ಪುನೀತ್ ಕೆರೆಹಳ್ಳಿಯನ್ನು ಬೆತ್ತಲೆಗೊಳಿಸಿ ಹೊಡೆಯಲಾಯಿತಾ? ಬೆತ್ತಲೆ ಪ್ರಪಂಚದ ಪ್ರತಾಪ ಸಿಂಹರ ಆರೋಪವೇನು?

ನಾಯಿ ಮಾಂಸ ಪಾರ್ಸಲ್ ಬಂದಿದೆ ಅಂತಾ ಕಿರಿಕ್ ಮಾಡಿ, ಬೆಂಗಳೂರಲ್ಲಿ ಗಲಾಟೆ ಮಾಡಿದ್ದ ಪುನೀತ್ ಕೆರೆಹಳ್ಳಿ ಇದೀಗ ಪೊಲೀಸರ ಅತಿಥಿ ಆಗಿದ್ದು ಸಂಚಲನ ಸೃಷ್ಟಿ ಮಾಡಿದೆ. ಈ ಬಗ್ಗೆ ಬಿಜೆಪಿ ಪಕ್ಷದ ನಾಯಕರೇ ವೆರೈಟಿ ವೆರೈಟಿ ಆರೋಪ ಮಾಡುತ್ತಿದ್ದಾರೆ. ಹಾಗಾದ್ರೆ ಪುನೀತ್ ಕೆರೆಹಳ್ಳಿಯನ್ನ ಬೆತ್ತಲೆಗೊಳಿಸಿ ಹೊಡೆಯಲಾಯಿತ? ಬೆತ್ತಲೆ ಪ್ರಪಂಚದ ಪ್ರತಾಪ ಸಿಂಹ ಇದೀಗ ಮಾಡುತ್ತಿರುವ ಆರೋಪ ಏನು? ಮುಂದೆ ಓದಿ.

ಇತ್ತೀಚೆಗಷ್ಟೇ, ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರಾಜಸ್ಥಾನದಿಂದ ನಾಯಿ ಮಾಂಸ ತುಂಬಿರುವ ಬಾಕ್ಸ್ ಬಂದಿವೆ ಅಂತಾ ಗಲಾಟೆ ಆಗಿತ್ತು. ಆಗ ಹಿಂದೂ ಪರ ಸಂಘಟನೆ ನಾಯಕ ಪುನೀತ್ ಕೆರೆಹಳ್ಳಿ ಬಂಧಿಸಿದ ಖಾಕಿ ಪಡೆ ಲಾಕಪ್‌ನಲ್ಲಿ ಬಟ್ಟೆ ಬಿಚ್ಚಿ ಕೂರಿಸಿದ್ದರು ಎಂಬ ಆರೋಪವನ್ನ ಹಿಂದೂ ಸಂಘಟನೆ ಮುಖಂಡರು ಹಾಗೂ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಮೈಸೂರು & ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ ಸಿಂಹ ಅವರು ಮಾಡಿರುವ ಆರೋಪ ಏನು ಗೊತ್ತೆ? ಮುಂದೆ ಓದಿ.

ACP Chandan Is Facing Serious Allegation In Puneeth Kerehalli Matter

ಎಸಿಪಿ ಚಂದನ್‌ಗೆ ಪ್ರತಾಪ್ ಸಿಂಹ ಎಚ್ಚರಿಕೆ!

