Actor Darshan Bail: ದರ್ಶನ್‌ಗೆ ಜಾಮೀನು ನಿರೀಕ್ಷೆಯಲ್ಲಿ ಸಂಜೆ ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಆಗಮನ ಸಾಧ್ಯತೆ

Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದ್ದಾರೆ. ಇನ್ನು ಸೋಮವಾರ (ಸೆಪ್ಟೆಂಬರ್ 30) ಬೆಂಗಳೂರಿನ ಸೆಷನ್‌ ಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಮತ್ತೊಂದೆಡೆ ದರ್ಶನ್‌ಗೆ ಜಾಮೀನು ಸಿಗುವ ನಿರೀಕ್ಷೆಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಸಂಜೆ ಬಳ್ಳಾರಿ ಜೈಲಿಗೆ ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಸೆಪ್ಟೆಂಬರ್‌ 27ರಂದು ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಎ2 ಆರೋಪಿ ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ಇಬ್ಬರ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್‌ 30ಕ್ಕೆ ಜನಪ್ರತಿನಿಧಿನಿಗಳ ವಿಶೇಷ ಕೋರ್ಟ್ ಮುಂದೂಡಿ ಆದೇಶ ಹೊರಡಿಸಿತ್ತು. ಇಂದು ಈ ಇಬ್ಬರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದು, ದರ್ಶನ್‌ಗೆ ಜಾಮೀನು ಸಿಗುವ ಭರವಸೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಸೇರಿದಂತೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Actor Darshan Bail application hearing Vijayalakshmi will arrive to Ballari Jail evening

ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ15 ಆರೋಪಿ ಕಾರ್ತಿಕ್‌, ಎ17 ಆರೋಪಿ ನಿಖಿಲ್‌ಗೆ 57ನೇ ಸಿಸಿಎಚ್‌ ಕೋರ್ಟ್‌ ಜಾಮೀನು ನೀಡಿದ್ದು, ಎ16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್‌ ಜಾಮೀನು ಮಂಜೂ ಮಾಡಿ ಆದೇಶ ಹೊರಡಿಸಿದೆ. ಇನ್ನೂ ಇಂದು ದರ್ಶನ್‌ & ಪವಿತ್ರಾ ಗೌಡ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.

ಇನ್ನು ಇದೀಗ ನಟ ದರ್ಶನ್‌ ಜಾಮೀನು ಮುಂದೂಡಿಕೆ ಮಾಡಿದೆ. ಇದರ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ಅವರು ಪತಿ ದರ್ಶನ್‌ ನೋಡಲು ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಆಗಮಿಸಿದ್ದಾರೆ. ಅಲ್ಲದೆ ಸಹೋರದ ದಿನಕರ್ ತೂಗುದೀಪ, ಆಪ್ತ ಧನ್ವೀರ್‌, ಸುಶಾಂತ್‌ ಸಹ ಆಗಮಿಸಿದ್ದಾರೆ.

ವಿಜಯಲಕ್ಷ್ಮಿ ಅವರು ಪತಿ ದರ್ಶನ್‌ಗಾಗಿ ಬಳ್ಳಾರಿ ಜೈಲಿಗೆ ಡ್ರೈ ಪ್ರೂಟ್ಸ್‌ ಅನ್ನು ಕೈಯಲ್ಲಿಡಿದುಕೊಂಡುಬಂದಿದ್ದಾರೆ. ಈ ವೇಳೆ ಜಾಮೀನು ಅರ್ಜಿ ವಿಚಾರಣೆ ಬಗ್ಗೆ ದರ್ಶನ್‌ಗೆ ಮಾಹಿತಿ ನೀಡುವ ಮೂಲಕ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ನನ್ನು ಹೊತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟ ಯಾವ ಹೊರಗಡೆ ಬರಲಿದ್ದಾರೆಯೋ ಎಂದು ಕಾತರದಿಂದ ಕಾಯುತ್ತಿದ್ದಾರೆ.

ಆದ್ದರಿಂದ ದರ್ಶನ್ ಬಿಡುಗಡೆ ಆದ ಮೇಲೆ ರಸ್ತೆ ಮೂಲಕ ದರ್ಶನ್‌ನ್ನು ಕರೆತಂದರೆ ಅಭಿಮಾನಿಗಳ ದಂಡು ನೆರೆಯುತ್ತದೆ ಎಂದು ವಿಜಯಲಕ್ಷ್ಮಿ ಅವರು ಹೆಲಿಕಾಪ್ಟರ್‌ ಬುಕ್‌ ಮಾಡಿದ್ದರು ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿತ್ತು. ಆದರೆ ಮತ್ತೆ ಇದೀಗ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್‌ 4ಕ್ಕೆ ಮುಂದೂಡಿಕೆ ಮಾಡಿ ಕೋರ್ಟ್‌ ಆದೇಶ ಹೊರಡಿಸಿದೆ. ಇದರಿಂದ ಹೆಲಿಕಾಪ್ಟರ್‌ ಬುಕ್‌ ಮಾಡಿದ್ದು ಯಾವುದೇ ಪ್ರಯೋಜನೆ ಇಲ್ಲದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+