ಮೋದಿಯನ್ನೇ ತಡವಿಕೊಂಡಿರುವ ಸಿದ್ದು ಸಮಸ್ಯೆ ಮೈ ಮೇಲೆ ಎಳೆದುಕೊಂಡರಾ?

Recommended Video

      ಸಿದ್ದರಾಮಯ್ಯ ಮೋದಿಯವರನ್ನ ಟಾರ್ಗೆಟ್ ಮಾಡಿ ತಪ್ಪು ಮಾಡಿದ್ರಾ? | Oneindia Kannada

      ನರೇಂದ್ರ ಮೋದಿಯವರನ್ನೇ ನೇರಾನೇರ ಎದುರಿಸುವ ಮೂಲಕ ಸಿದ್ದರಾಮಯ್ಯ ತಪ್ಪು ಮಾಡಿದರಾ? ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋದಲ್ಲಿ- ಬಂದಲ್ಲಿ ನರೇಂದ್ರ ಮೋದಿ ಅವರನ್ನೇ ತಡವಿಕೊಂಡು ಸಿದ್ದು ತಪ್ಪು ಮಾಡಿದರು ಎಂದು ಬಿಜೆಪಿ ಪಾಳಯದಲ್ಲಿ ಮಾತು ಹರಿದಾಡುತ್ತಿದೆ.

      ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

      ಸ್ವತಃ ಸಿದ್ದರಾಮಯ್ಯ ಅವರೇ ತಮ್ಮ ಹಾಗೂ ಮೋದಿ ವಿರುದ್ಧದ ಈ ಕದನ ಎಂಬಂತೆ ಬಿಂಬಿಸಿದರು. ಇದು ಸಿದ್ದರಾಮಯ್ಯ ಮಾಡಿದ ಬಹು ದೊಡ್ಡ ತಪ್ಪು ಎಂದು ಬಿಜೆಪಿ ವಲಯದಲ್ಲಿ ಚರ್ಚೆ ಚಾಲ್ತಿಯಲ್ಲಿದೆ. ರಾಷ್ತ್ರೀಯ ನಾಯಕರೊಬ್ಬರನ್ನು ತಡವಿಕೊಂಡ ಸಿದ್ದರಾಮಯ್ಯ ಅವರಿಗೆ ಈ ಆಟದ ಪರಿಣಾಮ ಏನು ಎಂಬ ಅಂದಾಜಿರಲಿಕ್ಕಿಲ್ಲ ಎಂಬುದು ಸಹ ಸದ್ಯಕ್ಕೆ ಚರ್ಚೆಯ ವಿಷಯ.

      ಈ ದೊಡ್ಡ ಆಟ ಸಿದ್ದರಾಮಯ್ಯ ಪಾಲಿಗೆ ದುಬಾರಿ ಆಗುತ್ತಾ? ಇದರ ಬೆಲೆಯನ್ನು ಸಿದ್ದರಾಮಯ್ಯ ತೆರಬೇಕಾಗುತ್ತದಾ? ರಾಜಕೀಯ ವಿಶ್ಲೇಷಕ ಡಾ.ಸಂದೀಪ್ ಶಾಸ್ತ್ರಿ ಅವರು ಒನ್ ಇಂಡಿಯಾ ಜತೆ ಮಾತನಾಡಿ, ವೈಯಕ್ತಿಕ ಮಟ್ಟದ ಈ ರಾಜಕಾರಣ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಎದ್ದು ಕಾಣುತ್ತಿದೆ. ವಾಸ್ತವ ಏನೆಂದರೆ ಬಿಜೆಪಿ ಪಾಲಿನ ಕೇಂದ್ರಬಿಂದು ನರೇಂದ್ರ ಮೋದಿ ಎನ್ನುತ್ತಾರೆ.

      Will Siddaramaiah’s gamble to take Modi head-on pay off?

      ಈ ವಿಚಾರವನ್ನು ಅರ್ಥ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರು ಮೋದಿ ವಿರುದ್ಧವೇ ದಾಳಿಗೆ ಇಳಿದಿದ್ದಾರೆ. ಬಿಜೆಪಿ ಸ್ಥಳೀಯ ಮಟ್ಟದಲ್ಲಿ ಚುನಾವಣೆ ಎದುರಿಸುತ್ತಿಲ್ಲ ಎಂಬುದನ್ನು ಹೇಳುವುದಕ್ಕೆ ಅವರು ಪ್ರಯತ್ನಿಸುತ್ತಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಮೇಲೆ ನಡೆದಿರುವ ಪ್ರಬಲ ರಾಜಕಾರಣ ದಾಳಿಯೂ ಮೋದಿ ಅವರಿಂದಲೇ ಆಗಿರುವುದು ಎಂದರು.

      ಅದ್ದರಿಂದ ಎರಡೂ ಕಡೆಯಿಂದ ಗಮನ ಹರಿಸುತ್ತಿರುವುದು ನಾಯಕತ್ವ ಯಾರದು ಎಂಬ ಆಧಾರದಲ್ಲಿಯೇ. "ಕಾಂಗ್ರೆಸ್ ನ ಚುನಾವಣೆ ಪ್ರಚಾರ ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿದೆ. ಆದರೆ ಬಿಜೆಪಿಯದು ದೆಹಲಿಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಸವಾಲಂತೂ ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ. ಆದರೆ ಇದು ಪ್ರಜ್ಞಾಪೂರ್ವಕವಾದ ನಿರ್ಧಾರ" ಎನ್ನುತ್ತಾರೆ ಸಂದೀಪ್ ಶಾಸ್ತ್ರಿ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+