌ಪಿಪಿ, ದರ್ಶನ್ ಪರ ವಕೀಲರ ವಾದವೇನು?
ಪ್ರತಿಯಾಗಿ ವಾದ ಮಂಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು, ಕೈದಿಗಳ ಭದ್ರತೆ ನೋಡಿಕೋಡು ಜೈಲಿನ ಮ್ಯಾನುವಲ್ ನಲ್ಲಿ ಏನಿದೆ ಅದೇ ರೀತಿ ಸೌಲಭ್ಯ ನೀಡಲಾಗುತ್ತಿದೆ. ದರ್ಶನ್‌ಗೆ ಹಾಸಿಗೆ, ದಿಂಬು ಮೂಲ ಸೌಲಭ್ಯ ನೀಡಲಾಗಿದೆ. ದರ್ಶನ್ ಪರ ವಕೀಲರು ಕೇಳುತ್ತಾರೆ ಎಂದು ತಕ್ಞಣ ಪಲ್ಲಂಗ, ಮಂಚ ಕೊಡೋಕೆ ಆಗಲ್ಲ. ಜೈಲಿನ ಮ್ಯಾನುವಲ್ ನೋಡಿಕೊಂಡು ಸೌಲಭ್ಯ ಕೊಡಲಾಗುತ್ತಿದೆ. ಭದ್ರತೆ ನೋಡಬೇಕಾಗುತ್ತದೆ ಎಂದು ಕೋರ್ಟ್‌ಗೆ ತಿಳಿಸಿದರು.
ಮುಂದುವರಿದು ವಕೀಲ ಸುನೀಲ್ ಅವರು, 14 ದಿನ ಮಾತ್ರ ಕ್ವಾರಂಟೈನ್ ಇಡಬಹುದು. ಜೈಲಿನಲ್ಲಿ ಅಪರಾಧ ಮಾಡಿದರೆ ಎರಡು ತಿಂಗಳು ಪ್ರತ್ಯೇಕವಾಗಿಡಬಹುದು. ಸಿಗರೇಟ್ ಸೇದಿದರೆ, ಕಾಫಿ ಕುಡಿದರು ಎರಡು ತಿಂಗಳು ಕ್ವಾರಂಟೈನ್ ಮಾಡಬಹುದು. ಬೇರೆ ಕೈದಿಗಳಿಗೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ ದರ್ಶನ್‌ಗೆ ನೀಡುತ್ತಿಲ್ಲ. ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇಡಲಾಗಿದೆ. ಅವರಿಗೊಂದು, ಇವರಿಗೊಂದು ಸೌಲಭ್ಯ ನೀಡಲಾಗುತ್ತಿದೆ ಎಂದು ಜೈಲಾಧಿಕಾರಿಗಳ ವಿರುದ್ಧ ಸುನೀಲ್ ತೀಕ್ಷ್ಣವಾಗಿ ವಾದ ಮಂಡಿಸಿದರು.
ನಾವು ಟ್ರಯಲ್ ಕೋರ್ಟ್ ಗೆ ಹೋಗಿ ಅನುಮತಿ ತರುತ್ತೇವೆ ಎಂದಿದ್ದಾರೆ. ದರ್ಶನ್ ಅವರನ್ನು ಬೇರೆ ಬ್ಯಾರಕ್‌ಗೆ ವರ್ಗಾಯಿಸಲು ಜೈಲಾಧಿಕಾರಿಗಳಿಗೆ ಹೆದರಿಕೆ ಆಗುತ್ತಿದೆ. ಜೈಲು ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ ಎಂದು ಸುನೀಲ್ ಅವರು ವಾದ ಮಂಡಿಸಿದ್ದಾರೆ.
ಕೆಲವು ಹೊತ್ತು ಎಸ್‌ಪಿಪಿ ಮತ್ತು ದರ್ಶನ್ ಪರ ವಕೀಲ ಮಧ್ಯ ವಾದ ಪ್ರತಿವಾದ ಕಾವೇರಿತ್ತು. ಇದೆಲ್ಲ ಆಲಿಸಿದ ಕೋರ್ಟ್ ಅಕ್ಟೋಬರ್ 09ರಂದು ಅರ್ಜಿ ಆದೇಶ ಕಾಯ್ದಿರಿಸಿ ಆದೇಶಿಸಿತು. ಅಂದು ದರ್ಶನ್‌ಗೆ ಮತ್ತಷ್ಟು ರಿಲೀಫ್ ಸಿಗುತ್ತಾ? ಇಲ್ಲವಾ? ಎಂದು ಕಾದು ನೋಡಬೇಕಿದೆ.
ಜೈಲಾಧಿಕಾರಿಗಳಿಗೆ ಹೆದರಿಕೆ ಇದೆಯೆ?
ಇತ್ತೀಚೆಗೆ ದರ್ಶನ್ ಪ್ರಕರಣದಲ್ಲಿ ಜಾಮೀನು ರದ್ದು ವೇಳೆ, ಸುಪ್ರೀಂ ಕೋರ್ಟ್ ದರ್ಶನ್ ಜೈಲಲ್ಲಿದ್ದಾಗ ಸೆಲೆಬ್ರೆಟಿ ಸ್ಟೇಟಸ್, ಸೌಲಭ್ಯ ಗಳನ್ನು ಅನುಭವಿಸಿದ್ದಾರೆ. ಇಂತಹ ಕೆಲವು ಕಾರಣ ನೀಡಿ ಜಾಮೀನು ರದ್ದು ಮಾಡಿತ್ತು. ಒಂದು ವೇಳೆ ಈ ಬಾರಿ ಅಂತಹ ತಪ್ಪಾದರೆ ಜೈಲಾಧಿಕಾರಿಗಳ ಮಾತ್ರವಲ್ಲ ಹಿರಿಯ ಅಧಿಕಾರಿಗಳನ್ನು ಕಟಕಟೆಯಲ್ಲಿ ನಿಲ್ಲಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಹೀಗಾಗಿ ಬೇರೆ ಬ್ಯಾರಕ್‌ಗೆ ದರ್ಶನ್ ವರ್ಗಾಯಿಸಲು ಜೈಲಾಧಿಕಾರಿಗಳು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications