ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್-ಕಾಂಗ್ರೆಸ್ ಕುಚುಕು ಕುಚುಕು... ಜನಾದೇಶಕ್ಕೆ ಕವಿಯಿತು ಮಂಕು!

|
Google Oneindia Kannada News

ಬೆಂಗಳೂರು, ಮೇ 16: ಕರ್ನಾಟಕ ರಾಜ್ಯದಲ್ಲಿ ಇನ್ನೇನು ಕುದುರೆ ವ್ಯಾಪಾರ ನಡೆಯಲು ಅಖಾಡ ಸಿದ್ಧವಾಗಿದೆ. ಅತಂತ್ರ ವಿಧಾನಸಭೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಲು ಉಭಯ ಪಕ್ಷಗಳ ನಾಯಕರು ಉತ್ಸುಕತೆ ತೋರಿದ್ದಾರೆ.

ಇತ್ತ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಸಹ ಎಲ್ಲಾ ಸಾಧ್ಯತೆಗಳನ್ನೂ ಪ್ರಯತ್ನಿಸುತ್ತಿದೆ. ಹೀಗಿರುವಾಗ ಬದ್ಧ ವೈರಿಗಳಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿ ಅಧಿಕಾರ ನಡೆಸುತ್ತಿರುವ ಕುರಿತು ಸಾಕಷ್ಟು ಜನ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ 12 ಶಾಸಕರು ಗೈರುಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ 12 ಶಾಸಕರು ಗೈರು

ಒಂದು ಕಾಲದಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಬಿ ಪಕ್ಷ, ಜೆಡಿಎಸ್ ನಲ್ಲಿ ಎಸ್ ಅಂದ್ರೆ ಸಂಘ ಎಂದಿದ್ದ ಕಾಂಗ್ರೆಸ್ಸಿಗರೇ ಇಂದು ಜೆಡಿಎಸ್ ಜೊತೆ ಕೈಜೋಡಿಸುತ್ತಿದ್ದಾರೆ. ಕುಚುಕು ಕುಚುಕು ಎನ್ನುತ್ತಿರುವ ಜೆಡಿಎಸ್ ಕಾಂಗ್ರೆಸ್ ನಡೆಯಿಂದ ಜನಾದೇಶಕ್ಕೆ ಮಂಕು ಕವಿದಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Array

ಇದೇನಿದು? ಬಿಜೆಪಿ ಬಿ ಟೀಂ ಜೊತೆ ಕಾಂಗ್ರೆಸ್ ದೋಸ್ತಿ!

"ಜೆಡಿಎಸ್ ಎಂದರೆ ಜನತಾದಳ ಸಂಘ ಎಂದು ಕರೆದು, ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದಿದ್ದ ರಾಹುಲ್ ಗಾಂಧಿಯವರೇ ಇಂದು ಜೆಡಿಎಸ್ ಜೊತೆ ಕೈಜೋಡಿಸುತ್ತಿದ್ದಾರೆ. ಅಂದರೆ ಜೆಡಿಎಸ್ ಅನ್ನೂ ಕೋಮುವಾದಿಗಳು ಎಂದಿದ್ದ ರಾಹುಲ್ ಗಾಂಧಿ ಇದೀಗ ಎಚ್ ಡಿ ಕುಮಾರಸ್ವಾಮಿ ಮತ್ತು ದೇವೇಗೌಡರ ಕ್ಷಮೆ ಕೇಳುತ್ತಾರಾ" ಎಂದು ಕಿಚಾಯಿಸಿದ್ದಾರೆ ಷನ್ವಾಜ್ ಪೂನಾವಾಲಾ.

ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಜೆಡಿಎಸ್‌ ಬಲ ವೃದ್ಧಿ! ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಜೆಡಿಎಸ್‌ ಬಲ ವೃದ್ಧಿ!

ರಾಜ್ಯಪಾಲರು ಏನು ಮಾಡಬೇಕು?

ಪ್ರಧಾನಿ ಮೋದಿಯವರ ಹಳೆಯ ಸ್ನೇಹಿತರಾದ ಕರ್ನಾಟಕ ರಾಜ್ಯಪಾಲ ವಜುಭಾಯ್ ವಾಲಾ ಅವರು ಈಗ ಏನು ಮಾಡಬೇಕು? ಗೋವಾ, ಮಣಿಪುರ ಮತ್ತ ನಾಗಾಲ್ಯಾಂಡ್ ಗಳಲ್ಲಿ ರಾಜ್ಯಪಾಲರು ಇತ್ತೀಚೆಗೆ ಏನು ಮಾಡಿದರೋ ಅದನ್ನೇ ಮಾಡಬೇಕು ಎಂದು ಬಿಜೆಪಿಗೆ ಛೀಮಾರಿ ಹಾಕಿದ್ದಾರೆ ಸ್ವಾತಿ ಚತುರ್ವೇದಿ.

ಕಾಂಗ್ರೆಸ್ ಮಾಡಿದ್ದೂ ಇದನ್ನೇ!

ಕಾಂಗ್ರೆಸ್ ದಶಕಗಳ ಹಿಂದೆ ಮಾಡಿದ್ದನ್ನೇ ಬಿಜೆಪಿಯೂ ಮಾಡುತ್ತಿದೆ. ಕಾಂಗ್ರೆಸ್ ಈ ಕೆಲಸ ಮಾಡಿದಾಗ ಯಾರೂ ಪ್ರಶ್ನೆ ಕೇಳಿರಲಿಲ್ಲ. ಇಂದಿರಾ ಗಾಂಧಿಯವರು ತಮಗೆ ಬೇಕಾದ ರಾಜ್ಯಗಳಿಗೆ ತಮ್ಮದೇ ಪಕ್ಷದ ರಾಜ್ಯಪಾಲರನ್ನು ನೇಮಿಸುತ್ತಿದ್ದರು. ಈಗ ಬಿಜೆಪಿಯೂ ಅದನ್ನೇ ಮಾಡುತ್ತಿದೆ. ಆದರೆ ಕಾಂಗ್ರೆಸ್ ಮಾಡಿದಾಗ ಪ್ರಶ್ನಿಸುವವರು ಯಾರೂ ಇರುವುದಿಲ್ಲ ಎಂದಿದ್ದಾರೆ ರೂಪಾ ಸುಬ್ರಹ್ಮಣ್ಯ.

ಇದನ್ನು ಚಾಣಕ್ಯ ನೀತಿ ಎನ್ನುತ್ತಾರಾ?

ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಕಾಂಗ್ರೆಸ್ ಜೆಡಿಎಸ್ ಜೊತೆ ಕೈಜೋಡಿಸುತ್ತಿದೆ. ಅದೂ ಅರ್ಧಕ್ಕೂ ಹೆಚ್ಚು ಸ್ಥಾನವನ್ನೂ ಗೆಲ್ಲದ ಜೆಡಿಎಸ್ ಸರ್ಕಾರ ರಚಿಸುತ್ತಿದೆ. ಇಂಥ ನಡೆಯನ್ನು ಪತ್ರಕರ್ತರು, ರಾಜಕೀಯ ಪಂಡಿತರು ಸೋನಿಯಾಗಾಂಧಿಯವರ ತ್ಯಾಗ, ಚಾಣಕ್ಯನೀತಿ, ಮಾಸ್ಟರ್ ಸ್ಟ್ರೋಕ್ ಎಂದು ಬಣ್ಣಿಸುತ್ತಿದ್ದಾರೆ. ಎಂಥ ತಮಾಷೆ! ಎಂದು ಟ್ವೀಟ್ ಮಾಡಿದ್ದಾರೆ ಗೀತಿಕಾ.

English summary
Karnataka election results 2018: Many people blames JDS-Congress coalition in Karnataka. Here are twitter comments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X