ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಚುನಾವಣಾ ಕಣದಲ್ಲಿದ್ದ ಸಂಸದರು, ಎಂಎಲ್ಸಿಗಳ ರಿಪೋರ್ಟ್ ಕಾರ್ಡ್

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಮೇ 16: ಹಾಲಿ ಶಾಸಕರು, ಸಚಿವರ ಜತೆಗೆ ಕಾರ್ಪೊರೇಟರ್ ಗಳು, ಎಂಎಲ್ಸಿಗಳು, ಸಂಸದರು ಕೂಡಾ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ ನಾಲ್ವರು ಎಂಎಲ್ಸಿಗಳು ಹಾಗೂ ಮೂವರು ಸಂಸದರು 15ನೇ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

  ಸಂಸದರ ಪೈಕಿ ಶಿವಮೊಗ್ಗದಿಂದ ಲೋಕಸಭೆಗೆ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹೆಸರು ಪಟ್ಟಿಯಲ್ಲಿ ಮೊದಲಿಗೆ ಬರುತ್ತದೆ. ಬಿಎಸ್ವೈ ಬೆನ್ನಲ್ಲೇ ಬಳ್ಳಾರಿಯ ಸಂಸದ ಬಿ. ಶ್ರೀರಾಮುಲು ಕಣದಲ್ಲಿದ್ದವರು. ಕಡೂರು-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಅಸೆಂಬ್ಲಿ ಕಣಕ್ಕೆ ಇಳಿಯುವ ಉತ್ಸಾಹ ತೋರಿದ್ದರೂ, ಟಿಕೆಟ್ ಸಿಗಲಿಲ್ಲ.

  ಸೋತು ಸುಣ್ಣವಾದ ಸಿದ್ದರಾಮಯ್ಯ ಸಂಪುಟದ 15 ಸಚಿವರು

  ಎಂಎಲ್ಸಿಗಳ ಪೈಕಿ ಜಿ ಪರಮೇಶ್ವರ ಅವರು ಈ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಬೈರತಿ ಸುರೇಶ್ ಅವರು ಚುನಾವಣೆಗೂ ಮುಂಚಿತವಾಗಿ ರಾಜೀನಾಮೆ ಸಲ್ಲಿಸಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದಾರೆ. ಮೂಡಿಗೆರೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೋಟಮ್ಮ ಅವರು ಸೋಲು ಕಂಡಿದ್ದಾರೆ.

  ಶಾಪ ಮುಂದುವರಿಕೆ : ಮುಜರಾಯಿ ಸಚಿವರು ಚುನಾವಣೆ ಸೋಲು

  ಮಿಕ್ಕಂತೆ ಯಾರೆಲ್ಲ ಎಂಎಲ್ಸಿಗಳು, ಸಂಸದರು ಅಸೆಂಬ್ಲಿಗೆ ಪ್ರವೇಶ ಬಯಸಿದ್ದರು? ಯಾರೆಲ್ಲ ಇದರಲ್ಲಿ ಟಿಕೆಟ್ ಪಡೆದು ಸ್ಪರ್ಧಿಸಿದ್ದರು? ಯಾರೆಲ್ಲ ಗೆಲುವಿನ ನಗೆ ಬೀರಿದರು? ಎಂಬುದರ ಮಾಹಿತಿ ಮುಂದಿದೆ...

  ಆಯ್ಕೆಯಾದ ಸಂಸದರು, ಎಂಎಲ್ಸಿಗಳು

  ಆಯ್ಕೆಯಾದ ಸಂಸದರು, ಎಂಎಲ್ಸಿಗಳು

  ಆಯ್ಕೆಯಾದ ಸಂಸದರು,
  * ಸಿಎಸ್ ಪುಟ್ಟರಾಜು- ಮೇಲುಕೋಟೆ(ಮಂಡ್ಯ)
  * ಬಿಎಸ್ ಯಡಿಯೂರಪ್ಪ- ಶಿಕಾರಿಪುರ(ಶಿವಮೊಗ್ಗ)
  * ಬಿ ಶ್ರೀರಾಮುಲು -ಮೊಳಕಾಲ್ಮೂರು(ಬಳ್ಳಾರಿ)

  ***
  ಎಂಎಲ್ಸಿಗಳು
  * ಕೆಎಸ್ ಈಶ್ವರಪ್ಪ (ಶಿವಮೊಗ್ಗ)
  * ಬೈರತಿ ಸುರೇಶ್ (ಹೆಬ್ಬಾಳ) (ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ)
  * ಬಸನಗೌಡ ಪಾಟೀಲ್ ಯತ್ನಾಳ್ (ವಿಜಯಪುರ)
  * ವಿ ಸೋಮಣ್ಣ(ಗೋವಿಂದರಾಜನಗರ)
  * ಜಿ ಪರಮೇಶ್ವರ(ಕೊರಟಗೆರೆ)

  ಬಿಜೆಪಿ 3 ಎಂಎಲ್ಸಿಗಳಿಗೆ ಜಯ

  ಬಿಜೆಪಿ 3 ಎಂಎಲ್ಸಿಗಳಿಗೆ ಜಯ

  1. ಬಿಜೆಪಿ ಎಂಎಲ್ಸಿ ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ 46, 107 ಮತಗಳ ಅಂತರದಿಂದ ಕಾಂಗ್ರೆಸ್ಸಿನ ಪ್ರಸನ್ನಕುಮಾರ್ ಅವರನ್ನು ಸೋಲಿಸಿದರು.

  2. ಮಾಜಿ ಸಚಿವ ವಿ ಸೋಮಣ್ಣ ಅವರು ಈ ಬಾರಿ ಗೋವಿಂದರಾಜನಗರ ಬದಲಿಗೆ ಚಾಮರಾಜನಗರದ ಹನೂರು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ. ಆದರೆ, ಕೊನೆಗೆ ಒಲ್ಲದ ಮನಸ್ಸಿನಿಂದ ಸ್ಪರ್ಧಿಸಿದರೂ ಅತ್ಯಂತ ಶ್ರೀಮಂತ ಅಭ್ಯರ್ಥಿ ಪ್ರಿಯಕೃಷ್ಣ ವಿರುದ್ಧ 11,375 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

  3. ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ಸಿನ ಹಮೀದ್ ಮುಶ್ರೀಫ್ ಅವರ ವಿರುದ್ಧ 6,413 ಮತಗಳ ಅಂತರದಿಂದ ಜಯ ಗಳಿಸಿ, ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

  ಆಯ್ಕೆಯಾದ ಮೂವರು ಸಂಸದರು

  ಆಯ್ಕೆಯಾದ ಮೂವರು ಸಂಸದರು

  * ಸಿಎಸ್ ಪುಟ್ಟರಾಜು- ಮೇಲುಕೋಟೆ(ಮಂಡ್ಯ)
  -ಜೆಡಿಎಸ್ ನ ಮಂಡ್ಯ ಸಂಸದ ಸಿಎಸ್ ಪುಟ್ಟರಾಜು ಅವರು ಮೇಲುಕೋಟೆಯಿಂದ ಸ್ಪರ್ಧಿಸಿ 22,224 ಅಂತರದಿಂದ ಸ್ವರಾಜ್ ಇಂಡಿಯಾ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸೋಲಿಸಿದರು.
  * ಬಿಎಸ್ ಯಡಿಯೂರಪ್ಪ- ಶಿಕಾರಿಪುರ(ಶಿವಮೊಗ್ಗ)
  - ಶಿವಮೊಗ್ಗದ ಸಂಸದ ಯಡಿಯೂರಪ್ಪ ಅವರು ಶಿಕಾರಿಪುರದಿಂದ ಸ್ಪರ್ಧಿಸಿ 35,397 ಅಂತರದಿಂದ ಕಾಂಗ್ರೆಸ್ಸಿನ ಗೋಣಿ ಮಾಲತೇಶ್ ಅವರ ವಿರುದ್ಧ ಗೆಲುವು ಸಾಧಿಸಿದರು.
  * ಬಿ ಶ್ರೀರಾಮುಲು -ಮೊಳಕಾಲ್ಮೂರು(ಬಳ್ಳಾರಿ)

  -ಬಾದಾಮಿಯಲ್ಲಿ ಸ್ಪರ್ಧಿಸಿ ಸೋಲು ಕಂಡಿರುವ ಬಿ ಶ್ರೀರಾಮುಲು ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ 42,045 ಅಂತರದಿಂದ ಕಾಂಗ್ರೆಸ್ಸಿನ ಡಾ. ಯೋಗೇಶ್ ಬಾಬು ಅವರನ್ನು ಸೋಲಿಸಿದರು.

  ಕಾಂಗ್ರೆಸ್ಸಿನ ಎಂಎಲ್ಸಿಗಳು

  ಕಾಂಗ್ರೆಸ್ಸಿನ ಎಂಎಲ್ಸಿಗಳು

  * ಬೈರತಿ ಸುರೇಶ್ (ಹೆಬ್ಬಾಳ) (ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ)

  - ಹೆಬ್ಬಾಳದ ಟಿಕೆಟ್ ಆಕಾಂಕ್ಷಿಗಳ ಪೈಕಿ ಎಂಎಲ್ಸಿ ಬೈರತಿ ಸುರೇಶ್ ಹಾಗೂ ಸಾರಿಗೆ ಸಚಿವ ಎಚ್ಎಂ ರೇವಣ್ಣ ನಡುವೆ ಪೈಪೋಟಿ ನಡೆದಿತ್ತು. ಬೈರತಿ ಸುರೇಶ್ ಅವರಿಗೆ ಇಲ್ಲಿ ಟಿಕೆಟ್ ನೀಡುವುದು ಖಚಿತವಾಗುತ್ತಿದ್ದಂತೆ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧಿಸಿದರು. ಹೆಬ್ಬಾಳ ಕ್ಷೇತ್ರದಲ್ಲಿ 18 069 ಮತಗಳ ಅಂತರದಿಂದ ಹಾಲಿ ಶಾಸಕ ಬಿಜೆಪಿಯ ನಾರಾಯಣಸ್ವಾಮಿ ಅವರನ್ನು ಸೋಲಿಸಿದರು.

  * ಜಿ ಪರಮೇಶ್ವರ

  - ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರು ಕೊರಟಗೆರೆ(ಮೀಸಲು)ಕ್ಷೇತ್ರದಿಂದ ಸ್ಪರ್ಧಿಸಿ 7,619 ಮತಗಳ ಅಂತರದಿಂದ ಜೆಡಿಎಸ್ ನ ಸುಧಾಕರ್ ಲಾಲ್ ಅವರನ್ನು ಸೋಲಿಸಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Karnataka Elections 2018: MPs, MLCs from all parties especially from BJP are aspired to enter Assembly poll fray. But, almost all failed to successed. 4 MLC, 3 MPs including BS Yeddyurappa elected to 15th assembly.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more