Darshan Thoogudeepa: ಜಲಗಾರ.. ಪುಡಾಂಗ್.. ತಗಡೇ.. ದರ್ಶನ್ ತೂಗುದೀಪ್ ಫೇಮಸ್ ಮಾಡಿದ ಪದಗಳ ಪಟ್ಟಿ ಇಲ್ಲಿದೆ!
ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಿನ ಊಟ ತಿಂದು ತಿಂದು ಸೊರಗುತಿದ್ದಾರೆ. ಮಾನಸಿಕವಾಗೂ ಕುಗ್ಗಿ ಹೋಗಿರುವ ನಟ ದರ್ಶನ್ ಇದೀಗ ಹೊಸ ಜೀವನ ಶುರು ಮಾಡಲು ಸಜ್ಜಾಗಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಬಳಕೆ ಮಾಡಿದ್ದ ಪದಗಳನ್ನ ಜನ ಟ್ರೋಲ್ ಮಾಡುತ್ತಿದ್ದಾರೆ, ಈ ಪದಗಳ ಬಗ್ಗೆ ಚರ್ಚೆ ಕೂಡ ನಡೆಸುತ್ತಿದ್ದಾರೆ. ಹಾಗಿದ್ರೆ ನಟ ದರ್ಶನ್ ಫೇಮಸ್ ಮಾಡಿದ್ದ ಪದಪುಂಜಗಳು ಯಾವುವು ಗೊತ್ತೆ? ಮಾಹಿತಿಗಾಗಿ ಮುಂದೆ ಓದಿ.
ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ಪ್ರೇಮಿಗಳಿಂದ ಹಲವು ಬಿರುದು ಪಡೆದಿದ್ದರು. ಈ ಪೈಕಿ ಚಾಲೆಂಜಿಂಗ್ ಸ್ಟಾರ್ & ಡಿ-ಬಾಸ್ ಪದಗಳು ಸಿಕ್ಕಾಪಟ್ಟೆ ಹವಾ ಎಬ್ಬಿಸಿದ್ದವು. ಆದರೆ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಆರೋಪದಲ್ಲಿ ನಟ ದರ್ಶನ್ A2 ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್ ತೂಗುದೀಪ್ ಆಪ್ತ ಗೆಳತಿ ಪವಿತ್ರಾ ಗೌಡ ಕೂಡ ಜೈಲಿನಲ್ಲಿ ಕಂಬಿ ಎಣಿಸುವಾಗಲೇ ನಟ ದರ್ಶನ್ ತೂಗುದೀಪ್ ಫುಲ್ ಟ್ರೆಂಡ್ ಕೂಡ ಕ್ರಿಯೇಟ್ ಮಾಡಿದ್ದಾರೆ. ಹಾಗಾದ್ರೆ ನಟ ದರ್ಶನ್ ಫೇಮಸ್ ಮಾಡಿರುವ ಪದಗಳು ಯಾವುವು? ಯಾವ ಕಾರಣಕ್ಕೆ ಜಲಗಾರ.. ಪುಡಾಂಗ್.. ತಗಡೇ.. ಪದಗಳು ಫೇಮಸ್ ಆದವು? ಪೂರ್ತಿ ಮಾಹಿತಿ ಇಲ್ಲಿದೆ ಮುಂದೆ ಓದಿ ತಿಳಿಯಿರಿ.

ಜಲಗಾರ.. ಪದ ಬಳಸಿದ್ದ ದರ್ಶನ್!
