ನಟ ದರ್ಶನ್ ದಿಢೀರ್ ಅರೆಸ್ಟ್, ಅಭಿಮಾನಿಗಳಿಂದ ಭುಗಿಲೆದ್ದ ಆಕ್ರೋಶ... Actor Darshan
ಸಿನಿಮಾ ನಟರು ಕಿರಿಕ್ ಮಾಡಿಕೊಳ್ಳುವುದು & ಜೈಲಿಗೆ ಹೋಗುವುದು ಮಾಮೂಲಿ ಆಗಿದೆ. ಈ ಪೈಕಿ ಇನ್ನೂ ಕೆಲವು ನಟರು ದೊಡ್ಡ ದೊಡ್ಡ ಕೇಸ್‌ನಲ್ಲಿ ಅರೆಸ್ಟ್ ಆಗಿ ಜೈಲು ಸೇರಿ ಭಾರಿ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಸಿನಿಮಾ ಅಭಿಮಾನಿಗಳು ಕೂಡ ಈ ರೀತಿಯಾಗಿ ನಟ & ನಟಿಯರು ಜೈಲಿಗೆ ಹೋಗುತ್ತಿರುವ ಪ್ರಕರಣಗಳನ್ನ ನೋಡಿ ಬೆಚ್ಚಿಬಿದ್ದಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಕೂಡ ಸಾಲು ಸಾಲು ನಟರು & ನಟಿಯರು ಜೈಲಿಗೆ ಹೋಗುತ್ತಿದ್ದಾರೆ. ಇಂತಹ ಸಮಯದಲ್ಲೇ, ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್ ಭಾರಿ ಸಂಚಲನ ಸೃಷ್ಟಿ ಮಾಡಿತ್ತು.
ಕನ್ನಡ ಸಿನಿಮಾ ರಂಗ ಅದರಲ್ಲೂ ದಕ್ಷಿಣ ಭಾರತದ ಸಿನಿಮಾ ರಂಗದ ಬಗ್ಗೆ ಇಡೀ ಇಂಡಿಯಾ ಪೂರ್ತಿ ಹವಾ ಇದೆ. ಬಾಲಿವುಡ್ ಅಂದ್ರೆ ಹಿಂದಿ ಸಿನಿಮಾ ರಂಗ ಮಕಾಡೆ ಮಲಗಿ, ಸಾಲು & ಸಾಲು ಸಿನಿಮಾಗಳು ಹೀನಾಯವಾಗಿ ಸೋತು ತೋಪೆದ್ದು ಹೋಗುತ್ತಿರುವ ಸಮಯದಲ್ಲೇ, ದಕ್ಷಿಣ ಭಾರತದ ಸಿನಿಮಾಗಳು ಅದರಲ್ಲೂ ಕನ್ನಡ ಸಿನಿಮಾಗಳು ಹಿಂದಿ ಪ್ರೇಕ್ಷಕರಿಗೆ ಸಖತ್ ಇಷ್ಟ ಆಗುತ್ತಿವೆ. ಹೀಗೆಲ್ಲಾ ದಕ್ಷಿಣ ಭಾರತದ ಸಿನಿಮಾ ರಂಗ ದೊಡ್ಡ ಹೆಸರು ಮಾಡುವ ಈ ಸಮಯದಲ್ಲೇ ಸಿನಿಮಾ ನಟರು & ನಟಿಯರು ಜೈಲಿಗೆ ಹೋಗುತ್ತಿದ್ದು, ನಟ ದರ್ಶನ್ ದಿಢೀರ್ ಅರೆಸ್ಟ್, ಅಭಿಮಾನಿಗಳಿಂದ ಭುಗಿಲೆದ್ದ ಆಕ್ರೋಶ...

ನಟ ದರ್ಶನ್ ದಿಢೀರ್ ಅರೆಸ್ಟ್...
ಸಿನಿಮಾ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಬಗ್ಗೆ ಭಾರಿ ಅಭಿಮಾನ ಇಟ್ಟುಕೊಂಡು & ತಮ್ಮ ನೆಚ್ಚಿನ ನಟರು ಹಾಗೂ ನಟಿಯರಿಗೆ ಜೀವ ಕೂಡ ಕೊಡುತ್ತೇವೆ ಅಂತಾರೆ. ಹೀಗಾಗಿಯೇ ಸಿನಿಮಾ ನಟರು ಹಾಗೂ ನಟಿಯರು ತಪ್ಪು ಮಾಡಿದ ಸಮಯದಲ್ಲಿ ಅಭಿಮಾನಿಗಳು ಕೂಡ ಬೆನ್ನಿಗೆ ನಿಲ್ಲುತ್ತಾರೆ. ಹೀಗಿದ್ದಾಗಲೇ, ನಟ ದರ್ಶನ್ ದಿಢೀರ್ ಅರೆಸ್ಟ್ ಆಗಿ, ಅಭಿಮಾನಿಗಳಿಂದ ಭುಗಿಲೆದ್ದ ಆಕ್ರೋಶ...
