ನಟ ದರ್ಶನ್ ನಿಮಗೆ ಡಿ ಬಾಸ್ ಆದ್ರೆ, ನನಗೆ ಮಗ, ಇನ್ನೆರಡು ತಿಂಗಳಲ್ಲಿ ಜೈಲಿನಿಂದ ಬಿಡುಗಡೆ ಪಕ್ಕಾ: ರವಿಚಂದ್ರನ್ ಭವಿಷ್ಯ
Actor Darshan Thoogudeepa: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಕು ಸೇರಿದ್ದಾರೆ. ಇನ್ನೂ ಫೆಬ್ರವರಿ 16ರಂದು ಅವರ ಹುಟ್ಟುಹಬ್ಬವನ್ನು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡಿದ್ಧಾರೆ. ಮತ್ತೊಂದೆಡೆ, ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ದರ್ಶನ್ ಜೈಲಿನಿಂದ ಬಿಡುಗಡೆಯಾಗುವ ಕುರಿತು ಭವಿಷ್ಯವನ್ನು ನುಡಿದಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಫೆಬ್ರವರಿ 16ರಂದು ನಟ ದರ್ಶನ್ ಅವರ 49ನೇ ಜನ್ಮದಿನವಾಗಿದ್ದು, ಈ ಸಂದರ್ಭದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಯಾವಾಗ ಹೊರಬರುತ್ತಾರೆ ಎಂದು ಬೇಡಿಕೊಂಡಿದ್ದಾರೆ. ಇಂತಹ ಸಮಯದಲ್ಲೇ ಹಿರಿಯ ನಟ ರವಿಚಂದ್ರನ್ ಅವರು ದರ್ಶನ್ ಬಿಡುಗಡೆ ಕುರಿತು ಭವಷ್ಯ ನುಡಿದಿದ್ದು, ಇದರಿಂದ ಅಭಿಮಾನಿಗಳು ಸಂತಸಗೊಂಡಿದ್ದಾರೆ.

'ಇನ್ನೆರಡು ತಿಂಗಳಿನಲ್ಲಿ ಹೊರಗಡೆ ಬರುತ್ತಾರೆ'
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ವೇದಿಕೆ ಮುಂದೆ ಅಭಿಮಾನಿಗಳು ಡಿ ಬಾಸ್.. ಡಿ ಬಾಸ್ ಅಂತಾ ಕೂಗಿದಾಗ ಇದಕ್ಕೆ ಪ್ರತಿಕ್ರಿಯಿಸಿ, "ಡಿ ಬಾಸ್ ಬರ್ತಾರೆ ಬಿಡ್ರೋ. ಇನ್ನೆರಡು ತಿಂಗಳಿನಲ್ಲಿ ಹೊರಗಡೆ ಬರುತ್ತಾರೆ. ನನ್ನ ಬಾಯಲ್ಲಿ ಹೇಳಿದ್ದೇನೆ ಅಂದ್ರೆ ಪಕ್ಕಾ ಬರ್ತಾರೆ ನೆನಪಿಟ್ಟುಕೊಳ್ಳಿ," ಎಂದು ಹೇಳಿದರು.
ಹೃದಯದಲ್ಲಿಟ್ಟು ಪೂಜೆ ಮಾಡಿ
"ಅವರು ನಿಮಗೆಲ್ಲಾ ಡಿ ಬಾಸ್.. ಆ ಡಿ ಬಾಸ್ ನನಗೆ ಮಗ ನೆನಪಿಟ್ಟುಕೊಳ್ಳಿ. ಒಂದು ಕೆಟ್ಟ ಗಳಿಗೆ ಮನುಷ್ಯನನ್ನು ಕುಗ್ಗಿಸುತ್ತದೆ ಅಂದ್ರೆ, ಯಾವತ್ತೊಂದು ಒಂದು ದಿನ ಮೇಲಕ್ಕೆ ಎಬ್ಬಿಸಲೇಬೇಕಾಗುತ್ತದೆ. ಆ ದಿನಕ್ಕೆ ಎಲ್ಲಾರೂ ಕಾಯೋಣ. ಆದರೆ, ಒಂದೇ ಪ್ರೀತಿ ಹಾಗೂ ಮನಸ್ಸಿನಿಂದ ಹೃದಯದಲ್ಲಿಟ್ಟು ಪೂಜೆ ಮಾಡಿ. ಆಗ ಅದಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ," ಎಂದು ಹೇಳಿದರು. ಇದರಿಂದ ಅಭಿಮಾನಿಗಳಿಗೆ ಹೊಸ ಉತ್ಸಾಹ ಬಂದಂತಾಗಿದೆ.
ಕ್ರಾಂತಿ ಚಿತ್ರದಲ್ಲಿ ದರ್ಶನ್ ಜೊತೆ 'ಕ್ರೇಜಿ' ನಟನೆ
ದರ್ಶನ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ನಡುವೆ ಉತ್ತಮ ಬಾಂಧವ್ಯ ಇದ್ದು, 2023ರಲ್ಲಿ ಬಿಡುಗಡೆಯಾದ ಕ್ರಾಂತಿ ಸಿನಿಮಾದಲ್ಲಿ ಭಾರ್ಗವ ರಾಯಣ್ಣ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಸಹ ರವಿಚಂದ್ರನ್ ಅವರನ್ನು ಗೌರವದಿಂದ ನೋಡುತ್ತಾರೆ ಎಂಬುದು ಚಿತ್ರರಂಗದಲ್ಲಿ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಇದೀಗ ದರ್ಶನ್ ಬಿಡುಗೆ ಬಗ್ಗೆ ಅವರು ನುಡಿದ ಭವಿಷ್ಯ ಇದೀಗ ಎಲ್ಲೆಡೆ ಗಮನ ಸೆಳೆದಿದೆ.
ಮತ್ತೊಂದೆಡೆ, ನಟ ದರ್ಶನ್ ಅವರ ಜಾಮೀನು ಅರ್ಜಿ ಸುಪ್ರೀಂಕೋರ್ಟ್ ಹಂತದಲ್ಲೇ ರದ್ದಾಗಿದೆ. ಈ ಹಿನ್ನೆಲೆ ಸದ್ಯ ಅವರಿಗೆ ಜಾಮೀನು ಸಿಗುವುದು ತುಂಬಾ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ನಡುವೆಯೇ ರವಿಚಂದ್ರನ್ ಅವರ ಬಿಡುಗಡೆ ಹೇಳಿಕೆ ಅಭಿಮಾನಿಗಳ ಮನದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಒಟ್ಟಾರೆ, ಅಭಿಮಾನಿಗಳು ದರ್ಶನ್ ಶೀಘ್ರದಲ್ಲೇ ಆರೋಪ ಮುಕ್ತರಾಗುವ ನಿರೀಕ್ಷೆಯೊಂದಿಗೆ ಕಾಯುತ್ತಿದ್ದಾರೆ.












Click it and Unblock the Notifications