ಚಿಕ್ಕಣ್ಣ ಕೂಡ ದರ್ಶನ್ ಜೊತೆಗೆ ಜೈಲಿಗೆ ಹೋಗ್ತಾರಾ?
ದರ್ಶನ್ ಕೊಲೆ ಆರೋಪದಲ್ಲಿ ಅರೆಸ್ಟ್ ಆದ ನಂತರ ಆತನ ಸ್ನೇಹಿತರು & ಅಭಿಮಾನಿಗಳು ಕೂಡ ಒಬ್ಬೊಬ್ಬರಾಗಿ ಪೊಲೀಸ್ ಠಾಣೆಗೆ ಬರುವಂತಾಗಿದೆ. ಅದರಲ್ಲೂ ಕೊಲೆ ನಡೆಯುವ ದಿನ ದರ್ಶನ್ ಜೊತೆಗೆ ನಟ ಚಿಕ್ಕಣ್ಣ ಕೂಡ ಇದ್ದರು ಅನ್ನೋ ಆರೋಪ ಕೇಳಿಬಂದಿದ್ದು, ಇದೀಗ ಪೊಲೀಸರು ಚಿಕ್ಕಣ್ಣಗೆ ವಿಚಾರಣೆಗೆ ಬಾ ಎಂದು ನೋಟಿಸ್ ನೀಡಿದ್ದಾರಂತೆ. ಹಾಗಾದರೆ ಚಿಕ್ಕಣ್ಣ ಕೂಡ ನಟ ದರ್ಶನ್ ರೀತಿ ಜೈಲಿಗೆ ಹೋಗಲಿದ್ದಾರಾ? ಮುಂದೆ ಓದಿ.
ನಟ ಚಿಕ್ಕಣ್ಣ & ದರ್ಶನ್ ನಡುವೆ ಬಿಗಿಯಾದ ಸ್ನೇಹ ಇದ್ದು, ಇಬ್ಬರೂ ಆತ್ಮೀಯರಾಗಿ ಇದ್ದಾರೆ. ಅದರಲ್ಲೂ ಚಿಕ್ಕಣ್ಣ ಅಭಿನಯದ 'ಉಪಾಧ್ಯಕ್ಷ' ಸಿನಿಮಾ ವೇಳೆ ಚಿಕ್ಕಣ್ಣ ಬೆನ್ನಿಗೆ ನಿಂತಿದ್ದವರಲ್ಲಿ ದರ್ಶನ್ ಮೊದಲಿಗರು. ಇದು ಒಂದು ಕಡೆಯಾದರೆ, ಇದೀಗ ದರ್ಶನ್ ವಿರುದ್ಧ ಕೇಳಿಬಂದಿರುವ ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ಚಿಕ್ಕಣ್ಣ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದ್ರಲ್ಲೂ ಕೊಲೆ ನಡೆಯುವ ಕೆಲವೇ ಗಂಟೆಗಳ ಹಿಂದೆ ನಟ ಚಿಕ್ಕಣ್ಣ ಕೂಡ ದರ್ಶನ್ & ಗ್ಯಾಂಗ್ ಜೊತೆಗೆ ಪಾರ್ಟಿ ಮಾಡಿದ್ದರಂತೆ, ಹಾಗಾದ್ರೆ ನಟ ಚಿಕ್ಕಣ್ಣ ಕೂಡ ಜೈಲಿಗೆ ಹೋಗಲಿದ್ದಾರಾ? ಮುಂದೆ ಓದಿ.

ನಟ ಚಿಕ್ಕಣ್ಣಗೆ ಪೊಲೀಸರ ನೋಟಿಸ್!
ದರ್ಶನ್ ಸಹವಾಸ ಮಾಡಿದ್ದಕ್ಕೆ ನೂರಾರು ಜನ ಸಮಸ್ಯೆಗೆ ಸಿಲುಕಿದ್ದಾರೆ, ಅದರಲ್ಲೂ ಈಗ ತಾನೆ ಹೀರೋ ಆಗಿ ಜೀವನ ಕಟ್ಟಿಕೊಳ್ಳುತ್ತಿದ್ದ ನಟ ಚಿಕ್ಕಣ್ಣ ಕೂಡ ಮಾಜಿ ಡಿ-ಬಾಸ್ ಸಹವಾಸದಿಂದ ಪೊಲೀಸ್ ಠಾಣೆಗೆ ಹೋಗುವಂತಾಗಿದೆ. ಇಲ್ಲಿ ಆಗಿದ್ದು ಏನು ಅಂದ್ರೆ, ಜೂನ್ 8 ರಂದು ರೇಣುಕಾ ಸ್ವಾಮಿ ಮೇಲೆ ಹಲ್ಲೆ & ಕೊಲೆ ನಡೆಸುವ ಮೊದಲು ದರ್ಶನ್ & ಗ್ಯಾಂಗ್ ಆರೋಪಿ ವಿನಯ್‌ಗೆ ಸೇರಿದ ಸ್ಟೋನಿ ಬ್ರೂಕ್ ಎಂಬ ಖಾಸಗಿ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದರಂತೆ. ಇದೇ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಭಾಗವಹಿಸಿದ್ರು ಎನ್ನಲಾಗಿದೆ. ಹೀಗಾಗಿ ಪೊಲೀಸರು ತನಿಖೆಯನ್ನ ನಡೆಸಿ ಈ ವಿಚಾರ ಕನ್ಫರ್ಮ್ ಮಾಡಿಕೊಂಡಿದ್ದು, ಇದೀಗ ನಟ ಚಿಕ್ಕಣ್ಣಗೆ ವಿಚಾರಣೆ ಬಾ ಎಂದು ನೋಟಿಸ್ ಕೂಡ ನೀಡಿದ್ದಾರೆ.
