ಮೊದಲ ಪತ್ನಿಗೆ ಡಿವೋರ್ಸ್, 2ನೇ ಪತ್ನಿಯಿಂದ ವರದಕ್ಷಿಣೆ ಕೇಸ್: ನಟ ಆದಿ ಲೋಕೇಶ್ ಜೀವನದಲ್ಲಿ ಆಗಿದ್ದೇನು?
ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಮೈಸೂರು ಲೋಕೇಶ್ ಅವರ ಪುತ್ರ ಆದಿ ಲೋಕೇಶ್ ಕೂಡ ಸಿನಿಪ್ರಿಯರಿಗೆ ಅಚ್ಚುಮೆಚ್ಚು. ಖಳನಟರಾಗಿ, ನಾಯಕ ನಟನಾಗಿಯೂ ಆದಿ ಸಖತ್ ಸೌಂಡ್ ಮಾಡಿದ್ದಾರೆ. ಇನ್ನು ಶಿವರಾಜ್‌ಕುಮಾರ್ ನಟನೆಯ ಬ್ಲಾಕ್‌ಬಸ್ಟರ್ "ಜೋಗಿ" ಸಿನಿಮಾದಲ್ಲಿ 'ಬಿಡ್ಡ' ಪಾತ್ರದಲ್ಲಿ ಆದಿ ಲೋಕೇಶ್ ಎಲ್ಲರ ಗಮನ ಸೆಳೆದಿದ್ದರು. ಅಲ್ಲಿಂದ ಆದಿ ಅವರನ್ನು ಬಹುತೇಕರು ಬಿಡ್ಡ ಎಂದೇ ಕರೆಯುತ್ತಿದ್ದಾರೆ. ಇನ್ನು 'ಪೂಜಾರಿ' ಸಿನಿಮಾ ಮೂಲಕ ನಾಯಕ ನಟನಾಗಿಯೂ ಮಿಂಚಿದ್ದ ಅವರು, ಕೆಲ ವರ್ಷಗಳಿಂದ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ಇನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ತಮ್ಮ ಎರಡು ಮದುವೆ, ಡಿವೋರ್ಸ್ ಸೇರಿ ವೈಯಕ್ತಿಕ ವಿಚಾರ ಹಾಗೂ ಖಾಸಗಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
'ನನ್ನ ಮೊದಲ ಪತ್ನಿ ಸೌಮ್ಯಾ. 2004ರಲ್ಲಿ ಮಗ ಹುಟ್ಟಿದ್ದ. ಹೆಂಡತಿ ಮಗು ಮೈಸೂರಿನಲ್ಲಿದ್ದರು. ಒಂದು ಬಾರಿ ಮಾತ್ರ ನೋಡಿಕೊಂಡು ಹೋಗಿದ್ದೆ. ಆಗ ಜೋಗಿ ಸಿನಿಮಾದಲ್ಲಿ ಫುಲ್ ಬ್ಯುಸಿ ಇದ್ದೆ. ಹಾಗಾಗಿ ನಾನು ಮೈಸೂರು ಕಡೆಗೆ ಬರೋಕೆ ಆಗಲಿಲ್ಲ. ಇದೇ ವಿಚಾರಕ್ಕೆ ಮನಸ್ತಾಪ ಆಗಿತ್ತು. ಸೌಮ್ಯಾ ಅವರನ್ನ ಮತ್ತೆ ವಾಪಸ್ ಬರುವಂತೆ ಕೇಳಿಕೊಂಡೆ. ಆದರೆ ಅವರು ತನ್ನ ತಂದೆ ಕಾಲು ಹಿಡಿದು ಕ್ಷಮೆ ಕೇಳಬೇಕು ಎಂದು ಕೇಳಿದಳು. ಆಗ ನನಗೆ ಈಗೋ ಹರ್ಟ್ ಆಗಿತ್ತು. ಮದುವೆ ಆಗಬೇಕಾದರೆ ಅವರ ಕಾಲು ಹಿಡಿಯಲಿಲ್ಲ, ಈಗ ಯಾಕೆ ಹಿಡಿಯಬೇಕು? ಎಂಬ ಈಗೋ ಅಷ್ಟರಮಟ್ಟಿಗೆ ಇತ್ತು' ಎಂದು ತಮ್ಮ ಖಾಸಗಿ ವಿಚಾರಗಳನ್ನು ಚಿತ್ರಲೋಕ ಸಂದರ್ಶನದಲ್ಲಿ ಆದಿ ಹೇಳಿಕೊಂಡಿದ್ದಾರೆ.

'ಬಳಿಕ ನಾನು ಬಿಂದಾಸ್ ಆಗಿದ್ದೆ. ಆಗ ನನಗೆ ಅರುಣಾ ಎಂಬ ಮಾಡಲ್‌ನ ಪರಿಚಯವಾಯ್ತು. ಅವರು ಆಗಲೇ ಮಿಸ್ ಬೆಂಗಳೂರು ಕಿರೀಟ ಮುಡಿಗೇರಿಸಿಕೊಂಡಿದ್ದರು. ಆ ಮೇಲೆ ನಾವಿಬ್ಬರೂ ಮದುವೆ ಆಗಲು ನಿರ್ಧರಿಸಿದೆವು. ಬೆಂಗಳೂರಿನ ದೇವಸ್ಥಾನದಲ್ಲೇ ಮದುವೆ ಆದೆವು. ಆಗ ಅದು ಭಾರಿ ವಿವಾದಕ್ಕೆ ಕಾರಣವಾಯ್ತು. ಯಾವುದೇ ಸಂಬಂಧವನ್ನು ಮುಗಿಸಿ, ನಂತರ ಮತ್ತೊಂದು ಸಂಬಂಧದ ಕಡೆ ಹೋಗಬೇಕಿತ್ತು. ಆಗ ಮದುವೆ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯ್ತು. ಆಗ ದೊಡ್ಡ ಸುದ್ದಿಯಾಗಿ ಮೊದಲ ಹೆಂಡತಿ ಸೌಮ್ಯಾ ನನಗೆ ನೇರವಾಗಿ ಮದುವೆಯಾಗಿದ್ದು ನಿಜಾನಾ? ಅಂತ ಕೇಳಿದಳು. ನಾನು ಹೌದು ಎಂದೆ. ಆಗ ಆಯ್ತು ಚೆನ್ನಾಗಿರು.. ಎಂದು ಸುಮ್ಮನಾದಳು. ಆಗ ಲೀಗಲ್ ಆಗಿ ಡಿವೋರ್ಸ್ ಕೊಡಲು ನಿರ್ಧರಿಸಿದೆ' ಎಂದಿದ್ದಾರೆ.
ಮೊದಲ ಪತ್ನಿ ಜೊತೆ ಮತ್ತೆ ಒಂದಾದೆ
'ನಾನು ಆಗ ಬ್ಯುಸಿಯಾಗಿದ್ದೆ. ದುಡಿದಿದ್ದೆಲ್ಲ ಫುಲ್ ಪಾರ್ಟಿಗೆ ಖರ್ಚಾಗುತ್ತಿತ್ತು. ಇವತ್ತಿನವರೆಗೆ ನಾನು ಡ್ರಗ್ಸ್ ತಗೊಂಡಿಲ್ಲ. ನಾನು ಮನೆಯಲ್ಲೇ ಇರುತ್ತಿರಲಿಲ್ಲ. ಬಳಿಕ ನನಗೆ ಹಾಗೂ ಅರುಣಾ ಮಧ್ಯೆ ಗಲಾಟೆ ಶುರುವಾಗುತ್ತೆ. ಅರುಣಾ ನನ್ನ ಮೇಲೆ ವರದಕ್ಷಿಣೆ ಕೇಸ್ ಕೂಡ ಹಾಕಿದಳು. ಬಳಿಕ ನನ್ನ ಮೇಲಿನ ಕೇಸ್ ವಾಪಸ್ ಪಡೆಯುತ್ತಾರೆ. ಬಳಿಕ ಇಬ್ಬರೂ ದೂರವಾದೆವು. ನಮ್ಮಿಬ್ಬರಿಗೂ ಏನೂ ಬೇಕಾಗಿರಲಿಲ್ಲ. ಅರುಣಾ, ಸೌಮ್ಯಾ ಇಬ್ಬರೂ ನನ್ನಿಂದ ನಯಾಪೈಸೆ ಪರಿಹಾರವೂ ಕೇಳಲಿಲ್ಲ. ಆಗ ಹಲವು ವರ್ಷಗಳ ಕಾಲ ಒಬ್ಬನೇ ಇದ್ದೆ. ನಂತರ ಮತ್ತೆ ನಾನು ಹಾಗೂ ಮೊದಲ ಪತ್ನಿ ಸೌಮ್ಯಾ ಒಂದಾದೆವು. ಅರುಣಾ ಕೂಡ ಮತ್ತೊಂದು ಮದುವೆ ಆದರು' ಎಂದು ತಮ್ಮ ಜೀವನದಲ್ಲಿ ಎದುರಾದ ತಿರುವುಗಳನ್ನು ಆದಿ ಬಿಚ್ಚಿಟ್ಟಿದ್ದಾರೆ.
'ಸೌಮ್ಯಾ ವಿಚಾರದಲ್ಲಿ ಅಹಂನಿಂದಲೇ ನಾನು ಅರುಣಾನ ಎರಡನೇ ಮದುವೆಯಾಗಿದ್ದು. ನಾನು ಅನ್ನೋ ಅಹಂ ಹೋದಾಗ ನಿಜವಾದ ಜೀವನ ಅರ್ಥವಾಗುತ್ತೆ. ಈ ಎರಡು ಘಟನೆ ಬಳಿಕ ನನಗೆ ನಿಜವಾದ ಪ್ರೀತಿ, ಸಂಬಂಧದ ಮೌಲ್ಯಗಳ ಬಗ್ಗೆ ಅರ್ಥವಾಯ್ತು. ಒಬ್ಬನೇ ಇದ್ದೂ ಇದ್ದೂ ಜೀವನ ಮತ್ತೊಬ್ಬರನ್ನ ಒಪ್ಪಿಕೊಳ್ಳಲು ಆಗುತ್ತಿರಲಿಲ್ಲ. ಹಾಗಾಗಿ ಒಂಟಿಯಾಗಿಯೇ ಇರುತ್ತಿದ್ದೆ' ಎಂದು ಆದಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.












Click it and Unblock the Notifications