ನಟ ದರ್ಶನ್ & ಪವಿತ್ರಾ ಗೌಡಗೆ ಒಂದೇ ದಿನ ಜಾಮೀನು.?
Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ & ಗ್ಯಾಂಗ್ ಜೈಲುಪಾಲಾಗಿದೆ. ಈ ಪೈಕಿ ಮೂವರಿಗೆ ಈಗಾಗಲೇ ಜಾಮೀನು ಮಂಜೂರಾಗಿತ್ತು. ಇನ್ನೂ ಇಂದು (ಸೆಪ್ಟೆಂಬರ್ 25) ನಡೆದ ಪವಿತ್ರಾ ಗೌಡಳ ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೆ ಸೆಪ್ಟೆಂಬರ್ 27ಕ್ಕೆ ಮುಂದೂಡಲಾಗಿದೆ. ಹಾಗಾದರೆ ದರ್ಶನ್ & ಪವಿತ್ರಾ ಗೌಡಗೂ ಒಂದೇ ದಿನ ಜಾಮೀನು ಸಿಗಲಿದೆಯಾ ಎನ್ನುವ ಪ್ರಶ್ನೆಗಳು ಎದ್ದಿವೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಹಾಗೂ ಎ1 ಆರೋಪಿ ಪವಿತ್ರಾ ಗೌಡಳ ಜಾಮೀನು ಅರ್ಜಿ ವಿಚಾರಣೆಯನ್ನು 57ನೇ ಸಿಸಿಎಚ್ ಕೋರ್ಟ್ ಸೆಪ್ಟೆಂಬರ್ 25ಕ್ಕೆ ಮುದೂಡಿಕೆ ಮಾಡಿದೆ ಆದೇಶ ಹೊರಡಿಸಿತ್ತು. ಇದೀಗ ಇಂದು (ಸೆಪ್ಟೆಂಬರ್ 25) ಪವಿತ್ರಾ ಗೌಡಳ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಸೆಪ್ಟೆಂಬರ್ 27ಕ್ಕೆ ಮುಂದೂಡಲಾಗಿದೆ. ಅಂದೇ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ15 ಆರೋಪಿ ಕಾರ್ತಿಕ್, ಎ17 ಆರೋಪಿ ನಿಖಿಲ್‌ಗೆ ಸೆಪ್ಟೆಂಬರ್ 23ರಂದು 57ನೇ ಸಿಸಿಎಚ್ ಕೋರ್ಟ್ ಜಾಮೀನು ನೀಡಿದ್ದು, ಅಂದೇ ಎ16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ಮಂಜೂ ಮಾಡಿ ಆದೇಶ ಹೊರಡಿಸಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಂದ ಹಣದ ಆಮಿಷಕ್ಕೋಳಗಾಗಿ ಶವ ಸಾಗಿಸುವಾಗ, ಪೊಲೀಸರಿಗೆ ಶರಣಾಗುವಲ್ಲಿ ಮಾತ್ರ ಇವರ ಪಾತ್ರ ಇತ್ತು. ಹತ್ಯೆಗೂ ಇವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಇದೀಗ ಇಂದು (ಸೆಪ್ಟೆಂಬರ್ 25) ನಡೆದ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ಮತ್ತೆ ಸೆಪ್ಟೆಂಬರ್ 27ಕ್ಕೆ ಮುಂದೂಡಿಕೆ ಮಾಡಿದೆ. ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯಂದೇ ಪವಿತ್ರಾ ಗೌಡಳ ಅರ್ಜಿ ವಿಚಾರಣೆ ನಡೆಯಲಿದ್ದು, ಅಂದೇ ಇಬ್ಬರಿಗೂ ಜಾಮೀನು ಸಿಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ವಕೀಲರು ಕೂಡ ನಟ ದರ್ಶನ್‌ಗೆ ಜಾಮೀನು ಸಿಗುವುದು ಪಕ್ಕಾ ಎಂದು ಹೇಳುತ್ತಿದ್ದಾರೆ. ಹಾಗಾದರೆ ಸೆಪ್ಟೆಂಬರ್ 27ಕ್ಕೆ ವಿಚಾರಣೆ ಏನಾಗಲಿದೆ ಎಂದು ಕಾದುನೋಡಬೇಕಿದೆ.
ಇಂದು (ಸೆಪ್ಟೆಂಬರ್ 25) ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಆಕ್ಷೇಪಣೆ ಸಲ್ಲಿಕೆ ಮಾಡಲು ಎಸ್‌ಪಿಪಿ ಕಾಲಾವಕಾಶ ಕೇಳಿದ್ದಾರೆ. ಆದ್ದರಿಂದ ಈ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ.
ಈ ಹಿಂದೆ ಪವಿತ್ರಾ ಪರ ವಕೀಲರು ಈ ಪ್ರಕರಣದಲ್ಲಿ ನನ್ನ ಕಕ್ಷಿದಾರರ ಪಾತ್ರವಿಲ್ಲ ಎಂದು ವಾದ ಮಂಡನೆ ಮಾಡಿದ್ದರು. ಪವಿತ್ರಗೌಡಗೆ ತಮಗೆ ಬರುತ್ತಿದ್ದ ಸಂದೇಶದ ಬಗ್ಗೆ ಪವನ್‌ಗೆ ಹೇಳಿದ್ದರು. ಪವನ್ ಈ ವಿಚಾರವನ್ನು ದರ್ಶನ್ ಗಮನಕ್ಕೆ ತಂದಿದ್ದಾರೆ. ಬಳಿಕ ಪ್ಲಾನ್ ಮಾಡಿ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಪಟ್ಟಣಗೆರೆ ಕರೆತದಿದ್ದಾರೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಪವಿತ್ರಾ ಗೌಡಳ ಪಾತ್ರ ಇಲ್ಲ. ಪೊಲೀಸರು ಆಕೆಯ ವಿರುದ್ಧ ಮಾಡಿರುವ ಆರೋಪಗಳು ನಿಜವಲ್ಲ ಎಂದು ಟಾಮಿ ಸೆಬಾಸ್ಟಿಯನ್ ಅವರು ಈ ಹಿಂದೆ ವಾದ ಮಂಡನೆ ಮಾಡಿದ್ದರು.
ಇನ್ನು 57ನೇ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಮತ್ತೆ ಆರೋಪಿಗಳಾದ ಪವನ್, ಅನು ಕುಮಾರ್, ರಾಘವೇಂದ್ರ, ಲಕ್ಷ್ಮಣ್ ಹಾಗೂ ನಾಗರಾಜ ಜಾಮೀನಿಗಾಗಿ ಐವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications