ಶಿರಾ ಕ್ಷೇತ್ರದಲ್ಲಿ ಸೌಕರ್ಯಕ್ಕೂ ಲೆಕ್ಕಾಚಾರದ ವಿತರಣೆ ಆರೋಪ

ತುಮಕೂರು ಜಿಲ್ಲೆ ಶಿರಾ ಕಾನೂನು ಸಚಿವ ಟಿ.ಬಿ.ಜಯಚಂದ್ರ ಪ್ರತಿನಿಧಿಸುವ ಕ್ಷೇತ್ರ. ಒಕ್ಕಲಿಗರು ಹಾಗೂ ಕುರುಬ ಸಮುದಾಯದ ಮತಗಳು ಬಹಳ ಪ್ರಾಶಸ್ತ್ಯ ಇರುವಂಥ ಕ್ಷೇತ್ರ. ಮುಸ್ಲಿಮರ ಮತಗಳು ಸಹ ನಿರ್ಣಾಯಕವಾಗಿವೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಮಾಜಿ ಸಚಿವ ಸತ್ಯನಾರಾಯಣ ಹಾಗೂ ಕಾಂಗ್ರೆಸ್ ನಿಂದ ಜಯಚಂದ್ರ ಕಣಕ್ಕೆ ಇಳಿದಿದ್ದಾರೆ.

ಮೇಲ್ನೋಟಕ್ಕೆ ನೋಡುತ್ತಿದ್ದರೆ ಈ ಕ್ಷೇತ್ರದಲ್ಲಿ ಜೆಡಿಎಸ್ ವರ್ಸಸ್ ಕಾಂಗ್ರೆಸ್ ಎಂಬಂಥ ಸ್ಥಿತಿ ಇದೆ. ಇನ್ನು ತಾಲೂಕಿನಲ್ಲಿ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದು ಆರೋಪ. ಜಯಚಂದ್ರ ಅವರಿಗೆ ಕ್ಷೇತ್ರದಲ್ಲಿ ಕೆಲವು ಕಡೆ ಮಾತ್ರ ಆಸಕ್ತಿ ಎಂದು ಆರೋಪಿಸುವವರೂ ಇದ್ದಾರೆ.

ರಾಜಕೀಯ ಒಂದೇ ಅಲ್ಲ, ಜಾತಿ ದೃಷ್ಟಿಯಿಂದಲೂ ಇಲ್ಲಿ ಆಗಾಗ ಒಕ್ಕಲಿಗ ವರ್ಸಸ್ ಕುರುಬ ಸಮುದಾಯ ಎಂಬ ಸಣ್ಣ ಮಟ್ಟಗಿನ ಅಸಮಾಧಾನ ಆಗಾಗ ಭುಗಿಲೇಳುತ್ತದೆ. ಜತೆಗೆ ತಾಲೂಕಿನಲ್ಲಿ ಮುಸ್ಲಿಮರ ಮತಗಳು ಸಹ ನಿರ್ಣಾಯಕವಾಗಿದ್ದು, ಒಟ್ಟಾರೆ ಈ ಸಲದ ವಿಧಾನಸಭೆ ಚುನಾವಣೆ ಜಿದ್ದಾಜಿದ್ದಿ ಕುತೂಹಲ ಮೂಡಿಸಿದೆ.

Karnataka assembly elections 2018: Sira constituency profile

ಟಿ.ಬಿ.ಜಯಚಂದ್ರ ಅವರ ಪಾಲಿಗೆ ಇಲ್ಲಿ ಹಲವು ಸವಾಲಿದೆ. ಮುಖ್ಯವಾಗಿ ಕಾಂಗ್ರೆಸ್ ನ ಕೆಲ ಪ್ರಮುಖ ಮುಖಂಡರು ಜೆಡಿಎಸ್ ಗೆ ವಲಸೆ ಹೋಗಿದ್ದಾರೆ. ಅವರ ಪಾಲಿಗೆ ಹೊಸ ಸವಾಲಾಗಿ ಸಂತೋಷ್ ಜಯಚಂದ್ರ ಚಿಕ್ಕನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವುದರಿಂದ ಆ ಕಡೆ ಕೂಡ ಗಮನ ಹರಿಸಬೇಕಾಗಿದೆ.

ಕಾಂಗ್ರೆಸ್ ಒಳಗೆ ಜಯಚಂದ್ರ ಅವರಿಗೆ ವಿರೋಧ ವ್ಯಕ್ತಪಡಿಸುವ ಹಾಗೂ ವೈಯಕ್ತಿಕ ವಿರೋಧಿಗಳೂ ಇದ್ದಾರೆ. ಜಯಚಂದ್ರ ಅವರ ಸೋಲಿಗೆ ಶ್ರಮಿಸುತ್ತೇನೆ ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಅಂದಹಾಗೆ, ಶಿರಾದಲ್ಲಿ ನಂಜಾವಧೂತ ಸ್ವಾಮೀಜಿ ಮಠ ಇದೆ. ಇಲ್ಲಿನ ದರ್ಗಾ ಬಹಳ ಖ್ಯಾತಿ ಗಳಿಸಿದೆ.

ಕೆರೆಗಳಿಗೆ ನೀರು ಹರಿಸುವ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಜನರು ಆರೋಪಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+