Pavithra Jayaram: ಅಪಘಾತದಲ್ಲಿ ಮೃತಪಟ್ಟಿಲ್ಲ ನಟಿ ಪವಿತ್ರಾ ಜಯರಾಂ; ಹಾಗಾದರೆ ಆಗಿದ್ದೇನು?
ಬೆಂಗಳೂರು, ಮೇ. 14 : ಕನ್ನಡ, ತೆಲುಗು ಕಿರುತೆರೆಯ ಜನಪ್ರಿಯ ನಟಿ ಪವಿತ್ರಾ ಜಯರಾಂ ಅಂತ್ಯಕ್ರಿಯೆ ಹುಟ್ಟೂರು ಮಂಡ್ಯ ತಾಲ್ಲೂಕಿನ ಉಮ್ಮಡಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ತೆಲುಗು ಮತ್ತು ಕನ್ನಡದ ಖ್ಯಾತ ಧಾರಾವಾಹಿ ತ್ರಿನಯನಿ ಮೂಲಕ ಹೆಚ್ಚು ಸದ್ದು ಮಾಡುತ್ತಿದ್ದ ಇವರು ಇಹಲೋಕ ತ್ಯಜಿಸಿದ್ದಾರೆ.
ತ್ರಿನಯನಿ ಖ್ಯಾತಿಯ ಪ್ರಸಿದ್ಧ ಕಿರುತೆರೆ ನಟಿ ಪವಿತ್ರಾ ಜಯರಾಂ ಭಾನುವಾರ ಆಂಧ್ರಪ್ರದೇಶದ ಕರ್ನೂಲ್ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಂಡ್ಯದ ಉಮ್ಮಡಹಳ್ಳಿ ಗ್ರಾಮದಲ್ಲಿ ಆಕೆಯ ಕುಟುಂಬದವರು ಅಂತಿಮ ವಿಧಿವಿಧಾನ ನೆರವೇರಿಸಿದರು. ಈ ಭೀಕರ ಕಾರು ಅಪಘಾತದ ಸಮಯದಲ್ಲಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ಅವರ ಸಹ ನಟ ಚಂದ್ರಕಾಂತ್ ಅವರು ಅಪಘಾತದ ಬಗ್ಗೆ ಆಘಾತಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.

ಅಪಘಾತದ ದಿನ ಆಗಿದ್ದೇನು?
ಪವಿತ್ರಾ ಜಯರಾಂ ಅವರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಮತ್ತು ಅಪಘಾತದ ಸಮಯದಲ್ಲಿ ಅವರ ಜೊತೆಗಿದ್ದ ತೆಲುಗು ನಟ ಚಂದ್ರಕಾಂತ್ ಅವರು ಘಟನೆಯನ್ನು ವಿವರಿಸಿದ್ದಾರೆ. ಅಪಘಾತದಿಂದ ಕೈ ಮೂಳೆ ಮುರಿದುಕೊಂಡಿರುವ ಅವರು, ಪವಿತ್ರಾ ಅವರನ್ನು ನೆನಪಿಸಿಕೊಂಡು ಹಲವು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಜೊತೆಗೆ ಮಾಧ್ಯಮಗಳ ಬಳಿ ಆ ದಿನ ಏನಾಯಿತು ಎಂದು ತಿಳಿಸಿದ್ದಾರೆ.
ತ್ರಿನಯನಿಯಲ್ಲಿ ಪವಿತ್ರಾ ಜಯರಾಂ ಅವರೊಂದಿಗೆ ತೆರೆ ಹಂಚಿಕೊಂಡ ತೆಲುಗು ನಟ ಚಂದ್ರಕಾಂತ್, "ನಾವು ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದೆವು. ಬೆಂಗಳೂರಿನಿಂದ ಮಧ್ಯಾಹ್ನದ ಸುಮಾರಿಗೆ ಹೊರಟೆವು ಆದರೆ ಭಾರೀ ಮಳೆಯಿಂದಾಗಿ ತುಂಬಾ ಹೊತ್ತು ಟ್ರಾಫಿಕ್‌ನಲ್ಲಿ ಸಿಲುಕಿದ್ದೇವು. ಪವಿತ್ರಾ ಜಯರಾಂ ಜೊತೆಗೆ ಅವರ ಸಹೋದರಿಯ ಮಗಳು ಕೂಡ ನಮ್ಮೊಂದಿಗೆ ಪ್ರಯಾಣಿಸುತ್ತಿದ್ದರು, ನಾವು ಮಲಗಿದ್ದಾಗ ಕಾರು ಅಪಘಾತಕ್ಕೀಡಾಗಿದೆ" ಎಂದಿದ್ದಾರೆ.

