ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಮಿಲನಾ ನಾಗರಾಜ್‌, ಡಾರ್ಲಿಂಗ್‌ ಕೃಷ್ಣ ದಂಪತಿ

ಬೆಂಗಳೂರು, ಮಾರ್ಚ್ 08: ನಟಿ ಮಿಲನಾ ನಾಗರಾಜ್ ಹಾಗೂ ನಟ ಡಾರ್ಲಿಂಗ್ ಕೃಷ್ಣ ಶಿವರಾತ್ರಿ ಹಬ್ಬದಂದು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. 'ಲವ್ ಮಾಕ್ಟೆಲ್' ಸಿನಿಮಾ ಮೂಲಕ ಖ್ಯಾತಿ ಗಳಿಸಿದ ಈ ಜೋಡಿ ಮದುವೆಯಾದ ಮೂರು ವರ್ಷಗಳ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸಿನಿಮಾಗಳಲ್ಲಿ ಮತ್ತು ತೆರೆಯ ಹಿಂದೆಯೂ ಕೂಡ ಜನರ ನೆಚ್ಚಿನ ಜೋಡಿ ಎನಿಸಿಕೊಂಡಿರುವ ಮಿಲನಾ ಹಾಗೂ ಕೃಷ್ಣ 2021ರ ಫೆಬ್ರವರಿ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಮೂರನೇ ವರ್ಷಕ್ಕೆ ಅಭಿಮಾನಿಗಳ ಜೊತೆಗೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ಸೆಲಬ್ರಿಟಿಗಳು ಸೇರಿದಂತೆ ಫ್ಯಾನ್ಸ್ ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

Actor Darling Krishna and Actress Milana Nagaraj are Expecting Their First Child

ಕಳೆದ ತಿಂಗಳಷ್ಟೇ ಮೂರನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ಮಿಲನಾ ನಾಗರಾಜ್‌, ಡಾರ್ಲಿಂಗ್‌ ತಮ್ಮ ನ್‌ಸ್ಟಾಗ್ರಾಂ ಖಾತೆಯಲ್ಲಿ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ಬ್ಲೆಸ್‌ ಅಸ್ (ಆಶೀರ್ವದಿಸಿ) ಎಂದು ಶೀರ್ಷಿಕೆ ಕೊಟ್ಟು, ಪುಟ್ಟ ಮಗುವಿನ ಬಟ್ಟೆಯ ಫೋಟೋ ಶೇರ್ ಮಾಡಿದ್ದಾರೆ. ಬಟ್ಟೆಯ ಮೇಲೆ 'KrissMi'... ಡ್ಯೂ ಸೆಪ್ಟೆಂಬರ್‌ 2024 ಎಂದು ಬರೆಯಲಾಗಿದೆ.

ಮಗುವಿನ ನಿರೀಕ್ಷೆಯಲ್ಲಿರುವ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದಿದೆ. ನಟಿ ಅಮೃತಾ ಅಯ್ಯಂಗರ್ "ನಾನು ಅತ್ತೆಯಾಗುತ್ತಿದ್ದೇನೆ....ಅಭಿನಂದನೆಗಳು ಇಬ್ಬರಿಗೂ" ಎಂದಿದ್ದಾರೆ. ನಟಿ ರುಕ್ಮಿಣಿ ವಸಂತ್‌, ದಿವ್ಯ ಉರುಡುಗ, ಸುನಯನ, ಸಪ್ತಮಿ ಗೌಡ, ಸಂಯುಕ್ತ ಹೊರನಾಡು, ಖುಷಿ ರವಿ, ಹಿತ ಚಂದ್ರಶೇಖರ್, ಸಾನ್ವಿ ಶ್ರೀವತ್ಸವ್, ರಂಜನಿ ರಾಘವನ್, ದಿಶಾ ಮದನ್, ಅಮೂಲ್ಯ, ಶರಣ್ಯ ಶೆಟ್ಟಿ, ನಿಧಿ ಸುಬ್ಬಯ್ಯ ಸೇರಿದಂತೆ ಅನೇಕರು ಶುಭಾಶಯ ಹೇಳಿದ್ದಾರೆ.

Actor Darling Krishna and Actress Milana Nagaraj are Expecting Their First Child

2015ರಲ್ಲಿ ತೆರೆಗೆ ಬಂದ ಡಾರ್ಲಿಂಗ್ ಕೃಷ್ಣ ಅಭಿನಯದ 'ಚಾರ್ಲಿ' ಸಿನಿಮಾದಲ್ಲಿ ಮಿಲನಾ ನಾಗರಾಜ್ ಕೂಡ ನಟಿಸಿದ್ದರು. ಇಲ್ಲಿಂದ ಇವರ ಸಹ್ನೇಹ ಪ್ರೇಮವಾಗಿ ಹೆಮ್ಮರವಾಗಿ ಬೆಳೆದಿತ್ತು. ಮತ್ತೆ 'ಲವ್‌ ಮಾಕ್ಟೆಲ್' ಮೂಲಕ ಸಿನಿರಂಗದಲ್ಲಿ ಒಟ್ಟಾಗಿ ಭರ್ಜರಿ ಸಕ್ಸಸ್ ಕಂಡವರು. ತಮ್ಮ ಪ್ರೀತಿಗೆ 2021ರಲ್ಲಿ ದಾಂಪತ್ಯದ ಮುದ್ರೆ ಒತ್ತಿದ್ದರು. ಈಗ ಇವರ ಮನೆಗೆ ಪುಟ್ಟ ಮಗುವಿನ ಆಗಮನವಾಗುತ್ತಿದೆ.

ಇನ್ನು, ಇತ್ತೀಚೆಗೆ ಬಾಲಿವುಡ್ ಸೆಲಬ್ರಿಟಿ ಕಪಲ್ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕೂಡ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಬಗ್ಗೆ ಅಭಿಮಾನಿಗಳ ಜೊತೆಗೆ ಸಿಹಿಸುದ್ದಿ ಹಂಚಿಕೊಂಡಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಮಗು ಜನಿಸಲಿದೆ ಎಂದು ಸೂಚಿಸಿ ಪೋಸ್ಟ್ ಶೇರ್ ಮಾಡಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+