ಪವಿತ್ರಾಗೌಡ ಮಹದಾಸೆ ನೆರವೇರಿಸಿದ್ದ ನಟ ದರ್ಶನ್
Pavithra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಈಗಾಗಲೇ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿದಂತೆ 13 ಮಂದಿ ಪೊಲೀಸರ ವಶದಲ್ಲಿದ್ದಾರೆ. ಇನ್ನು ಈ ಪ್ರಕರಣ ಎಲ್ಲೆಡೆ ಸದ್ದು ಮಾಡುತ್ತಿದ್ದಂತೆ ದರ್ಶನ್‌ನ ಹಳೆಯ ಕರಾಳ ಸತ್ಯಗಳು ಒಂದೊಂದೇ ಬಟಾ ಬಯಾಲಾಗುತ್ತಿವೆ. ಇದೀಗ ಪವಿತ್ರಾಗೌಡ ಹಠ ಹಿಡಿದಿದ್ದ ಆ ಮಹಾದಾಸೆಯನ್ನು ಕೂಡ ದಚ್ಚು ಈಡೇರಿಸಿದ್ದಾರೆ ಎನ್ನುವ ಭಯಾನಟ ಮಾಹಿತಿಯೊಂದು ಹೊರಬಿದ್ದಿದೆ. ಹಾಗಾದರೆ ಆ ಸ್ಫೋಟಕ ವಿಚಾರ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇದೇ ವರ್ಷದ ಮಾರ್ಚ್‌ನಲ್ಲಿ ನಟ ದರ್ಶನ್ ಪತ್ನಿ ವಿಯಜಲಕ್ಷ್ಮಿ ಅವರಿಗೆ ದುಬಾರಿ ಕಾರನ್ನು ರೇಂಜ್ ರೋವರ್ ಅನ್ನು ಕೊಡಿಸಿದ್ದು, ಈ ಹೊಸ ಕಾರಿನ ಫೋಟೋಗಳನ್ನು ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಪವಿತ್ರಾ ಗೌಡ ಕೂಡ ನನಗೂ ಇದೇ ಕಾರು ಬೇಕು ಎಂದು ಹಠ ಹಿಡಿದಿದ್ದು, ಕೊನೆಗೂ ಈ ಮಹಾದಾಸೆಯನ್ನು ದರ್ಶನ್ ಈಡೇರಿಸಿದ್ದರು ಎನ್ನುವ ವಿಚಾರ ಇದೀಗ ಬಹಿರಂಗವಾಗಿದೆ.

ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿರುವ ವಿಚಾರ ತಿಳಿದ ನಂತರ ಪತ್ನಿ ವಿಜಯಲಕ್ಷ್ಮಿ ಶಾಕ್ ಆಗಿದ್ದು, ಬೇಸರಗೊಂಡು ತಮ್ಮ ಇನ್ಸ್ಟಾಗ್ರಾಂ ಡಿಪಿಯಲ್ಲಿದ್ದ ದರ್ಶನ್ ಜೊತೆಗಿನ ಫೋಟೋವನ್ನು ಡಿಲೀಟ್ ಮಾಡಿದ್ದರು. ಪವಿತ್ರಾ ಗೌಡ ಜೊತೆಗಿನ ದರ್ಶನ್ ನಂಟಿನ ವಿಚಾರವಾಗಿಯೂ ಈ ಹಿಂದೆ ವಿಜಯಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ನನಗೂ ಕೂಡ ಅದೇ ರೀತಿಯ ಕಾರು ಬೇಕೇ ಬೇಕು ಎಂದು ನಟಿ ಪವಿತ್ರಾ ಗೌಡ ಹಠ ಹಿಡಿದಿದ್ದರಂತೆ. ಕೊನೆಗೆ ಪವಿತ್ರಾ ಗೌಡ ಹಠಕೆ ಸೋತ ದರ್ಶನ್, ಪತ್ನಿ ವಿಜಯಲಕ್ಷ್ಮಿಗೆ ನೀಡಿದ್ದ ಅದೇ ರೀಯಿತ ಕಾರನ್ನು ಪವಿತ್ರಾ ಗೌಡಗೆ ಉಡುಗೊರೆ ನೀಡಿದ್ದಾರೆ ಎನ್ನಲಾಗಿದೆ.
2024ರ ಮಾರ್ಚ್ 28ರಂದು ಪವಿತ್ರಾ ಗೌಡಗೆ ನಟ ದರ್ಶನ್ ಅವರು ಬಿಳಿ ಬಣ್ಣದ ರೇಂಜ್ ರೋವರ್ ಕಾರನ್ನು ಗಿಫ್ಟ್ ನೀಡಿದ್ದಾರೆ. KA-04-NE-0777 ನಂಬರ್‌ನ ರೇಂಜ್ ರೋವರ್ ಕಾರು 2024ರ ಮಾರ್ಚ್ 28ಕ್ಕೆ ರಿಜಿಸ್ಟರ್ ಆಗಿದ್ದು, ಇನ್ನು ಪವಿತ್ರಾಗೌಡ ವಾಸ ಇರುವ ಮನೆ ಸಹ ದರ್ಶನ್ ಅವರೇ ಖರೀದಿಸಿಕೊಟ್ಟಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications