Darshan film: ಥಿಯೇಟರ್‌ಗಳಿಗೆ ನಾಳೆ ಮತ್ತೆ ಅಬ್ಬರಿಸಲಿದೆ ನಟ ದರ್ಶನ್ ಹಿಟ್ ಸಿನಿಮಾ
ಬೆಂಗಳೂರು, ಜೂನ್ 06: ಸ್ಯಾಂಡಲ್‌ವುಡ್ ನಲ್ಲಿ ಸ್ಟಾರ್ ನಟರ ಹಳೆಯ ಹಿಟ್ ಚಿತ್ರಗಳ ಮರು ಬಿಡುಗಡೆ ಟ್ರೆಂಡ್ ಶುರುವಾಗಿದೆ. ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಇತ್ತಿಚೆಗೆ ಹೆಚ್ಚಾಗಿ ಬಿಡುಗಡೆ ಆಗುತ್ತಿಲ್ಲ. ಹೀಗಾಗಿ ರಿರಿಲೀಸ್ ಆಗುವ ಒಂದಷ್ಟು ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡುತ್ತಿವೆ. ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಿಗೆ ಮರು ಜೀವ ನೀಡುತ್ತಿವೆ. ಇದೀಗ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ ಸಿನಿಮಾ ನಾಳೆ ಶುಕ್ರವಾರ ಮತ್ತೊಮ್ಮೆ ಅಬ್ಬರಿಸಲಿದೆ.
ದರ್ಶನ್ ನಟನೆಯ (Actor Darshan) ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್' (Roberrt film) ಸಿನಿಮಾ ನಾಳೆ ಜೂನ್ 07ರಂದು ಸಿಂಗಲ್ ಸ್ಕ್ರೀನ್ ಥಿಯೇಟರ್ ಸೇರಿದಂತೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಮರು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ನಟ ದರ್ಶನ್ ಅಭಿಮಾನಿಗಳಿಗೆ ಮಾಸ್ ಮಸಾಲಾ ಫೀಲ್ ನೀಡಿದ್ದ ರಾಬರ್ಟ್ ಸಿನಿಮಾ 2021ರ ಮಾರ್ಚ್ 11ರಂದು ಬಿಡುಗಡೆಗೊಂಡಿತ್ತು. ಭರ್ಜರಿ ಪ್ರದರ್ಶನ ಜೊತೆಗೆ ನೂರು ಕೋಟಿ ಕ್ಲಬ್ ಸೇರಿತ್ತು. ಅಲ್ಲದೇ ಈ ಸಿನಿಮಾ ಬಹುದಿನಗಳ ಬಳಿಕ ದರ್ಶನ್ ಅವರ ಹಿಟ್ ಲಿಸ್ಟ್‌ಗೆ ಸೇರಿತ್ತು.
ದೊಡ್ಡ ಸಿನಿಮಾಗಳಿಲ್ಲದೇ ಥಿಯೇಟರ್ ಬಣ ಬಣ
ನಂತರ ಅದೇ ನಿರ್ದೇಶಕ ತರುಣ್ ಸುಧೀರ್ ಅವರ ಜೊತೆಗೆ ಮಾಡಿದ 'ಕಾಟೇರ' (Darshan Katera Film) ಸಿನಿಮಾ ಜನಮನ್ನಣೆ ಗಳಿಸಿತು. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಕಳೆದ 2023 ರ ಡಿಸೆಂಬರ್ 29ರಂದು ಬಿಡುಗಡೆ ಆಗಿದ್ದು, ಅಲ್ಲಿಂದ ಈವರೆಗೆ ಅಂತಹ ಮತ್ತೊಂದು ಹಿಟ್ ಸಿನಿಮಾ ಬಂದಿಲ್ಲ ಎನ್ನಲಾಗಿದೆ.