ದರ್ಶನ್ ಸ್ವತಃ ತಮ್ಮ ಕುಟುಂಬದ ಸದಸ್ಯರ ಜೊತೆಗೂ ಚನ್ನಾಗಿಲ್ಲ. ಈ ಕಾರಣಕ್ಕೆ ಹೆಂಡತಿಯ ಬಗ್ಗೆ ವಿಕೃತವಾಗಿ ಮಾತನಾಡಿದ್ದರು ನಟ ದರ್ಶನ್ ಎಂಬ ಆರೋಪ ಇದೆ. ಅಲ್ಲದೆ ದರ್ಶನ್ ವಿರುದ್ಧ ಇರುವ ಆರೋಪಕ್ಕೆ ಸಾಕ್ಷಿಯಾಗಿ ಅವರ ಪತ್ನಿಯನ್ನು ಬೈದಿದ್ದಾರೆ ಎಂಬ ಆಡಿಯೋ ಒಂದು ವೈರಲ್ ಆಗಿತ್ತು. ದರ್ಶನ್ 'ಜಲಗಾರ' ಆಡಿಯೋ ಇಂದಿಗೂ ವಿಕೃತ ಮನಸ್ಸುಗಳಿಗೆ ಭಾರಿ ಫೇಮಸ್ ಆಗಿದೆ. ಸ್ವತಃ ದರ್ಶನ್ ಪತ್ನಿಯ ಬಗ್ಗೆ ಮಾತನಾಡಿದ್ರು ಎಂದು ಆರೋಪಿಸಿರುವ ಆಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಈಗಲೂ ವೈರಲ್ ಆಗುತ್ತಿದೆ.
ದರ್ಶನ್ ಜಲಗಾರ ಆಡಿಯೋದಲ್ಲಿ ತಮ್ಮ ಹೆಂಡತಿಗೆ ವಿಕೃತವಾಗಿ ಬೈದು, ಬೇರೆಯವರ ಜೊತೆಗೆ ಮಗು ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ರು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಪೊಲೀಸರ ಎದುರಲ್ಲೇ ನಿನಗೆ ಅದು ಮಾಡ್ತೀನಿ.. ಇದು ಮಾಡ್ತೀನಿ.. ಅಂತಾ ಕೆಟ್ಟ ಕೆಟ್ಟದಾಗಿ ಮಾತನಾಡಿದ್ದ ಆರೋಪ ಕೂಡ ಇದೆ. 'ಜಲಗಾರ' ಆಡಿಯೋ ಮಾತ್ರ ಅಲ್ಲ, ಇನ್ನೂ ಕೆಲ ಪದಗಳು ದರ್ಶನ್ ಅವರಿಂದ ಫೇಮಸ್ ಆಗಿವೆ.
ಜೋಗಿ ಪ್ರೇಮ್‌ಗೆ 'ಪುಡಾಂಗ್' ಪದ!
ದರ್ಶನ್ ತೂಗುದೀಪ್ 'ರಾಬರ್ಟ್' ಸಿನಿಮಾ ಮುಗಿದ ನಂತರ ನಿರ್ಮಾಪಕ ಉಮಾಪತಿಯ ಜೊತೆ ಕಿರಿಕ್ ಮಾಡಿಕೊಂಡರು. ಈ ಸಮಯದಲ್ಲಿ ಎಲ್ಲರ ಬಗ್ಗೆಯೂ ಆಕ್ರೋಶ ಹೊರಹಾಕಿ ವಾರ್ನಿಂಗ್ ಕೊಟ್ಟಿದ್ದರು ನಟ ದರ್ಶನ್. ಅಲ್ಲದೆ ಇದೇ ಸಮಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡುವಾಗ 'ಪ್ರೇಮ್ ಏನು ದೊಡ್ ಪುಡಾಂಗಾ?' ಅಂತಾ ಪ್ರಶ್ನೆ ಕೂಡ ಮಾಡಿದ್ದರು. ಇಷ್ಟು ಮಾತ್ರವಲ್ಲ ಉಮಾಪತಿ ಜೊತೆಗೆ ಕಿರಿಕ್ ಮಾಡಿಕೊಂಡು 'ಐಯೋ ತಗಡೇ' ಎಂಬ ಪದವನ್ನೂ ಫೇಮಸ್ ಮಾಡಿದ್ದರು ನಟ ದರ್ಶನ್.












Click it and Unblock the Notifications