Actor Darshan: ಕೊಲೆ ಆರೋಪಿ ನೋಡಲು 8ನೇ ಬಾರಿ ಬಳ್ಳಾರಿ ಜೈಲಿಗೆ ಆಗಮಿಸಿದ ವಿಜಯಲಕ್ಷ್ಮಿ
Vijayalakshmi Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದ್ದಾರೆ. ಇನ್ನೂ ನಾಳೆ ಅಂದರೆ ಅಕ್ಟೋಬರ್ 8ರಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಇದರ ನಡುವೆಯೇ ಇಂದು (ಅಕ್ಟೋಬರ್ 7) ಇದೀಗ ಪತಿ ನೋಡಲು ವಿಜಯಲಕ್ಷ್ಮಿ ಅವರು ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ನನ್ನು ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಭೇಟಿಯಾಗಿದ್ದಾರೆ. ಇದಕ್ಕೂ ಮುನ್ನಾ ಬೆಳಗ್ಗೆ ಅವರು ಖಾಸಗಿ ಹೋಟೆಲ್‌ನಲ್ಲಿ ತಂಗಿ ಬಳಿಕ ಬಳ್ಳಾರಿ ಜೈಲಿ ಭೇಟಿ ನೀಡಿದ್ದಾರೆ. ಜೊತೆಗೆ ದರ್ಶನ್ ಆಪ್ತರು ಕೂಡ ಆಗಮಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಬಳ್ಳಾರಿನ ಜೈಲಿನಲ್ಲಿ ದರ್ಶನ್‌ನನ್ನು ಭೇಟಿ ನೀಡಿದ ವಿಜಯಲಕ್ಷ್ಮಿ ಅವರಿಗೆ ಡ್ರೈಪ್ರೂಟ್ಸ್, ಹಣ್ಣುಗಳನ್ನು ಕೊಟ್ಟು ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ನಾಳೆ (ಅಕ್ಟೋಬರ್ 08) ಬೆಂಗಳೂರಿನ 57ನೇ ಸಿಸಿಎಸ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈಗಾಗಲೇ ಅಕ್ಟೋಬರ್ 4ರಂದು ನಡೆದ ವಿಚಾರಣೆ ವೇಳೆ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಅವರು ಸುಧೀರ್ಘವಾಗಿದೆ ವಾದ ಮಂಡನೆ ಮಾಡಿದ್ದರು.
ಅಕ್ಟೋಬರ್ 4ರಂದು ನಡೆದ ಜಾಮೀನು ಅರ್ಜಿ ವಿಚಾರಣೆ ವೇಳೆ ನಟ ದರ್ಶನ್ ವಿರುದ್ಧ ಸುಳ್ಳು ಸಾಕ್ಷಿಗಳನ್ನು ಕಲೆಹಾಕಿದ್ದಾರೆ ಅಂತಲೂ ವಾದ ಮಂಡನೆ ಮಾಡಿದ್ದರು. ಸುರ್ಧಿರ್ಘ ವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿ ಆದೇಶ ಹೊರಡಿಸಿತ್ತು. ಮತ್ತೊಂದೆಡೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅರ್ಜಿ ವಿಚಾರಣೆಯನ್ನು ಸಹ ಇದೇ ದಿನಾಂಕಕ್ಕೆ ಮುಂದೂಡಿತ್ತು.
ಹಿರಿಯ ವಕೀಲ ಸಿ.ವಿ.ನಾಗೇಶ್ ವಾದವೇನು?: ಅಕ್ಟೋಬರ್ 4ರಂದು ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಅವರು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಿರುವ ಹಲವಾರು ಅಂಶಗಳನ್ನು ಕೋರ್ಟ್ ಮುಂದಿಟ್ಟಿದ್ದಾರೆ. ಈ ವೇಳೆ ತನಿಖೆಯಲ್ಲಿ ಪೊಲೀಸರು ಮಾಡಿದ ತಪ್ಪುಗಳನ್ನು ಪ್ರಶ್ನೆ ಮಾಡುವ ಮೂಲಕ ಪ್ರಬಲವಾಗಿ ವಾದ ಮಂಡನೆ ಮಾಡಿದ್ದರು.
ಈ ತನಿಖೆಯಲ್ಲಿ ತುಂಬಾ ಲೋಪಗಳಿವೆ. ತನಿಖಾಧಿಕಾರಿಗಳು ಹಲವು ಸಾಕ್ಷ್ಯಗಳನ್ನು ತಾವೇ ಸೃಷ್ಟಿ ಮಾಡಿದ್ದಾರೆ ಅಂತಲೂ ಆರೋಪವನ್ನು ಮಾಡಿದ್ದರು. ಹೀಗೆ ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಸುದೀರ್ಘ ವಾದ ಮಂಡನೆ ಮಾಡಿದ್ದರು. ಈ ವಾದವನ್ನು ಆಲಿಸಿದ ಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿಕೆ ಮಾಡಿದ್ದು, ಇನ್ನು ನಾಳೆ ಸರ್ಕಾರಿ ಪರ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಲಿದ್ದಾರೆ ಎನ್ನಲಾಗಿದೆ.
ಇನ್ನು ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆ ಅಂದರೆ ಅಕ್ಟೋಬರ್ 8ರಂದು ನಡೆಯಲಿದ್ದು, ನಟ ದರ್ಶನ್ ಜಾಮೀನು ಭವಿಷ್ಯ ಏನಾಗಲಿದೆ ಎಂದು ಕಾದುನೋಡಬೇಕಿದೆ. ಇನ್ನು ನಟ ದರ್ಶನ್ ನಾಳೆಯಾದರೂ ಜಾಮೀನು ಸಿಗಬಹುದಾ ಎನ್ನುವ ಭರವಸೆಯಲ್ಲಿದ್ದಾನೆ.












Click it and Unblock the Notifications