ನಟ ದರ್ಶನ್ ಅರೆಸ್ಟ್ ಆಗಿದ್ದೇಕೆ?
ಅಂದಹಾಗೆ ಹೈಕೋರ್ಟ್ ನ್ಯಾಯಾಧೀಶರ ಮಗ ತನ್ನ ಹೆಂಡತಿ ಜೊತೆಗೆ ಕಾರಿನಲ್ಲಿ ಅಂಗಡಿಗೆ ಬಂದಿದ್ದ ಸಮಯದಲ್ಲಿ, ನಟ ದರ್ಶನ್ ಅವರ ಮನೆಯ ಮುಂದೆ ಕಾರನ್ನು ನಿಲ್ಲಿಸಲಾಗಿತ್ತು ಎಂದು ಆರೋಪ ಮಾಡಲಾಗಿದೆ. ಇದೇ ವಿಚಾರಕ್ಕೆ ಗಲಾಟೆ ನಡೆದಿರುವ ಕಾರಣಕ್ಕೆ ಇದೀಗ ಚೆನ್ನೈನಲ್ಲಿ ಕಾರು ಪಾರ್ಕಿಂಗ್ ವಿಚಾರದಲ್ಲಿ ದೊಡ್ಡ ಗಲಾಟೆ ನಡೆದಿದ್ದು, ಇದೀಗ ಚೆನ್ನೈನ ಪೊಲೀಸರು ತಮಿಳು ನಟ ದರ್ಶನ್ ಮತ್ತು ಅವರ ಸಹೋದರನನ್ನ ಬಂಧಿಸಿದ್ದಾರೆ. ಬಿಗ್‌ಬಾಸ್ ಸೆಲೆಬ್ರಿಟಿ ಆಗಿರುವ ತಮಿಳು ನಟ ದರ್ಶನ್ ಮನೆ ಚೆನ್ನೈನ ಮುಖರ್ಜಿ ಪ್ರದೇಶದಲ್ಲಿ ಇದೆ. ಈಗ ಸಣ್ಣ ವಿಚಾರಕ್ಕೆ ನಟ ದರ್ಶನ್ ದೊಡ್ಡ ಸಮಸ್ಯೆ ಎದುರಿಸುವಂತೆ ಆಗಿದೆ.
ಚೆನ್ನೈ ಪೊಲೀಸರಿಗೆ ಹೊಸ ತಲೆನೋವು?
ತಮಿಳು ನಟ ದರ್ಶನ್ ಅವರ ಪ್ರಕರಣದಲ್ಲಿ ಇದೀಗ ಚೆನ್ನೈ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ ಎನ್ನಲಾಗಿದೆ. ಯಾಕಂದ್ರೆ ತಮಿಳು ನಟ ದರ್ಶನ್ ಅವರು ಜಡ್ಜ್ ಪುತ್ರನ ಮೇಲೆ ಈ ರೀತಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಸಂಚಲನ ಸೃಷ್ಟಿ ಮಾಡಿದ್ದು, ತನಿಖೆಯ ಕೂಡ ನಡೆಸಲಾಗುತ್ತಿದೆ. ಇನ್ನೊಂದು ಕಡೆ ಅಭಿಮಾನಿಗಳು ತಮಿಳು ನಟ ದರ್ಶನ್ ಅವರ ಬೆನ್ನಿಗೂ ನಿಲ್ಲುತ್ತಿದ್ದಾರೆ. ತಮಿಳುನಾಡಿನಲ್ಲಿ ಇದೀಗ ಈ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದು, ಇದೇ ವಿಚಾರವಾಗಿ ಪರ & ವಿರೋಧದ ಚರ್ಚೆಗಳು ಕೂಡ ಶುರುವಾಗಿವೆ. ಹೀಗಾಗಿ ಪ್ರಕರಣದ ಬಗ್ಗೆ ಒಂದು ಸ್ಪಷ್ಟನೆ ಸಿಗಲು ತನಿಖೆ ಸಂಪೂರ್ಣವಾಗಬೇಕು, ಆ ನಂತರವೇ ಈ ಕೇಸ್ ಕುರಿತಾಗಿ ಒಂದು ಸ್ಪಷ್ಟನೆ ಸಿಗಲಿದೆ.












Click it and Unblock the Notifications