ನಟ ದರ್ಶನ್ ರಾಜಕೀಯಕ್ಕೆ ಬಂದ್ರೆ ಉತ್ತಮ ಭವಿಷ್ಯವಿದೆ: ಯಾವ ವರ್ಷ ಗೊತ್ತಾ? ಗುರೂಜಿ ಹೇಳಿದ್ದೇನು?
Actor Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ ಅಕ್ಟೋಬರ್ 31ರಂದು ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಬಳಿಕ ನಟ ನಿನ್ನೆ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದು, ಇದರ ಬೆನ್ನಲ್ಲೇ ಇದೀಗ ಅವಧೂತ ಗುರೂಜಿಯೊಬ್ಬರು ದರ್ಶನ್ ಭವಿಷ್ಯದ ಬಗ್ಗೆ ಸ್ಫೋಟಕ ಮಾತುಗಳನ್ನಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಅವರು ಕೋರ್ಟ್ ಮಧ್ಯಂತ್ರ ಜಾಮೀನು ಮಂಜೂರಾದ ಹಿನ್ನೆಲೆ ಬುಧಾವಾರ ಸಂಜೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ನಟ ದರ್ಶನ್ ರಾಜಕೀಯಕ್ಕೆ ಬಂದರೆ ಉತ್ತಮ ಭವಿಷ್ಯವಿದೆ ಎಂದು ಅರ್ಜುನ್ ಅವಧೂತ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ನಟ ದರ್ಶನ್ ರಾಜಕೀಯಕ್ಕೆ ಬರುತ್ತಾರೆ. ಅವರು ಯಾರ ಮನೆ ಬಳಿಯೂ ಹೋಗುವುದಿಲ್ಲ, ರಾಜಕೀಯ ಪಕ್ಷಗಳೇ ಅವರನ್ನು ಹುಡುಕಿಕೊಂಡು ಬರುತ್ತವೆ. ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದು ಮೈಸೂರಿನ ಅರ್ಜುನ್ ಅವಧೂತ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಅದರಲ್ಲೂ 2025ಕ್ಕೆ ದರ್ಶನ್ ಅವರಿಗೆ ಒಳ್ಳೆಯ ಭವಿಷ್ಯವಿದೆ. ದರ್ಶನ್ ಬಿಡುಗಡೆ ಆಗಿರುವುದರಿಂದ ಕನ್ನಡಿಗರಿಗೆ ಮತ್ತು ಅವರ ಅಭಿಮಾನಿಗಳು ತುಂಬಾ ಸಂತಸಗೊಂಡಿದ್ದಾರೆ. ಅದರಲ್ಲೂ ಅಭಿಮಾನಿಗಳ ಪ್ರಾರ್ಥನೆ, ವಿಜಯಲಕ್ಷ್ಮಿ ಅವರ ತಪಸ್ಸು ಹಾಗೂ ದಿನಕರ್ ತೂಗುದೀಪ ಅವರ ಪ್ರಯತ್ನದಿಂದ ದರ್ಶನ್ ಬಿಡುಗಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಹೇಳುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ.
70 ದಿನದ ಕಾಲ್‌ಶೀಟ್ ರಿಪೀಟ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇದರ ಬೆನ್ನೆಲ್ಲೆ 70 ದಿನದ ಕಾಲ್‌ಶೀಟ್ ಮತ್ತೆ ಸದ್ದು ಮಾಡುತ್ತಿದೆ. ಹಾಗಾದರೆ ಇದರ ಅರ್ಥವೇನು ಹಾಗೂ ಇದೇ ಸಮಯದಕ್ಕೆ ಈ ಪದ ಮುನ್ನೆಲೆಗೆ ಬರಲು ಕಾರಣ ಏನೆಂದು ಇಲ್ಲಿ ನೀಡಲಾಗಿದೆ ಗಮನಿಸಿ.
ವಿಜಯಲಕ್ಷ್ಮಿ ಇನ್ಸ್ಟಾದಲ್ಲಿ ಬರೆದುಕೊಂಡಿರುವುದೇನು?: ಅನಾರೋಗ್ಯದ ಹಿನ್ನೆಲೆ ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಬಳ್ಳಾರಿ ಜೈಲಿನಲ್ಲಿದ್ದ ಅವರು ಇದೀಗ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇನ್ನು ಪತಿಗೆ ಜಾಮೀನು ಸಿಕ್ಕ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ಬಳ್ಳಾರಿಯಲ್ಲಿನ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅಲ್ಲದೆ, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ "ಫಲಿಸಿತು ಪೂಜಾ ಫಲ," ಎಂದು ಬರೆದುಕೊಳ್ಳುವುದಲ್ಲದೆ ಕಾಮಾಕ್ಯ ದೇವಾಲಯದ ಫೊಟೋವನ್ನು ಹಂಚಿಕೊಂಡಿದ್ದಾರೆ.
ಮತ್ತೊಂದೆಡೆ ದರ್ಶನ್‌ಗೆ ಬೇಲ್ ಆಗುತ್ತಿದ್ದಂತೆ ರಾಜ್ಯದ ಹಲವೆಡೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಅಷ್ಟೇ ಸಾಲದೆಂಬಂತೆ, 70 ದಿನ ಕಾಲ್‌ಶೀಟ್‌ನ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಿಪೀಟ್ ಮಾಡುತ್ತಿದ್ದಾರೆ. ಅಂದರೆ ನಮ್ ಬಾಸ್ ಏನಿದ್ದರೂ 70 ದಿನಗಳಳ ನಂತರ ಕಾಲ್ ಶೀಟ್ ಕೊಡುವುದು. ಅದರ ಮೇಲೆ ಕೊಡುವುದೇ ಇಲ್ಲ ಎಂದು ಹೇಳುವ ಮೂಲಕ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಇದರ ಅರ್ಥ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ 62 ದಿನ ಇದ್ದರು. ಬಳಿಕ ಅಲ್ಲಿ ರಾಜಾತಿಥ್ಯ ಆರೋಪ ಹಿನ್ನೆಲೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇಂದು ಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಈ ಹಿನ್ನೆಲೆ 70 ದಿನ ಕಳೆಯುವ ಮುನ್ನ 69 ದಿನಕ್ಕೆ ದರ್ಶನ್ ಹೊರಗಡೆ ಬಂದಿದ್ದಾರೆ. ಇದರಿಂದ ದರ್ಶನ್ 70 ದಿನಗಲ ಕಾಲ್‌ಶೀಟ್ ಮತ್ತೆ ರಿಪೀಟ್ ಮಾಡುತ್ತಿದ್ದಾರೆ ಅಭಿಮಾನಿಗಳು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.












Click it and Unblock the Notifications