ಅಲ್ಲು ಅರ್ಜುನ್‌ ಫ್ಯಾನ್ಸ್‌ ಕ್ರೇಜ್‌.. ಕಟೌಟ್‌ ವಿಚಾರದಲ್ಲೂ 'ಪುಷ್ಪ-2' ಭಾರಿ ದಾಖಲೆ

ಟಾಲಿವುಡ್‌ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ-2 ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಪುಷ್ಪ ಸಿನಿಮಾದ ಐಟಂ ಸಾಂಗ್‌ ಕಿಸಿಕ್‌ ಕೂಡ ರಿಲೀಸ್‌ ಆಗಿ ಟ್ರೆಂಡಿಂಗ್‌ನಲ್ಲಿದೆ. ಇನ್ನು ಪುಷ್ಪ ಸಿನಿಮಾದ ಅಲ್ಲು ಅರ್ಜುನ್‌ ಕಟೌಟ್‌ಗಳು ಈಗಿನಿಂದಲೇ ಥಿಯೇಟರ್‌ಗಳ ಬಳಿ ತಲೆಎತ್ತುತ್ತಿವೆ. ಕಟೌಟ್‌ ವಿಚಾರದಲ್ಲಿ ಅಲ್ಲು ಅರ್ಜುನ್‌ ದಾಖಲೆ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಅಲ್ಲು ಅರ್ಜುನ್‌ ಅವರ ಬರೋಬ್ಬರಿ 108 ಅಡಿ ಎತ್ತರದ ಕಟೌಟ್‌ ಸದ್ಯ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಲೆ ಎತ್ತಿದ್ದು, ಇದು ಟಾಲಿವುಡ್‌ನಲ್ಲೇ ಬೇರೆ ಇನ್ಯಾವ ಹೀರೋಗೂ ಇಷ್ಟು ಎತ್ತರವಾದ ಕಟೌಟ್‌ ಈ ಹಿಂದೆ ನಿಲ್ಲಿಸಿರಲಿಲ್ಲ ಎಂದು ಹೇಳಿದೆ.

108 Feet Cutout Of Pushpa-2 Movie In Visakhapatnam Set A Record

ಆಂಧ್ರಪ್ರದೇಶದ ವಿಶಾಖಪಟ್ಟಣದ ಸಂಗಂ ಶರತ್‌ ಥಿಯೇಟರ್‌ ಬಳಿ ಇಷ್ಟು ಎತ್ತರವಾದ ಕಟೌಟ್‌ ನಿಲ್ಲಿಸಲಾಗುತ್ತಿದೆ ಎಂಬ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಈ ಕಟೌಟ್‌ನ ಫೋಟೋಗಳು ಕೂಡ ವೈರಲ್‌ ಆಗಿವೆ. ಅಲ್ಲು ಅರ್ಜುನ್‌ ಅಭಿಮಾನಿಗಳು ಈ ಸಿನಿಮಾವನ್ನು ಒಂದು ರೀತಿ ಹಬ್ಬದಂತೆ ಆಚರಿಸುತ್ತಿದ್ದಾರೆ. ಇದು ಆಂಧ್ರಪ್ರದೇಶದಲ್ಲೇ ಅತಿ ಎತ್ತರವಾದ ಕಟೌಟ್‌ ಎಂದು ಹೇಳಲಾಗುತ್ತಿದೆ.

ಈ ಫೋಟೋಗಳನ್ನು ಅಲ್ಲು ಅರ್ಜುನ್‌ ಅಭಿಮಾನಿಗಳು ಶೇರ್‌ ಮಾಡಿಕೊಂಡಿದ್ದು, ಟಾಲಿವುಡ್‌ನಲ್ಲೇ ಇಷ್ಟು ಎತ್ತರವಾದ ಕಟೌಟ್‌ ಬೇರೆ ಯಾವ ಹೀರೋಗೂ ನಿಲ್ಲಿಸಿರುವ ಉದಾಹರಣೆ ಇಲ್ಲ ಎಂದು ಬರೆದುಕೊಂಡಿದ್ದಾರೆ.

