ಇತ್ತ ಜಾಮೀನು ತೀರ್ಪಿಗೆ ಕೌಂಟ್‌ಡೌನ್‌! ಅತ್ತ ದರ್ಶನ್‌ ಹಠ, ಯಾವುದಕ್ಕೆ?

ರೇಣುಕಾಸ್ವಾಮಿ ಕೊಲೆ ಕೇಸ್‌ ಆರೋಪಿಯಾಗಿರುವ ನಟ ದರ್ಶನ್‌ ತೂಗುದೀಪ ಅವರ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ದರ್ಶನ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಇಂದು ತೀರ್ಪು ಪ್ರಕಟಿಸುವುದಾಗಿ ಕೋರ್ಟ್‌ ಹೇಳಿದೆ. ಹಾಗಾಗಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಢವಢವ ಶುರುವಾಗಿದೆ.

ಇಂದು ಕೋರ್ಟ್‌ನಲ್ಲಿ ತೀರ್ಪು ಬರಲಿರುವ ಕಾರಣ ಟಿಫನ್‌ ಕೂಡ ಮಾಡದೆ ಒದ್ದಾಡುತ್ತಿದ್ದಾರೆ ಎಂದು ವರದಿಯಾಗಿದೆ. ಮೊದಲು ಜಾಮೀನು ಪಡದು ಜೈಲುವಾಸದಿಂದ ಮುಕ್ತಿ ಪಡೆದರೆ ಸಾಕಪ್ಪಾ ಎಂದು ದರ್ಶನ್‌ ಪರದಾಡುತ್ತಿದ್ದಾರೆ. ಹೀಗಾಗಿ ಇಂದು ಬೆಳಿಗ್ಗೆ ಜೈಲಿನಲ್ಲಿ ಟಿಫನ್‌ ಕೊಟ್ಟರೂ ಅತ್ತ ಗಮನವೇ ಹರಿಸಿಲ್ಲವಂತೆ.

Actor Darshan Demanded TV In Bellary Jail

ದರ್ಶನ್‌ಗೆ ಟಿಫನ್‌ ಕೊಡಲು ಹೋಗಿದ್ದ ಜೈಲು ಸಿಬ್ಬಂದಿ ಬಳಿ ಜಾಮೀನು ತೀರ್ಪು ಎಷ್ಟೊತ್ತಿಗೆ ಬರುತ್ತೆ? ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಜೈಲು ಸಿಬ್ಬಂದಿ ಈ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಟಿಫನ್‌ ಕೊಟ್ಟು ಬಂದಿದ್ದಾರೆ. ಬಳಿಕ ಜೈಲಿನ ಅಧಿಕಾರಿಗಳ ಬಳಿ ನ್ಯೂಸ್‌ ಚಾನಲ್‌ಗಳನ್ನು ವೀಕ್ಷಿಸಲು ಡಿಮ್ಯಾಂಡ್‌ ಕೂಡ ಇಟ್ಟಿದ್ದಾರೆ ಎನ್ನಲಾಗಿದೆ.

ಇಂದು ತಮ್ಮ ಜಾಮೀನು ಅರ್ಜಿಯ ವಿಚಾರಣೆ ತೀರ್ಪು ಹೊರಬೀಳಲಿರುವುದರಿಂದ ಅದರ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ತಿಳಿದುಕೊಳ್ಳಲು ದರ್ಶನ್‌ ಕಾತರರಾಗಿದ್ದಾರೆ. ಹಾಗಾಗಿ ತಮಗೆ ನ್ಯೂಸ್‌ ಚಾನೆಲ್‌ಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಿ ಕೊಡಿ ಎಂದು ಅಧಿಕಾರಿಗಳನ್ನು ಕೇಳಿಕೊಂಡಿದ್ದಾರಂತೆ.

ದರ್ಶನ್‌ ಅವರು ಈ ಹಿಂದೆ ಮಾಧ್ಯಮಗಳ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನುವ ಆರೋಪವಿದೆ. ದರ್ಶನ್‌ ಅವರು ಏನ್ರೀ ಮೀಡಿಯಾ? ಎಂದು ಕೆಟ್ಟಪದಗಳನ್ನು ಬಳಸಿ ನಿಂದಿಸಿದ್ದರು ಎಂದೂ ಹೇಳಲಾಗಿದೆ. ಈ ಆಡಿಯೋ ವೈರಲ್‌ ಕೂಡ ಆಗಿ, ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಕೂಡ ಆಗಿತ್ತು. ಆದರೆ, ಇಂದು ದರ್ಶನ್‌ ಅವರು ಅದೇ ಮೀಡಿಯಾಗಳಿಗಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Actor Darshan Demanded TV In Bellary Jail

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್‌ ತೂಗುದೀಪ ಅವರ ಭವಿಷ್ಯ ಇಂದು ನಿರ್ಧಾರ ಆಗಲಿದೆ. ಈ ಕೇಸ್‌ನಲ್ಲಿ ಜಾಮೀನು ಕೋರಿ ನಟ ದರ್ಶನ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ಈಗಾಗಲೇ ವಿಚಾರಣೆ ಪೂರ್ಣಗೊಂಡಿದೆ. ಇಂದು ಕೋರ್ಟ್‌ ತೀರ್ಪು ಹೇಳಲಿದೆ.

ನಟ ದರ್ಶನ್ ಅವರಿಗೆ ಜಾಮೀನು ಸಿಗುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ದರ್ಶನ್‌ ಅವರ ಮುಂದೆ ಜೈಲೋ? ಬೆಲೋ? ಎನ್ನುವ ಎರಡು ಆಯ್ಕೆಗಳಿವೆ. ಕಳೆದ ವಾರ ದರ್ಶನ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು 57ನೇ ಸಿಸಿಎಚ್‌ ಕೋರ್ಟ್‌ ಪೂರ್ಣಗೊಳಿಸಿತ್ತು. ಇಂದು ಕೆಲವೇ ಹೊತ್ತಿನಲ್ಲಿ ತೀರ್ಪು ಹೊರಬೀಳಲಿದೆ.

ಕಳೆದ ವಾರ ನಡೆದ ವಿಚಾರಣೆ ವೇಳೆ ದರ್ಶನ್‌ ಪರ ವಕೀಲರ ವಾದವು ಮಹತ್ವದ ತಿರುವು ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಈ ಕಾರಣದಿಂದಲೂ ದರ್ಶನ್‌ ಅವರಿಗೆ ಜಾಮೀನು ಸಿಗುವುದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ಕಳೆದ ವಾರ ವಿಚಾರಣೆ ನಡೆಸಿದ ಕೋರ್ಟ್‌, ಸೋಮವಾರ ಆದೇಶ ಪ್ರಕಟಿಸುವುದಾಗಿ ಹೇಳಿತ್ತು. ಹಾಗಾಗಿ ಐದು ತಿಂಗಳ ಬಳಿಕ ದರ್ಶನ್‌ ಜಾಮೀನು ಪಡೆದು ಹೊರಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

Actor Darshan Demanded TV In Bellary Jail

ಇದೇ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿರುವ ಆಪ್ತರಾದ ಪವಿತ್ರಾ ಗೌಡ, ರವಿಶಂಕರ್, ನಾಗರಾಜ್‌, ಲಕ್ಷ್ಮಣ್‌ ಹಾಗೂ ದೀಪಕ್‌ ಅವರ ಜಾಮೀನು ಅರ್ಜಿಗಳ ವಿಚಾರಣೆ ಕೂಡ ಮುಗಿದಿದ್ದು, ಇದರ ತೀರ್ಪು ಕೂಡ ಇಂದೇ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+