Exit Poll : ಟುಡೇಸ್ ಚಾಣಕ್ಯ ಫಲಿತಾಂಶ, ಬಿಜೆಪಿಗೆ ಸ್ಪಷ್ಟ ಬಹುಮತ
ಬೆಂಗಳೂರು, ಮೇ 12: ಕರ್ನಾಟಕ ವಿಧಾನಸಭೆಯ 222 ಸ್ಥಾನಕ್ಕಾಗಿ ಮೇ.12 ರಂದು ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಅಂತ್ಯ ಕಂಡಿದೆ. ಟುಡೇಸ್ ಚಾಣಕ್ಯ ಸಂಸ್ಥೆ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಬಹುಮತಕ್ಕೆ ಸನಿಯದಲ್ಲಿದೆ.
ಟುಡೇಸ್ ಚಾಣಕ್ಯ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಯು ಸ್ಪಷ್ಟ ಬಹುಮತ ಪಡೆಯಲಿದ್ದು ಒಟ್ಟು 120 ಸ್ಥಾನಗಳನ್ನು ಪಡೆಯಲಿದೆ ಎನ್ನಲಾಗಿದೆ. ಆ ಮೂಲಕ ಸ್ವತಂತ್ರವಾಗಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ.
ಚುನಾವಣೋತ್ತರ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ 73 (11 ಸ್ಥಾನ ಪ್ಲಸ್ ಅಥವಾ ಮೈನಸ್ ) ಸ್ಥಾನ ಪಡೆದುಕೊಂಡರೆ, ಜೆಡಿಎಸ್ ಪಕ್ಷವು 26 (7 ಸ್ಥಾನ ಪ್ಲಸ್ ಅಥವಾ ಮೈನಸ್) ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಇತರ ಪಕ್ಷ ಅಥವಾ ಪಕ್ಷೇತರರು 3 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ.
ಟುಡೇಸ್ ಚಾಣಕ್ಯ ಸಂಸ್ಥೆಯು ಈ ಮುಂಚಿನ ಲೋಕಸಭೆ ಚುನಾವಣೆ, ಕೇರಳ ಚುನಾವಣೆ, ತ್ರಿಪುರ ಚುನಾವಣೆಗಳ ಫಲಿತಾಂಶಗಳನ್ನು ಸಮೀಕ್ಷೆಯನ್ನು ಸರಿಯಾಗಿ ನಿಖರವಾಗಿ ಅಂದಾಜಿಸಿತ್ತು. ಹಾಗಾಗಿ ಟುಡೇಸ್ ಚಾಣಕ್ಯ ಸಂಸ್ಥೆಯ ಚುನಾವಣೋತ್ತರ ಸಮೀಕ್ಷೆ ಬಹಳ ಮಹತ್ವದ್ದು ಎನಿಸಿದೆ.

ಯಾರಿಗೆ ಎಷ್ಟು ಮತ?
ಟುಡೇಸ್ ಚಾಣಕ್ಯ ಸೀಟುಗಳನ್ನು ಮಾತ್ರವಲ್ಲದೆ ಪಕ್ಷಗಳು ಪಡೆಯುವ ಶೇಕಡಾವಾರು ಮತಗಳ ಅಂದಾಜು ಸಹ ಮಾಡಿದೆ. ಇದರ ಪ್ರಕಾರ
ಕಾಂಗ್ರೆಸ್ - 36% (3% ಹೆಚ್ಚು ಅಥವಾ ಕಡಿಮೆ)
ಬಿಜೆಪಿ- 39% (3% ಹೆಚ್ಚು ಅಥವಾ ಕಡಿಮೆ)
ಜೆಡಿಎಸ್ - 18% (3% ಹೆಚ್ಚು ಅಥವಾ ಕಡಿಮೆ)
ಇತರರು - 7% (3% ಹೆಚ್ಚು ಅಥವಾ ಕಡಿಮೆ)

ಲಿಂಗಾಯತರು ಈಗಲೂ ಬಿಜೆಪಿ ಜೊತೆ
ಲಿಂಗಾಯತ - 60% ಬಿಜೆಪಿಗೆ, 20% ಕಾಂಗ್ರೆಸ್, 9% ಜೆಡೆಎಸ್
ಒಕ್ಕಲಿಗ - 19% ಬಿಜೆಪಿ, 11% ಕಾಂಗ್ರೆಸ್, 63% ಜೆಡಿಎಸ್
ಮುಸ್ಲಿಂ - 5% ಬಿಜೆಪಿ, 78% ಕಾಂಗ್ರೆಸ್, 11% ಜೆಡಿಎಸ್
ಎಸ್‌ಸಿ - 40% ಬಿಜೆಪಿ, 37% ಕಾಂಗ್ರೆಸ್, 18% ಜೆಡಿಎಸ್
ಕುರುಬ - 27% ಬಿಜೆಪಿ, 60% ಕಾಂಗ್ರೆಸ್, 7% ಜೆಡಿಎಸ್
ಎಸ್‌ಟಿ - 44% ಬಿಜೆಪಿ, 29% ಕಾಂಗ್ರೆಸ್, 16% ಜೆಡಿಎಸ್
ಒಬಿಸಿ - 52% ಬಿಜೆಪಿ, 24% ಕಾಂಗ್ರೆಸ್, 14% ಜೆಡಿಎಸ್

ಬದಲಾಯಿಸುವ ಉದ್ದೇಶದಿಂದ ಮತ ಹಾಕಿದವರು ಹೆಚ್ಚು
ಸರ್ಕಾರವನ್ನು ಬದಲಾಯಿಸಲು ಮತ ಹಾಕಿದವರು - 47%
ಇರುವ ಸರ್ಕಾರಕ್ಕೆ ಮತ ಚಲಾಯಿಸಿದವರು- 40%

ಮತವನ್ನು ನಿರ್ಧರಿಸುವ ಅಂಶಗಳಾವುವು?
ರಾಜಕೀಯ ಪಕ್ಷ ಮತ್ತು ಅಭ್ಯರ್ಥಿ- 37%
ಅಭಿವೃದ್ಧಿ - 23%
ಭ್ರಷ್ಟಾಚಾರ - 23%
ಇತರೆ ಕಾರಣಗಳು - 9%

ಉತ್ತಮ ಎಂದವರ ಸಂಖ್ಯೆಯೇ ಹೆಚ್ಚು
ಉತ್ತಮ - 34%
ಸಾಧಾರಣ - 20%
ಕಳಪೆ- 31%

ಒಟ್ಟು ಮತದಾರರ ಸಂಖ್ಯೆ
ಈ ಬಾರಿ ರಾಜ್ಯದಲ್ಲಿ ಒಟ್ಟು 5,00,15,895 (5 ಕೋಟಿ) ಮತದಾರರಿದ್ದಾರೆ. ಇದರಲ್ಲಿ 2,53,26,629 ಪುರುಷ ಮತದಾರರಾದರೆ, ಮಹಿಳಾ ಮತದಾರರ ಸಂಖ್ಯೆ 2,46,84,311. ಇನ್ನು 4,955 ತೃತೀಯ ಲಿಂಗಿ ಮತದಾರರೂ ರಾಜ್ಯದಲ್ಲಿದ್ದಾರೆ.











Click it and Unblock the Notifications