100ನೇ ಚಿತ್ರ: ಪ್ರೀತಿಯಿಂದ ಶುರುವಾದ ಸ್ನೇಹದ ಕಥೆ: ಪ್ರಿಯದರ್ಶನ್ - ಮೋಹನ್‌ಲಾಲ್ ಅನುಬಂಧ
ಮಲಯಾಳಂ ನಿರ್ದೇಶಕ ಪ್ರಿಯದರ್ಶನ್ ಹೊಸದೊಂದು ದಾಖಲೆ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ 'ಭೂತ್ ಬಂಗ್ಲಾ' ಮತ್ತು ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಅಭಿನಯದ 'ಹೈವಾನ್' ಎಂಬ ಎರಡು ಚಿತ್ರಗಳನ್ನು ಪ್ರಿಯದರ್ಶನ್ ಈಗಾಗಲೇ ನಿರ್ದೇಶಿಸಿದ್ದು, ಈ ಎರಡು ಚಿತ್ರಗಳು ಇದೇ ವರ್ಷ ಬಿಡುಗಡೆಯಾಗಲಿವೆ. ಈ ಮಧ್ಯೆ, ಪಂಕಜ್ ತ್ರಿಪಾಠಿ ಅಭಿನಯದ ಇನ್ನೊಂದು ಚಿತ್ರವನ್ನು ಅವರು ನಿರ್ದೇಶಿಸಲಿದ್ದಾರೆ. ಇದಾದ ಮೇಲೆ ಮುಂದಿನ ವರ್ಷ ಮೋಹನ್ ಲಾಲ್ ಅಭಿನಯದ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ತಯಾರಿ ನಡೆಸಿದ್ದಾರೆ.
ಪ್ರಿಯದರ್ಶನ್ ಕಳೆದ ನಾಲ್ಕು ದಶಕಗಳಿಂದ ಸಿನಿಮಾ ಮಾಡುತ್ತಲೇ ಬಂದಿದ್ದಾರೆ. ಹಾಗಿರುವಾಗ, ಈ ಚಿತ್ರದಲ್ಲೇನು ವಿಶೇಷ ಎಂಬ ಪ್ರಶ್ನೆ ಬರಬಹುದು. ಇದು ಪ್ರಿಯದರ್ಶನ್ ನಿರ್ದೇಶನದ 100ನೇ ಚಿತ್ರವಾಗಲಿದೆ. ಪ್ರಿಯದರ್ಶನ್ ನಿರ್ದೇಶನದ ಮೊದಲ ಚಿತ್ರದಲ್ಲೂ ಮೋಹನ್ ಲಾಲ್ ನಾಯಕನಾಗಿ ನಟಿಸಿದ್ದರು. ಇದೀಗ ಅವರ ನಿರ್ದೇಶನದ 100ನೇ ಚಿತ್ರದಲ್ಲೂ ಲಾಲ್ ನಾಯಕನಾಗಿ ನಟಿಸುತ್ತಿದ್ದಾರೆ.

ಬರೀ ಭಾರತೀಯ ಚಿತ್ರರಂಗವಷ್ಟೇ ಅಲ್ಲ, ಇಡೀ ವಿಶ್ವ ಚಿತ್ರರಂಗದಲ್ಲೇ ಒಬ್ಬ ನಿರ್ದೇಶಕನ ಮೊದಲನೇ ಮತ್ತು 100ನೇ ಚಿತ್ರದಲ್ಲಿ, ಅದೇ ನಟ ನಾಯಕನಾಗಿ ನಟಿಸುತ್ತಿರುವುದು ವಿಶೇಷ, ದಾಖಲೆ, ಹೆಗ್ಗಳಿಕೆ ಎಲ್ಲವೂ ಹೌದು. ಈ ಚಿತ್ರದ ಬಿಡುಗಡೆ ಸಮಾರಂಭದಲ್ಲಿ ತಾವು ನಡೆದು ಬಂದ ಹಾದಿಯನ್ನು ವಿವರಿಸುವ ಪುಸ್ತಕವನ್ನು ಪ್ರಿಯದರ್ಶನ್ ಹೊರತರಲಿದ್ದಾರಂತೆ. ಈಗಾಗಲೇ ಪುಸ್ತಕದ ಕೆಲಸ ಶುರುವಾಗಿದ್ದು, ನಿರ್ದೇಶನದ ಮಧ್ಯೆ ಬರವಣಿಗೆ ಸಹ ಸಾಗಿದೆ ಎಂದು ಪ್ರಿಯದರ್ಶನ್ ಹೇಳಿಕೊಂಡಿದ್ದಾರೆ. ಆ ಪುಸ್ತಕವನ್ನು ಮೋಹನ್ ಲಾಲ್ ಅವರಿಂದಲೇ ಬಿಡುಗಡೆ ಮಾಡಿಸುವ ಆಸೆ ಅವರದ್ದು.
