ಮಾಲೂರು ವಿಧಾನಸಭೆ ಕ್ಷೇತ್ರ: ಜನರ ಸಮಸ್ಯೆಗಳಿಗೆ ಅಭಿವೃದ್ಧಿಯ ಪರದೆ
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಜನ್ಮ ಸ್ಥಳ ಇರುವ ಈ ತಾಲೂಕಿನಲ್ಲಿ ಸಾಹಿತ್ಯದ ಪ್ರಭಾವ ಅಷ್ಟಾಗಿ ಕಾಣಿಸುವುದಿಲ್ಲ. ಈಗೇನಿದ್ದರೂ ರಿಯಲ್ ಎಸ್ಟೇಟ್, ರಾಜಕಾರಣ, 'ಗಾಡ್ ಮಾಫಿಯಾ', ಕೈಗಾರಿಕೆ ಪ್ರದೇಶದ ಅಭಿವೃದ್ಧಿ ಇಂಥದ್ದೇ ಕಂಡುಬರುತ್ತದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯ ಲಕ್ಷಣ ಕಂಡುಬರುತ್ತಿದೆ.
ಹಾಲಿ ಶಾಸಕ - ಮಂಜುನಾಥ ಗೌಡ ಜೆಡಿಎಸ್ ಅಭ್ಯರ್ಥಿ. ಅವರ ಒಂದು ಕಾಲದ ನಿಷ್ಠ- ಆಪ್ತ ನಂಜೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ. ಇನ್ನು ಬಿಜೆಪಿಯಿಂದ ಕೃಷ್ಣಯ್ಯ ಶೆಟ್ಟಿ ಸ್ಪರ್ಧಾಳು. ಇದು ಕೃಷ್ಣಯ್ಯ ಶೆಟ್ಟಿ ಅವರು ಬಿಜೆಪಿಯನ್ನು ಪ್ರತಿನಿಧಿಸಿ, ಗೆದ್ದಿದ್ದ ಕ್ಷೇತ್ರ. ಕೈಗಾರಿಕೆ, ರಿಯಲ್ ಎಸ್ಟೇಟ್ ಈ ತಾಲೂಕಿನ ಪಾಲಿಗೆ ಎರಡು ಕಣ್ಣುಗಳು.
ಇನ್ನು ರಿಯಲ್ ಎಸ್ಟೇಟ್ ನ ಚೇತರಿಕೆ ಹಾಗೂ ಕೈಗಾರಿಕೆ ಕೇಂದ್ರಗಳಾಗಿರುವುದನ್ನಷ್ಟೇ ಅಭಿವೃದ್ಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಮಾನವ -ಪ್ರಾಣಿ ಸಂಘರ್ಷ ಸೇರಿದಂತೆ ಹಲವು ಸಮಸ್ಯೆಗಳಿವೆ.

ಒಕ್ಕಲಿಗ ಮತದಾರರ ಪ್ರಾಬಲ್ಯ ಇಲ್ಲಿ ಹೆಚ್ಚಿದೆ. ಆ ನಂತರ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮತಗಳಿವೆ. ಆ ನಂತರದ ಸ್ಥಾನ ಮುಸ್ಲಿಮರದು. ಮುಂದಿನ ಪ್ರಾಶಸ್ತ್ಯ ಕುರುಬ ಸಮುದಾಯದ್ದು. ತಿಗಳರು (ವಹ್ನಿಕುಲ), ಬಲಜಿಗರು, ವಾಲ್ಮೀಕಿ, ಗಾಣಿಗರು, ಪದ್ಮಶಾಲಿ ಸಮಾಜದವರದು.
ಮಾಲೂರು ಬೆಂಗಳೂರಿಗೂ ಬಲು ಸಮೀಪದಲ್ಲಿದೆ. ಈಗಾಗಲೇ ಕ್ಷೇತ್ರದಲ್ಲಿ ಪುಕ್ಕಟೆ ಪ್ರವಾಸ, ಊಟ-ತಿಂಡಿ, ಸೀರೆ ಹಂಚಿಕೆ, ನಾಟಕ ಪ್ರದರ್ಶನ ಎಲ್ಲ ಒಂದು ರೌಂಡ್ ಮುಗಿದುಹೋಗಿದೆ.
