Get Updates
Get notified of breaking news, exclusive insights, and must-see stories!

ಜನಪರವಾದ ಸರ್ಕಾರ ನನ್ನ ಕರ್ನಾಟಕದಲ್ಲಿ ಬರಬೇಕು : ಮಧು ಬಂಗಾರಪ್ಪ

Recommended Video

      My Dream Of Karnataka : ಜನಪರವಾದ ಸರ್ಕಾರ ನನ್ನ ಕರ್ನಾಟಕದಲ್ಲಿ ಬರಬೇಕು : ಮಧು ಬಂಗಾರಪ್ಪ | Oneindia Kannada

      ಶಿವಮೊಗ್ಗ, ಮೇ 08 : 'ಜನಪರವಾದ, ಜನಸ್ನೇಹಿಯಾದ ಸರ್ಕಾರ ನನ್ನ ಕನಸಿನ ಕರ್ನಾಟಕದಲ್ಲಿ ಇರಬೇಕು' ಎಂದು ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಹೇಳಿದರು.

      ಸೊರಬ ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್‌ ನಾಯಕ ಮಧು ಬಂಗಾರಪ್ಪ. ಈ ಬಾರಿಯ ಚುನಾವಣೆಗೂ ಅವರು ಸೊರಬ ಕ್ಷೇತ್ರದ ಅಭ್ಯರ್ಥಿ.

      ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಮಧು ಬಂಗಾರಪ್ಪ ಅವರು ಕನಸಿನ ಕರ್ನಾಟಕ ಹೇಗಿರಬೇಕು? ಎಂಬ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡರು. 'ಸರ್ಕಾರದ ಕ್ಯಾಪ್ಟನ್ ಆಗಿರುವವರು ಜನರ ಸಮಸ್ಯೆಗಳನ್ನು ಆರ್ಥ ಮಾಡಿಕೊಳ್ಳುವಂತಹ ಸರ್ಕಾರ ಕರ್ನಾಟಕದಲ್ಲಿ ಬರಬೇಕು' ಎಂದರು.

      Madhu Bangarappa shares his dream about Karnataka

      'ಜನರ ಪರವಾದ ಸರ್ಕಾರ ರಾಜ್ಯದಲ್ಲಿ ಇರಬೇಕು. ಜನರ ವಿಶ್ವಾಸವನ್ನು ಪಡೆಯುವ ಸರ್ಕಾರವಿರಬೇಕು. ಜನರ ಜೊತೆ ಸ್ನೇಹವಾಗಿ, ಅವರ ಅಗತ್ಯಗಳನ್ನು ತಿಳಿದುಕೊಂಡು ಸೌಲಭ್ಯಗಳನ್ನು ಒದಗಿಸುವ ಸರ್ಕಾರ ಅಸ್ತಿತ್ವಕ್ಕೆ ಬರಬೇಕು' ಎಂದು ಮಧು ಬಂಗಾರಪ್ಪ ಹೇಳಿದರು.

      'ಜನಪರವಾದ ಸರ್ಕಾರ ನೀಡುವುದಕ್ಕೆ ಸ್ನೇಹಜೀವಿ ಮತ್ತು ಹೃದಯ ಶ್ರೀಮಂತಿಕೆ ಇರುವ ನಾಯಕರು ಬೇಕಾಗುತ್ತಾರೆ. ದಬ್ಬಾಳಿಕೆ ಮಾಡುವುದು, ಸಮಾಜವನ್ನು ಒಡೆಯುವುದು, ಜಾತಿಯನ್ನು ವಿಂಗಡನೆ ಮಾಡುವ ಸರ್ಕಾರ ನನ್ನ ಕನಸಿನ ಕರ್ನಾಟಕದಲ್ಲಿ ಬೇಡ' ಎಂದು ಮಧು ಬಂಗಾರಪ್ಪ ತಿಳಿಸಿದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+