ಪ್ರಿಯದರ್ಶನ್ ನಿರ್ದೇಶನದ ಮೊದಲ ಚಿತ್ರ 'ಪೂಚ್ಚಕ್ಕೊರು ಮೂಕ್ಕುತಿ' ಬಿಡುಗಡೆಯಾಗಿದ್ದು 1984ರಲ್ಲಿ. ಅಲ್ಲಿಂದ 'ಹೈವಾನ್'ವರೆಗೂ (ಇದರಲ್ಲಿ ಮೋಹನ್ ಲಾಲ್ ಅವರದ್ದು ಅತಿಥಿ ಪಾತ್ರವಂತೆ) ಒಟ್ಟು 45 ಚಿತ್ರಗಳಲ್ಲಿ ಲಾಲ್ ಅವರನ್ನು ಪ್ರಿಯದರ್ಶನ್ ನಿರ್ದೇಶನ ಮಾಡಿದ್ದಾರೆ. ಮಲಯಾಳಂ ನಟ ಪ್ರೇಮ್ ನಜೀರ್ ಅಭಿನಯದ 76 ಚಿತ್ರಗಳನ್ನು ಜೆ. ಶಶಿಕುಮಾರ್ ನಿರ್ದೇಶನ ಮಾಡಿದ್ದು, ಜಾಗತಿಕ ಚಿತ್ರರಂಗದಲ್ಲಿ ಮುರಿಯಲಾಗದ ದಾಖಲೆ. ಪ್ರೇಮ್ ನಜೀರ್ ಮತ್ತು ಶಶಿಕುಮಾರ್ ಅವರನ್ನು ಹೊರತುಪಡಿಸಿದರೆ, ಅತೀ ಹೆಚ್ಚು ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದು ಲಾಲ್ ಮತ್ತು ಪ್ರಿಯದರ್ಶನ್ ಜೋಡಿಯೇ.
ಕಳೆದ 42 ವರ್ಷಗಳಲ್ಲಿ 45 ಚಿತ್ರಗಳನ್ನು ಮಾಡಿರುವುದು ಒಂದು ಕಡೆಯಾದರೆ, ಅದರಲ್ಲಿ ಅತೀ ಹೆಚ್ಚು ಯಶಸ್ವಿ ಚಿತ್ರಗಳನ್ನು ನೀಡಿರುವುದು ಈ ಜೋಡಿಯ ಇನ್ನೊಂದು ಹೆಗ್ಗಳಿಕೆ. 'ಪೂಚ್ಚಕ್ಕೊರು ಮೂಕ್ಕುತಿ' ನಂತರ 'ಬೋಯಿಂಗ್ ಬೋಯಿಂಗ್', 'ಚಿತ್ರಂ', 'ಹಲೋ ಮೈ ಡಿಯರ್ ರಾಂಗ್ ನಂಬರ್', 'ಚೆಪ್ಪು', 'ಆರ್ಯನ್', 'ಕಿಲುಕ್ಕುಮ್', 'ವಂದನಂ', 'ಮಿಥುನಂ', 'ತಲವಟ್ಟಂ', 'ಅಕ್ಕರೆ ಅಕ್ಕರೆ ಅಕ್ಕರೆ', 'ಅಭಿಮನ್ಯು' 'ಮಿನ್ನಾರಂ', 'ಅದ್ವೈತಂ', 'ಚಂದ್ರಲೇಖ', 'ಕಾಲಾಪಾನಿ', 'ಒಪ್ಪಂ', 'ಮರಕ್ಕರ್' ಮುಂತಾದ ಹಲವು ಚಿತ್ರಗಳಲ್ಲಿ ಈ ಜೋಡಿ ಒಟ್ಟಾಗಿ ಕೆಲಸ ಮಾಡಿದೆ.
ಈ ಪೈಕಿ 'ಚಿತ್ರಂ' ಚಿತ್ರವು ಕೇರಳದಲ್ಲಿ 366 ದಿನಗಳ ಕಾಲ ಪ್ರದರ್ಶನ ಕಂಡಿತ್ತಂತೆ. ಈ ಚಿತ್ರ ಕನ್ನಡದಲ್ಲಿ 'ರಾಯರು ಬಂದರು ಮಾವನ ಮನೆಗೆ' ಹೆಸರಿನಲ್ಲಿ ರೀಮೇಕ್ ಆಗಿದ್ದಷ್ಟೇ ಅಲ್ಲ, ತೆಲುಗು, ತಮಿಳು ಮತ್ತು ಹಿಂದಿಗೂ ರೀಮೇಕ್ ಆಗಿತ್ತು.
