ಬಿಜೆಪಿ ಭದ್ರಕೋಟೆಯಾದ ಶಿವಮೊಗ್ಗ, ಚುನಾವಣೆಯಲ್ಲಿ ಗೆದ್ದವರು, ಸೋತವರು

ಬೆಂಗಳೂರು, ಮೇ 15 : ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಒಂದು ಸ್ಥಾನದಲ್ಲಿಯೂ ಜಯಗಳಿಸಿರಲಿಲ್ಲ.

ಶಿವಮೊಗ್ಗ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ. ಜಿಲ್ಲೆಯಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಭದ್ರಾವತಿ ಹೊರತುಪಡಿಸಿ ಉಳಿದ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ.

ಜಿಲ್ಲೆಯಲ್ಲಿ ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿಕಾರಿಪುರ, ಸೊರಬ, ತೀರ್ಥಹಳ್ಳಿ, ಸಾಗರ ವಿಧಾನಸಭಾ ಕ್ಷೇತ್ರಗಳಿವೆ. ಯಡಿಯೂರಪ್ಪ ಅವರ ಪ್ರಭಾವ ಜಿಲ್ಲೆಯಲ್ಲಿ ಕೆಲಸ ಮಾಡಿದ್ದು 6 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

Karnataka elections results 2018 : Shivamogga district winners and losers

ಬಿಜೆಪಿಯ ರಾಜ್ಯಾಧ್ಯಕ್ಷ ಮತ್ತು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರು 86,983 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ: ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಪಡೆದ ಮತಗಳು ಸೋತವರು ಪಕ್ಷ ಪಡೆದ ಮತಗಳು
ಶಿವಮೊಗ್ಗ ನಗರ
ಕೆ.ಎಸ್.ಈಶ್ವರಪ್ಪ ಬಿಜೆಪಿ 104027 ಕೆ.ಬಿ.ಪ್ರಸನ್ನ ಕುಮಾರ್
ಕಾಂಗ್ರೆಸ್ 57920
ಶಿವಮೊಗ್ಗ ಗ್ರಾಮಾಂತರ
ಅಶೋಕ್ ನಾಯ್ಕ್ ಬಿಜೆಪಿ 69326 ಶಾರದಾ ಪೂರ್ಯಾನಾಯ್ಕ ಜೆಡಿಎಸ್ 65549
ತೀರ್ಥಹಳ್ಳಿ
ಆರಗ ಜ್ಞಾನೇಂದ್ರ ಬಿಜೆಪಿ 67527 ಕಿಮ್ಮನೆ ರತ್ನಾಕರ ಕಾಂಗ್ರೆಸ್ 45572
ಸಾಗರ
ಹರತಾಳು ಹಾಲಪ್ಪ ಬಿಜೆಪಿ 78475 ಕಾಗೋಡು ತಿಮ್ಮಪ್ಪ ಕಾಂಗ್ರೆಸ್ 70436
ಶಿಕಾರಿಪುರ
ಬಿ.ಎಸ್.ಯಡಿಯೂರಪ್ಪ ಬಿಜೆಪಿ 86983 ಗೋಣಿ ಮಾಲತೇಶ್ ಕಾಂಗ್ರೆಸ್ 51586
ಸೊರಬ ಕುಮಾರ್ ಬಂಗಾರಪ್ಪ ಬಿಜೆಪಿ 72091 ಮಧು ಬಂಗಾರಪ್ಪ ಜೆಡಿಎಸ್ 58805
ಭದ್ರಾವತಿ ಬಿ.ಕೆ.ಸಂಗಮೇಶ್ ಕಾಂಗ್ರೆಸ್ 75722 ಅಪ್ಪಾಜಿ ಗೌಡ
ಜೆಡಿಎಸ್ 64155
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+