ಆಕೆಗೆ ಸಡನ್ ಸ್ಟ್ರೋಕ್ ಆಗಿತ್ತು... ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬಂದಿದ್ದರೆ..
ಆಗಿದ್ದು ಏನೆಂದರೆ, ಮಧ್ಯರಾತ್ರಿ 12.30 ಗಂಟೆಗೆ ಕೆಎಸ್ಆರ್ಟಿಸಿ ಬಸ್ ಓವರ್ ಟೇಕ್ ಮಾಡುವಾಗ ಕಾರಿಗೆ ಟಚ್ ಮಾಡಿದೆ. ಹಠಾತ್ತನೆ ಅದನ್ನು ತಪ್ಪಿಸಲು ಚಾಲಕ ಬಲಕ್ಕೆ ಸ್ಟೇರಿಂಗ್ ತಿರುಗಿಸಿದ್ದಾರೆ. ಆಗ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಕಾರ್ ಡ್ರೈವರ್ ತಿಳಿಸಿದ್ದಾನೆ. ಆರಂಭದಲ್ಲಿ, ಯಾರಿಗೂ ಗಾಯವಾಗಲಿಲ್ಲ ಅಥವಾ ಗಂಭೀರವಾಗಿ ಗಾಯಗೊಂಡಿಲ್ಲ ಎಂದೇ ನಾನು ಭಾವಿಸಿದೆವು. ಆದರೆ, ಅನಾಹುತವಾಗಿತ್ತು ಎಂದಿದ್ದಾರೆ.
"ಅಪಘಾತ ನೋಡಿ ಪವಿತ್ರಾ ಏನಾಯಿತು ಎಂದು ಕೇಳಿ ಆಘಾತಕ್ಕೆ ಒಳಗಾಗಿದ್ದರು. ನಮ್ಮನ್ನು ನೋಡಿ ತಕ್ಷಣ ಪ್ರಜ್ಞೆ ಕಳೆದುಕೊಂಡರು. ಆಂಬ್ಯುಲೆನ್ಸ್ ಬರಲು 20 ನಿಮಿಷಗಳು ಬೇಕಾಯಿತು, ಆಂಬ್ಯುಲೆನ್ಸ್ ಸಮಯಕ್ಕೆ ಸರಿಯಾಗಿ ಬಂದಿದ್ದರೆ, ಪವಿತ್ರಾ ಇಂದು ಬದುಕಿರುತ್ತಿದ್ದರು. ನನಗೆ ಪ್ರಜ್ಞೆ ಬಂದಾಗ ನಟಿ ಪವಿತ್ರಾ ಅವರ ನಿಧನದ ಬಗ್ಗೆ ತಿಳಿಸಿದರು " ಎಂದು ಚಂದ್ರಕಾಂತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೊನೆಯ ಫೋಟೋ ಹಂಚಿಕೊಂಡು ಕಣ್ಣೀರಿಟ್ಟ ಚಂದ್ರಕಾಂತ್
ಇನ್ನು, ನಟ ಚಂದ್ರಕಾಂತ್ ಅವರು ಪವಿತ್ರಾ ಜಯರಾಮ್ ಜೊತೆಗೆ ತೆಗೆದುಕೊಂಡ ಕೊನೆಯ ಸೆಲ್ಫಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ಪಾಪಾ ನಿನ್ನ ಜೊತೆ ತೆಗೆದುಕೊಂಡ ಕೊನೆಯ ಚಿತ್ರ ಇದು. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,. ಒಂದೇ ಒಂದು ಸಲಿ ಮಾಮಾ ಅಂತ ಕರಿ ಪ್ಲೀಸ್ ಪವಿತ್ರಾ.. ನನ್ನ ಪವಿ ಇನ್ನಿಲ್ಲ . ದಯವಿಟ್ಟು ಹಿಂತಿರುಗಿ ಬಾ ಪ್ಲೀಸ್" ಎಂದು ಭಾವುಕರಾಗಿ ಫೋಸ್ಟ್ ಹಾಕಿದ್ದಾರೆ.












Click it and Unblock the Notifications