ಬರೀ ಮೋಹನ್ ಲಾಲ್ ಜೊತೆಗಷ್ಟೇ ಅಲ್ಲ, ಮಲಯಾಳಂನ ಇನ್ನಿತರ ಜನಪ್ರಿಯ ನಟರಾದ ಮಮ್ಮುಟ್ಟಿ, ದಿಲೀಪ್, ಸುರೇಶ್ ಗೋಪಿ ಮುಂತಾದವರ ಜೊತೆಗೂ ಪ್ರಿಯದರ್ಶನ್ ಕೆಲಸ ಮಾಡಿದ್ದರೂ, ಇವತ್ತಿಗೂ ಅವರನ್ನು ಜನ ನೆನಪಿಸಿಕೊಳ್ಳುವುದು ಮೋಹನ್ ಲಾಲ್ ಜೊತೆಗಿನ ಚಿತ್ರಗಳಿಂದಲೇ. ಕಾಮಿಡಿ ಚಿತ್ರದಿಂದ ಪ್ರಾರಂಭವಾದ ಅವರ ಪಯಣ, ಮುಂದಿನ ದಿನಗಳಲ್ಲಿ ಬೇರೆ ಜಾನರ್ ಚಿತ್ರಗಳಿಗೂ ವಿಸ್ತರಿಸಿದೆ. ಇಬ್ಬರೂ ಹೆಚ್ಚಾಗಿ ಕಾಮಿಡಿ ಚಿತ್ರಗಳನ್ನು ಮಾಡಿದರೂ, ಕ್ರಮೇಣ ಥ್ರಿಲ್ಲರ್, ಐತಿಹಾಸಿಕ, ಫ್ಯಾಮಿಲಿ ಡ್ರಾಮಾ ಮುಂತಾದ ಬೇರೆ ಶೈಲಿಯ ಚಿತ್ರಗಳನ್ನೂ ಪ್ರಯತ್ನಿಸಿ, ಅದರಲ್ಲೂ ಯಶಸ್ವಿಯಾಗಿದ್ದಾರೆ. ಮೋಹನ್ ಲಾಲ್ ಹಲವು ದಿಗ್ಗಜ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದರೂ, ಪ್ರಿಯದರ್ಶನ್‍ಗಿಂತ ಬೇರೆ ನಿರ್ದೇಶಕರ ಜೊತೆಗೆ ಇನ್ನಷ್ಟು ಉತ್ತಮ ಚಿತ್ರಗಳನ್ನು ಕೊಟ್ಟಿದ್ದರೂ, ಲಾಲ್ ಮತ್ತು ಪ್ರಿಯದರ್ಶನ್ ಜೋಡಿಗೆ ವಿಶೇಷವಾದ ಸ್ಥಾನವಿದೆ.
ಪ್ರಿಯದರ್ಶನ್ ಮತ್ತು ಲಾಲ್ ಅವರ ಗೆಳೆತನ ಬರೀ ಚಿತ್ರಗಳಿಗೆ ಮಾತ್ರ ಸೀಮಿತವಲ್ಲ. ಅದರಾಚೆಗೂ ಇದೆ. ನಿಜ ಜೀವನದಲ್ಲಿ ಲಾಲ್‍ಗಿಂತ ಪ್ರಿಯದರ್ಶನ್ ಮೂರು ವರ್ಷ ಸೀನಿಯರ್ ಆದರೂ, ಚಿತ್ರರಂಗದಲ್ಲಿ ಲಾಲ್ ಸೀನಿಯರ್. ಪ್ರಿಯದರ್ಶನ್ ನಿರ್ದೇಶಕರಾಗುವಷ್ಟರಲ್ಲಿ ಲಾಲ್ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಹಳಬ ಮತ್ತು ಹಿರಿಯರಾಗಿದ್ದರು. ಚಿತ್ರರಂಗದಲ್ಲಿ ಇಬ್ಬರೂ 84ರಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದರೂ, ಅದಕ್ಕೂ ಮೊದಲೇ ಪರಿಚಿತರು. ಒಂದೇ ಪ್ರದೇಶದವರಾದರೂ, ಒಂದೇ ಮೈದಾನದಲ್ಲಿ ಆಡುತ್ತಿದ್ದರೂ, ಇಬ್ಬರ ನಡುವೆ ಅಷ್ಟೇನೂ ಸ್ನೇಹವಿರಲಿಲ್ಲವಂತೆ. ಇಬ್ಬರೂ ಆಪ್ತಮಿತ್ರರಾಗಿದ್ದು ಒಂದು ಹುಡುಗಿಯಿಂದಂತೆ.
ಪ್ರಿಯದರ್ಶನ್ ಒಂದು ಸಂದರ್ಶನದಲ್ಲಿ ಹೇಳಿಕೊಂಡಂತೆ, ತಮ್ಮ ಹಾಗೂ ಲಾಲ್ ಗೆಳೆತನಕ್ಕೆ ಕಾರಣವಾಗಿದ್ದು ಒಬ್ಬ ಹುಡುಗಿ. ಕಾಲೇಜಿನಲ್ಲಿರುವಾಗ ಪ್ರಿಯದರ್ಶನ್ ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದರಂತೆ. ತಮ್ಮದೇ ಕಾಲೇಜಿನಲ್ಲಿದ್ದ ಆ ಹುಡುಗಿಯನ್ನು ಮೆಚ್ಚಿಸುವುದಕ್ಕೆ ಇನ್ನೊಬ್ಬ ಪ್ರಯತ್ನಿಸುತ್ತಿರುವ, ಆಕೆಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ವಿಷಯ ಕಿವಿಗೆ ಬಿದ್ದಿದೆ. ಸರಿ ಅವನನ್ನು ವಿಚಾರಿಸಿಕೊಳ್ಳುವುದಕ್ಕೆ ಇನ್ನೊಬ್ಬ ಗೆಳೆಯನೊಂದಿಗೆ ಆ ಬಸ್ ಸ್ಟಾಪ್‍ಗೆ ಹೋದರಂತೆ ಪ್ರಿಯದರ್ಶನ್. ಬಸ್ ಸ್ಟಾಂಡಿಗೆ ಹೋಗುತ್ತಿದ್ದಂತೆಯೇ ಅಲ್ಲಿ ಕಂಡಿದ್ದು ಮೋಹನ್ ಲಾಲ್. ಪ್ರಿಯದರ್ಶನ್ ಜೊತೆಗೆ ಹೋಗಿದ್ದ ಆ ಗೆಳೆಯನಿಗೆ ಮೋಹನ್ ಲಾಲ್ ಸಹ ಪರಿಚಿತ.
ತನ್ನ ಇಬ್ಬರು ಗೆಳೆಯರು ಒಂದೇ ಹುಡುಗಿಯ ಹಿಂದೆ ಬಿದ್ದಿರುವುದನ್ನು ಗಮನಿಸಿದ ಗೆಳೆಯ, ಅವರಿಬ್ಬರನ್ನು ಪರಿಚಯಿಸಿ, ಇಬ್ಬರ ಮಧ್ಯೆ ಸ್ನೇಹ ಕುದುರಿಸಿದನಂತೆ. ಕೆಲವೇ ದಿನಗಳಲ್ಲಿ ಇಬ್ಬರ ಮಧ್ಯೆ ಸ್ನೇಹ ಎಷ್ಟು ಗಾಢವಾಗಿದೆಯೆಂದರೆ, ಪ್ರೀತಿ ಮರೆತೇ ಹೋಗಿದೆ. ಲಾಲ್ ಇಲ್ಲದೆ ತಮ್ಮ ಜೀವನ ಅಪೂರ್ಣ ಎಂದು ಪ್ರಿಯದರ್ಶನ್ ಹಲವು ಬಾರಿ ಹೇಳಿಕೊಂಡಿದ್ದಾರೆ. ನಮ್ಮ ಸ್ನೇಹ ಬರೀ ಸಿನಿಮಾಗೆ ಮಾತ್ರ ಸೀಮಿತವಲ್ಲ ಎಂದು ಲಾಲ್ ಸಹ ಹೇಳಿಕೊಂಡಿದ್ದಾರೆ.
ಹೀಗೆ ಸ್ನೇಹಿತರಾದ ಲಾಲ್ ಮತ್ತು ಪ್ರಿಯದರ್ಶನ್, 50ಕ್ಕೂ ಹೆಚ್ಚು ವರ್ಷಗಳ ಕಾಲ ಆ ಸ್ನೇಹವನ್ನು ಕಾಪಾಡಿಕೊಂಡು ಬಂದಿದ್ದಾರೆ. ಒಟ್ಟಿಗೆ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಹಲವು ಹೆಗ್ಗಳಿಕೆಗಳಿಗೆ ಪಾತ್ರರಾಗಿದ್ದಾರೆ. ಇದೀಗ ಇನ್ನೊಂದು ಹೆಗ್ಗಳಿಕೆಗೆ ಮುಂದಿನ ವರ್ಷ ಪಾತ್ರರಾಗಲಿದ್ದಾರೆ.
-
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ












Click it and Unblock the Notifications