ಮಾಲೂರಿನಲ್ಲಿ ಕಲ್ಲು ಗಣಿಗಾರಿಕೆಯು ಅಕ್ರಮವಾಗಿ ನಡೆಯುವ ಹಲವು ಪ್ರಕರಣಗಳು ಕಣ್ಣೆದುರು ಇವೆ. ಅಂಥ ಕಡೆ ಚಿರತೆ ಓಡಾಟ ಹೆಚ್ಚು. ಆ ಬಗ್ಗೆ ಸ್ಥಳೀಯರಲ್ಲಿ ಬಹಳ ಆತಂಕ ಇದೆ. ಇನ್ನು ಇಲ್ಲಿಂದ ಮಣ್ಣಿನ ಸಾಗಣೆ ಪಕ್ಕದ ಕೇರಳಕ್ಕೆ ನಡೆಯುತ್ತದೆ. ಅದು ಕೂಡ ಇಲ್ಲಿನ ಗಂಭೀರ ಸಮಸ್ಯೆ.
ಟೇಕಲ್ ಹೋಬಳಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಸಮಸ್ಯೆ ತೀವ್ರವಾಗಿದೆ. ಲಕ್ಕೂರು ಹಾಗೂ ಕಸಬಾ ಹೋಬಳಿ ಕೆರೆಗಳ ಮಣ್ಣು ಕೇರಳಕ್ಕೆ ಸಾಗಣೆ ಮಾಡುತ್ತಾರೆ. ಲಕ್ಕೂರು ಹೋಬಳಿಯ ಗಡಿ ಭಾಗಗಳಲ್ಲಿ ಕುಡಿಯುವ ನೀರಿನ ಫ್ಲೋರೈಡ್ ಅಂಶದ ಸಮಸ್ಯೆ ಇದೆ. ಈಗ ಅಲ್ಲೆಲ್ಲ ಶುದ್ಧ ನೀರಿನ ಘಟಕ ಆರಂಭಿಸಲಾಗಿದೆ. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ.
ಮಾಲೂರು ತಾಲೂಕಿನಾದ್ಯಂತ ದೊಡ್ಡ ರಸ್ತೆಗಳು ಚೆನ್ನಾಗಿ ಆಗಿವೆ. ಆದರೆ ಹಳ್ಳಿಗಳಲ್ಲಿ ಸಂಪರ್ಕ ರಸ್ತೆಗಳದೇ ತೊಂದರೆ. ಖಾಸಗಿ ಸಹಭಾಗಿತ್ವದಲ್ಲಿ ಶಾಸಕ ಮುಂಜುನಾಥ ಗೌಡ ಮಾಡಿರುವ ಸ್ಟೇಡಿಯಂ, ರಂಗಮಂದಿರ, ಶಾದಿ ಮಹಲ್, ಶಿಕ್ಷಕರ ಭವನ, ಒಂದೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಉದ್ಯಾನದ ಬಗ್ಗೆ ಒಳ್ಳೆ ಮಾತು ಕೇಳಿಬರುತ್ತದೆ. ಕೂರಂಡಹಳ್ಳಿ ಕೈಗಾರಿಕಾ ಪ್ರಾಂಗಣದಿಂದ ಸ್ಥಳೀಯರಿಗೆ ಅನುಕೂಲವಾಗಿದೆ.
ತಮಿಳುನಾಡಿನಿಂದ ಕರ್ನಾಟಕಕ್ಕೆ ಹಾದು ಹೋಗುವ ವಾಹನಗಳು ಮಾಲೂರು ಪಟ್ಟಣದೊಳಗೆ ಹೋಗುತ್ತವೆ. ಇದರಿಂದ ಬಹಳ ಸಮಸ್ಯೆಯಾಗಿದೆ. ಇದಕ್ಕೊಂದು ಪರ್ಯಾಯ ಆಗಬೇಕಿದೆ ಎಂಬುದು ಸ್ಥಳೀಯರ ಆಗ್ರಹ. ಇಲ್ಲಿನ ರೈಲ್ವೆ ಸೇತುವೆ ಸರಿಪಡಿಸಬೇಕಿದೆ. ರಾಜಕಾರಣದ ವಿಚಾರಕ್ಕೆ ಬಂದರೆ ಈ ಸಲ ಇಲ್ಲಿ ತ್ರಿಕೋನ ಸ್ಪರ್ಧೆ ಕಾಣುತ್ತದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications