Darshan Thoogudeepa: 70 ದಿನಗಳ ಕಾಲ್‌ಶೀಟ್ ರಿಪೀಟ್.. ನಟ ದರ್ಶನ್‌ ಕಮಿಟ್‌ಮೆಂಟ್‌.!-ಭಾರೀ ವೈರಲ್‌

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಗೆ ಇಂದು (ಅಕ್ಟೋಬರ್ 30) ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇದರ ಬೆನ್ನೆಲ್ಲೆ 70 ದಿನಗಲ ಕಾಲ್‌ಶೀಟ್‌ ಮತ್ತೆ ಸದ್ದು ಮಾಡುತ್ತಿದೆ. ಹಾಗಾದರೆ ಇದರ ಅರ್ಥವೇನು ಹಾಗೂ ಇದೇ ಸಮಯದಕ್ಕೆ ಈ ಪದ ಮುನ್ನೆಲೆಗೆ ಬರಲು ಕಾರಣ ಏನೆಂದು ಇಲ್ಲಿ ನೀಡಲಾಗಿದೆ ಗಮನಿಸಿ.

ವಿಜಯಲಕ್ಷ್ಮಿ ಇನ್ಸ್ಟಾದಲ್ಲಿ ಬರೆದುಕೊಂಡಿರುವುದೇನು?: ಅನಾರೋಗ್ಯದ ಹಿನ್ನೆಲೆ ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಬಳ್ಳಾರಿ ಜೈಲಿನಲ್ಲಿದ್ದ ಅವರು ಇದೀಗ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇನ್ನು ಪತಿಗೆ ಜಾಮೀನು ಸಿಕ್ಕ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ಬಳ್ಳಾರಿಯಲ್ಲಿನ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅಲ್ಲದೆ, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ "ಫಲಿಸಿತು ಪೂಜಾ ಫಲ," ಎಂದು ಬರೆದುಕೊಳ್ಳುವುದಲ್ಲದೆ ಕಾಮಾಕ್ಯ ದೇವಾಲಯದ ಫೊಟೋವನ್ನು ಹಂಚಿಕೊಂಡಿದ್ದಾರೆ.

Actor Darshan s 70 Day Call Sheet Goes Viral

70 ದಿನಗಲ ಕಾಲ್‌ಶೀಟ್‌ ರಿಪೀಟ್: ಮತ್ತೊಂದೆಡೆ ದರ್ಶನ್‌ಗೆ ಬೇಲ್‌ ಆಗುತ್ತಿದ್ದಂತೆ ರಾಜ್ಯದ ಹಲವೆಡೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಅಷ್ಟೇ ಸಾಲದೆಂಬಂತೆ, 70 ದಿನ ಕಾಲ್‌ಶೀಟ್‌ನ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಿಪೀಟ್‌ ಮಾಡುತ್ತಿದ್ದಾರೆ. ಅಂದರೆ ನಮ್‌ ಬಾಸ್‌ ಏನಿದ್ದರೂ 70 ದಿನಗಳಳ ನಂತರ ಕಾಲ್‌ ಶೀಟ್‌ ಕೊಡುವುದು. ಅದರ ಮೇಲೆ ಕೊಡುವುದೇ ಇಲ್ಲ ಎಂದು ಹೇಳುವ ಮೂಲಕ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಇದರ ಅರ್ಥ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ 62 ದಿನ ಇದ್ದರು. ಬಳಿಕ ಅಲ್ಲಿ ರಾಜಾತಿಥ್ಯ ಆರೋಪ ಹಿನ್ನೆಲೆ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿತ್ತು. ಇಂದು ಕೋರ್ಟ್‌ ಮಧ್ಯಂತರ ಆದೇಶ ನೀಡಿದ್ದು, ಈ ಹಿನ್ನೆಲೆ 70 ದಿನ ಕಳೆಯುವ ಮುನ್ನ 69 ದಿನಕ್ಕೆ ದರ್ಶನ್‌ ಹೊರಗಡೆ ಬಂದಿದ್ದಾರೆ. ಇದರಿಂದ ದರ್ಶನ್‌ 70 ದಿನಗಲ ಕಾಲ್‌ಶೀಟ್ ಮತ್ತೆ ರಿಪೀಟ್‌ ಮಾಡುತ್ತಿದ್ದಾರೆ ಅಭಿಮಾನಿಗಳು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ನಟ ದರ್ಶನ್‌ ಸಿನಿಮಾದ ವೇಳೆ 70 ದಿನಗಳ ನಂತರ ಕಾಲ್‌ ಶೀಟ್‌ ಕೊಡುತ್ತೇನೆ ಅದಾದ ನಂತರ ನಾನು ಯಾರಿಗೂ ಕೊಡೋದಿಲ್ಲ ಎನ್ನುವಂತದನ್ನು ಈ ಹಿಂದೆ ಹೇಳಿದ್ದರು ಎನ್ನುವ ಮಾಹಿತಿ ಇದೆ. ಇದನ್ನೇ ಇಟ್ಟುಕೊಂಡು ಇದೀಗ ಎರಡೂ ಜೈಲಿನಲ್ಲಿ ಕಳೆದಿರುವ ದಿನಗಳ ಬಗ್ಗೆ ಲೆಕ್ಕಾಚಾರ ಹಾಕುವ ಮೂಲಕ ಕಾಲ್‌ ಶೀಟ್‌ ದಿನಗಳ ಬಗ್ಗೆ ಅಭಿಮಾನಿಗಳು ಮಾತನಾಡುತ್ತಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ 62, ಬಳ್ಳಾರಿ 69 ದಿನ ಒಟ್ಟು 131 ದಿನಗಳನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೆರೆವಾಸದಲ್ಲಿ ಕಳೆದಿದ್ದಾರೆ.ಅದು ಈಗ ಸಿಕ್ಕಿರುವುದು ಕೂಡ ಸಂಪೂರ್ಣ ಜಾಮೀನು ಅಲ್ಲ, ಮಧ್ಯಂತರ ಜಾಮೀನು ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+