ನಟ ಚಿಕ್ಕಣ್ಣ ಕೂಡ ಅರೆಸ್ಟ್?
ಹೌದು, ಇದೀಗ ದರ್ಶನ್ ಅರೆಸ್ಟ್ ಆದ ನಂತರ ನಟ ಚಿಕ್ಕಣ್ಣ ಕೂಡ ಅರೆಸ್ಟ್ ಆಗುತ್ತಾರಾ? ಎಂಬ ಪ್ರಶ್ನೆ ಕಾಡತೊಡಗಿದೆ. ಅಷ್ಟಕ್ಕೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ವಿಚಾರಣೆಗೆ ಹಾಜರಾಗಲು ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಇಂದು ಬೆಳಗ್ಗೆ ಚಿಕ್ಕಣ್ಣನಿಗೆ ನೋಟಿಸ್ ನೀಡಿದ್ದು ತಕ್ಷಣ ಕಾಮಾಕ್ಷಿಪಾಳ್ಯ ಠಾಣೆಗೆ ಹಾಜರಾಗಲು ಸೂಚನೆ ಕೂಡ ನೀಡಿದ್ದಾರಂತೆ. ಹೀಗಾಗಿ ಚಿಕ್ಕಣ್ಣ ವಿಚಾರಣೆಗೆ ಓಡೋಡಿ ಬರುವ ಸಾಧ್ಯತೆ ಇದೆ.
ಆದರೆ ಸದ್ಯಕ್ಕೆ ನಟ ಚಿಕ್ಕಣ್ಣ ಅರೆಸ್ಟ್ ಆಗುವುದಿಲ್ಲ, ಆದರೆ ಪಾರ್ಟಿ ಮಾಡುವ ಸಮಯದಲ್ಲಿ. ಈ ಕೊಲೆ ಸಂಬಂಧಿಸಿದ ವಿಚಾರ ಪ್ರಸ್ತಾಪ ಆಗಿತ್ತಾ? ನಟ ದರ್ಶನ್ ರೇಣುಕಾಸ್ವಾಮಿ ಕೊಲೆಯ ಬಗ್ಗೆ ಏನಾದ್ರೂ ಹೇಳಿದ್ದರಾ? ಎಂಬ ಬಗ್ಗೆ ಚಿಕ್ಕಣ್ಣ ಅವರನ್ನ ವಿಚಾರಣೆ ಮಾಡಲಿದ್ದಾರೆ ಪೊಲೀಸರು ಎನ್ನಲಾಗಿದೆ. ಹಾಗೇ ಚಿಕ್ಕಣ್ಣ ಏನಾದ್ರೂ ಈ ವಿಚಾರಗಳನ್ನ ತಿಳಿಸಿದರೆ, ಚಿಕ್ಕಣ್ಣ ಹೇಳಿಕೆಯನ್ನ ಸಾಕ್ಷಿಯಾಗಿ ಪರಿಗಣಿಸುತ್ತೇವೆ ಅಂತಿದ್ದಾರೆ ಪೊಲೀಸರು. ಹೀಗಾಗಿ ನಟ ಚಿಕ್ಕಣ್ಣಗೆ ಸದ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ.
ದರ್ಶನ್ ಮನುಷ್ಯನ ರಾಕ್ಷಸನಾ...
ಕರ್ನಾಟಕದಲ್ಲಿ ದರ್ಶನ್ ದೊಡ್ಡ ಹೆಸರು ಮಾಡಿದ್ದಾನೆ. ನಟನೆ ಮೂಲಕ ಕೋಟ್ಯಂತರ ಫ್ಯಾನ್ಸ್ ಸಂಪಾದನೆ ಮಾಡಿದ್ದಾನೆ. ಇದೇ ಕಾರಣಕ್ಕೆ ದರ್ಶನ್‌ಗೆ ದೊಡ್ಡ ಜವಾಬ್ದಾರಿ ಇತ್ತು. ಆದರೆ ಹೀಗೆ ಜವಾಬ್ದಾರಿ ಸ್ಥಾನದಲ್ಲಿ ಇದ್ದು, ಸರಿಯಾಗಿ ನಡೆದುಕೊಳ್ಳಬೇಕಿದ್ದ ಈತ ಕೆಟ್ಟದಾಗಿ ನಡೆದುಕೊಂಡು ಈಗ ಕಂಬಿ ಎಣಿಸುತ್ತಿದ್ದಾನೆ. ಅದರಲ್ಲೂ ನಟ ದರ್ಶನ್ ಕೊಲೆ ಆರೋಪದಲ್ಲಿ ಅರೆಸ್ಟ್ ಆಗುವ ಮೊದಲು, ಆತ ಮಾಡಿದ ಕೃತ್ಯದ ವಿಡಿಯೋಗಳನ್ನ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ವೀಕ್ಷಣೆ ಮಾಡಿದ್ದರಂತೆ. ಖುದ್ದು ಬೆಂಗಳೂರು ಕಮೀಷನರ್ ದರ್ಶನ್ ಅಟ್ಟಹಾಸದ ವಿಡಿಯೋ ತೋರಿಸಿ, ಸಿಎಂ ಬಳಿ ಅನುಮತಿ ಪಡೆದು ಕೊಲೆ ಆರೋಪಿ ದರ್ಶನ್ ಬಂಧಿಸಿದ್ದರಂತೆ.












Click it and Unblock the Notifications