ಬಿಡುಗಡೆ ಆಗುವ ಹತ್ತಾರು ಚಿತ್ರಗಳು ಥಿಯೇಟರ್‌ಗೆ ಬಂದಿದ್ದು ಸಿನಿಪ್ರಿಯರಿಗೆ ತಿಳಿಯುವ ಮೊದಲೇ ಥಿಯೇಟರ್‌ನಿಂದ ಮಾಯವಾಗುತ್ತಿವೆ. ಕೆಲವು ಸಿನಿಮಾಗಳು ರಿಲೀಸ್ ಆಗುವ ಬಗ್ಗೆ ಗೊತ್ತೇ ಆಗುವುದಿಲ್ಲ. ಹೀಗಾಗಿ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳಿಲ್ಲದೇ ಥಿಯೇಟರ್‌ಗಳ ಮಾಲೀಕರು ಒದ್ದಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಹಳೆಯ ಸಿನಿಮಾಗಳು ಮರು ಬಿಡುಗಡೆ ಮೂಲಕ ಒಂದಷ್ಟು ಚೈತನ್ಯ, ಥಿಯೇಟರ್ ಮಾಲೀಕರಿಗೆ ಒಂದಷ್ಟು ಭರವಸೆ ಸಿಗುತ್ತಿವೆ.

ಜಾಕಿ, ಪವರ್ ಬಳಿಕ ರಾಬರ್ಟ್ ರಿರಿಲೀಸ್
ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜಾಕಿ ಸಿನಿಮಾ ರಿರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡಿತ್ತು. ನಂತರ ಅಂಜನಿಪುತ್ರ, ಪವರ್ ಸಿನಿಮಾಗಳು ಒಂದೇ ದಿನ ಮರು ಬಿಡುಗಡೆ ಆಗಿ ಸಿನಿರಸಿಕರನ್ನು ರಂಜಿಸಿದ್ದರು. ಬಹುದಿನಗಳ ಬಳಿಕ ಜನರನ್ನು ಸಿನಿಮಾ ಮಂದಿರಗಳತ್ತ ಅಪ್ಪು ಅವರ ಚಿತ್ರಗಳು ಕರೆ ತಂದಿದ್ದವು. ಇದಾದ ಬಳಿಕ ಉಪೇಂದ್ರ ಅವರ 'A' ಸಿನಿಮಾ ಸಹ ರಿರಿಲೀಸ್ ಆಗಿತ್ತು.
'ರಾಬರ್ಟ್' ಸ್ವಾಗತಕ್ಕೆ ವೇದಿಕೆ ರೆಡಿ
ಇದೀಗ ಮಾಸ್‌ಗೆ ಹೆಸರಾಗಿರುವ ನಟ ದರ್ಶನ್ ಅವರ ರಾಬರ್ಟ್ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ನಾಳೆ ಶುಕ್ರವಾರ ಡಿ.ಬಾಸ್ ಅಭಿಮಾನಿಗಳು ರಾರ್ಬಟ್ ಸ್ವಾಗತಕ್ಕೆ ವೇದಿಕೆ ರೆಡಿ ಮಾಡಿಕೊಳ್ಳುತ್ತಿದ್ದಾರೆ. ರಾಬರ್ಟ್ ನಲ್ಲಿ ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿರುವ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿರುವ 'ಕಣ್ಣು ಹೊಡಿಯಾಕ' ಹಾಡು ಜನಮನ ಗೆದ್ದಿದೆ.
ಜೂನ್ ತಿಂಗಳಲ್ಲಿ ಮುಂದಿನ ವಾರ ಇನ್ನಷ್ಟು ಸಿನಿಮಾಗಳು ಮರು ಬಿಡುಗಡೆ ಆಗಲಿವೆ ಎನ್ನಲಾಗಿದೆ. ಇದರೊಂದಿಗೆ ಹೊಸಬರ ಒಂದಷ್ಟು ಸಿನಿಮಾಗಳು ಚಿತ್ರಮಂದಿರಕ್ಕೆ ಬರಲು ಸಜ್ಜಾಗಿವೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications