ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಮತ ಸಾಬೀತಿಗೆ ಸುಪ್ರೀಂ ಸೂಚನೆ : ತೀರ್ಪಿನ ಪ್ರಮುಖ ಅಂಶಗಳು

By Gururaj
|
Google Oneindia Kannada News

Recommended Video

ಬಹುಮತ ಸಾಬೀತಿಗೆ ಸುಪ್ರೀಂ ಸೂಚನೆ : ತೀರ್ಪಿನ ಪ್ರಮುಖ ಅಂಶಗಳು | Oneindia Kannada

ಬೆಂಗಳೂರು, ಮೇ 18 : ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಬಹುಮತ ಸಾಬೀತು ಮಾಡಬೇಕು. ಬಿಜೆಪಿ ಸರ್ಕಾರ ಬಹುಮತವನ್ನು ಸಾಬೀತು ಮಾಡಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.

ಶನಿವಾರವೇ ಬಿಜೆಪಿ ವಿಶ್ವಾಸ ಮತ ಸಾಬೀತು ಮಾಡಬೇಕುಶನಿವಾರವೇ ಬಿಜೆಪಿ ವಿಶ್ವಾಸ ಮತ ಸಾಬೀತು ಮಾಡಬೇಕು

ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿರುವ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರ ಕ್ರಮ ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ತ್ರಿ ಸದಸ್ಯ ಪೀಠ ಶನಿವಾರ ಬಹುಮತ ಸಾಬೀತು ಮಾಡುವಂತೆ ಸೂಚನೆ ನೀಡಿದೆ.

ಯಡಿಯೂರಪ್ಪ ಬರೆದ ಎರಡು ಪತ್ರಗಳು ಸುಪ್ರೀಂ ಟೇಬಲ್ ಮೇಲೆಯಡಿಯೂರಪ್ಪ ಬರೆದ ಎರಡು ಪತ್ರಗಳು ಸುಪ್ರೀಂ ಟೇಬಲ್ ಮೇಲೆ

SC orders floor test in Karnataka assembly : Supreme Court order highlights

ಸುಪ್ರೀಂಕೋರ್ಟ್‌ ತೀರ್ಪಿನ ಪ್ರಮುಖ ಅಂಶಗಳು

* ಶನಿವಾರ ಸಂಜೆ 4 ಗಂಟೆಗೆ ಬಿಜೆಪಿ ಸರ್ಕಾರ ವಿಶ್ವಾಸಮತವನ್ನು ಸಾಬೀತು ಮಾಡಬೇಕು
* ಹಂಗಾಮಿ ಸ್ಪೀಕರ್ ನೇಮಕವಾಗಲಿದೆ. ಅವರು ಎಲ್ಲಾ ಪ್ರಕ್ರಿಯೆಗಳನ್ನು ನಡೆಸಬೇಕು
* ವಿಶ್ವಾಸಮತ ಯಾಚನೆ ಆಗುವ ತನಕ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದು
* ವಿಶ್ವಾಸಮತ ಯಾಚನೆ ವೇಳೆ ರಹಸ್ಯ ಮತದಾನಕ್ಕೆ ಅವಕಾಶವಿಲ್ಲ
* ವಿಶ್ವಾಸ ಮತಯಾಚನೆ ಪಾರದರ್ಶಕವಾಗಿ ನಡೆಯಬೇಕು
* ಎಲ್ಲಾ ಶಾಸಕರು ಕಡ್ಡಾಯವಾಗಿ ಪ್ರಮಾಣ ವಚನ ಸ್ವೀಕರಿಸಬೇಕು
* ಪೊಲೀಸ್ ಇಲಾಖೆ ಶಾಸಕರಿಗೆ ಭದ್ರತೆ ಒದಗಿಸಬೇಕು

English summary
Supreme Court of India directed for floor test in Karnataka Assembly on May 19, 2018 at 4 PM. Here are the highlights of the Supreme Court order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X