ಪ್ರತಾಪ್ ಸಿಂಹ ಇದೀಗ ದರ್ಶನ್ ತೂಗುದೀಪ್ ಅವರನ್ನು ಬಂಧಿಸಿದ್ದ ದಕ್ಷ ಅಧಿಕಾರಿ ಎಸಿಪಿ ಚಂದನ್ ಅವರ ವಿರುದ್ಧ ಗಂಭೀರ ಆರೋಪ ಒಂದನ್ನ ಮಾಡಿದ್ದಾರೆ. ಈ ಕುರಿತಾಗಿ ಟ್ವೀಟ್ ಒಂದನ್ನ ಮಾಡಿರುವ ಪ್ರತಾಪ್ ಸಿಂಹ, 'ಸಹೋದರ ಪುನೀತ್ ಕೆರೆಹಳ್ಳಿ ಬಿಡುಗಡೆ ಆಗಿದ್ದಾನೆ. ಆತನನ್ನು ಠಾಣೆಯಲ್ಲಿ ಬೆತ್ತಲುಗೊಳಿಸಿ ಹಿಂಸೆ ಕೊಟ್ಟಿರುವ ACP ಚಂದನ್ ನಾಳೆ ಸ್ಟೇಷನ್ ಗೆ ಬರ್ತೀನಿ, ನೀವು ಇರಬೇಕು.' ಎಂದು ಹೇಳಿ ಎಚ್ಚರಿಕೆಯ ನೀಡಿದ್ದಾರೆ. ಈ ಟ್ವೀಟ್ ವೈರಲ್ ಆಗುತ್ತಿದೆ. ಹಾಗೇ ಬೆಂಗಳೂರಿನಲ್ಲಿ ಮತ್ತೆ ನಾಯಿ ಮಾಂಸ ವಿಚಾರ ಸಂಚಲನ ಸೃಷ್ಟಿಸಿದೆ.

ಎಸಿಪಿ ಚಂದನ್ ಟಾರ್ಗೆಟ್ ಆಗಿದ್ದಾರಾ?

ಬೆಂಗಳೂರಲ್ಲಿ ನಾಯಿ ಮಾಂಸ ಬಂದಿದೆ ಅನ್ನೋದು ಶುದ್ಧ ಸುಳ್ಳು ಅಂತಾ ಅಧಿಕಾರಿಗಳು ಈಗಾಗಲೇ ಹೇಳಿದ್ದಾರೆ. ಹಾಗೇ ಘಟನೆ ಬಗ್ಗೆ ತನಿಖೆ ಕೂಡ ನಡೆಯುವ ಸಮಯದಲ್ಲೇ ಈ ರೀತಿ ಕಿರಿಕ್ ಶುರುವಾಗಿದೆ. ಅಲ್ಲದೆ ದರ್ಶನ್ ತೂಗುದೀಪ್ ಅವರನ್ನ ಬಂಧಿಸಿದ್ದ ದಕ್ಷ ಅಧಿಕಾರಿ ಎಸಿಪಿ ಚಂದನ್ ಅವರ ವಿರುದ್ಧ ರಾಜಕೀಯ ಕುತಂತ್ರ ಶುರುವಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಹೀಗಿದ್ದಾಗಲೇ ಪ್ರತಾಪ್ ಸಿಂಹ ಟ್ವೀಟ್ ಬಗ್ಗೆ ಭಾರಿ ಪರ & ವಿರೋಧ ಚರ್ಚೆ ಕೂಡ ಶುರುವಾಗಿದೆ. ಹಾಗೇ ಮುಂದೆ ಈ ಕೇಸ್ ಹೇಗೆಲ್ಲಾ ತಿರುವು ಪಡೆಯಬಹುದು? ಎಂಬ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ.

ದರ್ಶನ್ ಪ್ರಕರಣದಲ್ಲಿ ಚಂದನ್ ಹವಾ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿದ್ದ ದರ್ಶನ್ ತೂಗೂದೀಪ್ ಅವರನ್ನು ಅರೆಸ್ಟ್ ಮಾಡಲು ಹೋಗಿದ್ದೇ ಎಸಿಪಿ ಚಂದನ್ ಅವರು. ಮೈಸೂರಿಗೆ ಹೋಗಿ ನೇರವಾಗಿ ನಟ ದರ್ಶನ್ ತೂಗೂದೀಪ್ ಅವರನ್ನು ಅರೆಸ್ಟ್ ಮಾಡಿಕೊಂಡು, ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು ಎಸಿಪಿ ಚಂದನ್. ಹೀಗಿದ್ದಾಗಲೇ, ಬೇಕು ಅಂತಲೇ ಬಿಜೆಪಿ ನಾಯಕರು ಎಸಿಪಿ ಚಂದನ್ ಅವರನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+