Actor Darshan: ಬಳ್ಳಾರಿ ಜೈಲು ಸೆಲ್‌ನಿಂದ ಹೊರಬಂದ ನಟ ದರ್ಶನ್
Actor Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ & ಗ್ಯಾಂಗ್ ಜೈಲು ಸೇರಿದೆ. ಇನ್ನು ಇಂದು (ಅಕ್ಟೋಬರ್ 14) ನಟ ದರ್ಶನ್ ಜಾಮೀನು ತೀರ್ಪಿನ ಭವಿಷ್ಯದ ಆದೇಶ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಈ ನಡುವೇಯೆ ಬಳ್ಳಾರಿ ಜೈಲು ಸೆಲ್‌ನಿಂದ ನಟ ದರ್ಶನ್ ಹೊರಗಡೆ ಬಂದಿದ್ದಾರೆ. ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ ಇಲ್ಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್‌ನನ್ನು ನೋಡಲು ನಟ ಧನ್ವೀರ್ ಬಳ್ಳಾರಿ ಜೈಲಿಗೆ ಬಂದಿದ್ದು, ಈ ವೇಳೆ ದರ್ಶನ್ ಸೆಲ್‌ನಿಂದ ಹೊರಗಡೆ ಬಂದಿದ್ದಾರೆ. ಆದರೆ ಪತ್ನಿ ವಿಜಯಲಕ್ಷ್ಮಿ ಮಾತ್ರ ಬಂದಿಲ್ಲದಿರುವುದೇ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಇಂದು (ಅಕ್ಟೋಬರ್ 14) ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್‌ನಲ್ಲಿ ಜಾಮೀನು ಭವಿಷ್ಯದ ತೀರ್ಪು ಇನ್ನೂ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದ್ದು, ನಟ ದರ್ಶನ್ ಜಾಮೀನು ಸಿಗುವ ಭರವಸೆಯಲ್ಲಿದ್ದಾರೆ. ಮತ್ತೊಂದೆಡೆ ಬಳ್ಳಾರಿ ಜೈಲಿನ ಮುಂದೆ ನೆರೆದ ದರ್ಶನ್ ಅಭಿಮಾನಿಗಳು ಡಿ.. ಡಿ..ಬಾಸ್ ಎಂದು ಚೀರಾಡುತ್ತಿದ್ದು, ಇವರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು.












Click it and Unblock the Notifications