ಅಲ್ಲು ಅರ್ಜುನ್‌ ನಟನೆಯ ಪುಷ್ಪ-2 ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಡಿಸೆಂಬರ್‌ 5ಕ್ಕೆ ಪ್ಯಾನ್‌ ಇಂಡಿಯಾ ರಿಲೀಸ್‌ ಆಗಲಿರುವ ಈ ಸಿನಿಮಾ ಇದಕ್ಕೂ ಮುನ್ನವೇ ಕ್ರೇಜ್‌ ಗಿಟ್ಟಿಸಿಕೊಂಡಿದೆ. ಈ ಸಿನಿಮಾದಲ್ಲಿ ಕನ್ನಡದ ಕಲಾವಿದರು ಮುಖ್ಯಭೂಮಿಕೆಯಲ್ಲಿರುವುದು ಕೂಡ ಗಮನ ಸೆಳೆದಿದೆ.

ಪುಷ್ಪ ಮೊದಲ ಚಾಪ್ಟರ್‌ನಲ್ಲೂ ಐಟಂ ಸಾಂಗ್‌ ಇತ್ತು. ಅದರಲ್ಲಿ ಸಮಂತಾ ಸೊಂಟ ಬಳುಕಿಸಿದ್ರು. ಈಗ ಪುಷ್ಪ-2 ಸಿನಿಮಾದಲ್ಲೂ ಐಟಂ ಸಾಂಗ್‌ ಇದ್ದು, ಇದರಲ್ಲಿ ಕನ್ನಡದ ಬೆಡಗಿ ಶ್ರೀಲೀಲಾ ಕುಣಿದಿದ್ದಾರೆ. ಈ ಹಾಡಿಗೆ ಕಿಸಿಕ್‌ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ರಿಲೀಸ್‌ ಆಗಿ ಎಲ್ಲರ ಬಾಯಲ್ಲಿ ಗುನುಗುತ್ತಿದೆ.

ಶ್ರೀಲೀಲಾ ಕನ್ನಡದಿಂದ ತಮ್ಮ ಸಿನಿ ಕೆರಿಯರ್‌ ಶುರು ಮಾಡಿದ್ದರು. ಆದರೆ ಸದ್ಯ ಟಾಲಿವುಡ್‌ನಲ್ಲಿ ಶ್ರೀಲೀಲಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಅಪಾರ ಅಡ್ಡಾ ಕ್ರಿಯೇಟ್‌ ಮಾಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಪುಷ್ಪರಾಜ್‌ ಪ್ರೇಯಸಿ ಪಾತ್ರದಲ್ಲಿರೋದು ಕೂಡ ಕನ್ನಡದ ರಶ್ಮಿಕಾ ಮಂದಣ್ಣ.

ಮತ್ತೊಂದೆಡೆ ವಿಲನ್‌ ಪಾತ್ರದಲ್ಲಿ ಜಾಲಿರೆಡ್ಡಿಯಾಗಿ ಡಾಲಿ ಧನಂಜಯ್‌ ಸೇರಿ ಕನ್ನಡದ ಅನೇಕರು ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಕನ್ನಡಿಗರಿಗೂ ಪುಷ್ಪ ಸಿನಿಮಾ ಮತ್ತಷ್ಟು ಹತ್ತಿರವಾಗಿದೆ. ಕರ್ನಾಟಕದಲ್ಲೂ ಅಲ್ಲು ಅರ್ಜುನ್‌ ಅವರಿಗೆ ಅಪಾರ ಅಭಿಮಾನಿಗಳಿದ್ದು, ಈ ಸಿನಿಮಾ ರಿಲೀಸ್‌ಗಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕನ್ನಡದಂತೆ ಈ ಸಿನಿಮಾವನ್ನು ಕೂಡ ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಎಲ್ಲರಲ್ಲಿ ಕುತೂಹಲ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+