ಕರ್ನಾಟಕ ಚುನಾವಣೆ: ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ

Recommended Video

      Karnataka Assembly Elections 2018 : ಬಿಜೆಪಿ ಪ್ರಣಾಳಿಕೆ ಇಂದು ಬಿಡುಗಡೆ | Oneindia Kannada

      ಬೆಂಗಳೂರು, ಮೇ 04: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಬಿ ಎಸ್ ಯಡಿಯೂರಪ್ಪ ಬಿಡುಗಡೆಗೊಳಿಸಿದರು.

      ಜಯನಗರ ಶಾಸಕ ಬಿ ಎನ್ ವಿಜಯ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ನಂತರ ಬೆಂಗಳೂರಿನ ರೆಡಿಸನ್ ಬ್ಲೂ ಹೊಟೇಲ್ ನಲ್ಲಿ ಇಂದು ಬೆಳಿಗ್ಗೆ ಪ್ರಣಾಳಿಕೆ ಬಿಡುಗಡೆಗೊಳಿಸಲಾಗಿದೆ.

      Karnataka assembly elections 2018: BJP Manifesto

      ಬಿಜೆಪಿ ಪ್ರಣಾಳಿಕೆ ಮುಖ್ಯಾಂಶಗಳು

      * ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ, ಉದ್ಯೋಗ ಸೃಷ್ಟಿ ಮೂಲಕ ಪ್ರತಿಯೊಬ್ಬರಿಗೂ ಉತ್ತಮ ಉದ್ಯೋಗಾವಕಾಶ.
      * ರಾಜ್ಯದಲ್ಲಿ 60 ನಮ್ಮ ಬಿಪಿಓ ಸಂಕೀರ್ಣ' ಸ್ಥಾಪನೆ. ಬಿಪಿಓ ಉದ್ದಿಮೆಚಸ್ಥಾಪಿಸಿ ಉದ್ಯೋಗಾವಕಾಶ ಸೃಷ್ಟಿಸಲು ಸ್ಥಳೀಯ ಉದ್ಯಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು 250 ಕೋಟಿ ರೂ.
      * "ಮುಖ್ಯಮಂತ್ರಿ ಲ್ಯಾಪ್‍ಟಾಪ್" ಯೋಜನೆಯಡಿ ಕಾಲೇಜಿಗೆ ಸೇರುವ ಪ್ರತಿ ವಿದ್ಯಾರ್ಥಿಗೆ ಉಚಿತ ಲ್ಯಾಪ್ ಟಾಪ್.
      * ಹುಬ್ಬಳ್ಳಿ, ಬೆಂಗಳೂರು, ರಾಯಚೂರು, ಕಲಬುರಗಿ, ಮೈಸೂರು, ಮಂಗಳೂರಿನಲ್ಲಿ ಸ್ಟಾರ್ಟ್‍ಅಪ್ ಕಂಪನಿಗಳಿಗೆ ಸ್ಥಳಾವಕಾಶ ಇನ್ನಿತರ ಸೌಲಭ್ಯಗಳಿರುವ 6 "ಕೆ-ಹಬ್"ಗಳ ಸ್ಥಾಪನೆ.
      * ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಕ್ರೀಡಾ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು 100 ಕೋಟಿ ರೂ. ನಿಧಿ.

      * ನಮ್ಮ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕು ಮತ್ತು ಸಹಕಾರಿ ಸಂಘಗಳಲ್ಲಿ ಇರುವ 1 ಲಕ್ಷ ರೂ.ವರೆಗೆ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು.

      * 20 ಲಕ್ಷ ಸಣ್ಣ ಮತ್ತು ಅತಿ ಸಣ್ಣ ಒಣ ಭೂಮಿ ರೈತರಿಗೆ ತಲಾ
      10,000 ಆರ್ಥಿಕ ನೆರವು ನೀಡಲಿದೆ "ನೇಗಿಲ ಯೋಗಿ" ಯೋಜನೆ.
      * ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ, ಬೆಳೆಯ ಒಂದೂವರೆ ಪಟ್ಟು ಆದಾಯ ನೀಡಲಾಗುವುದು.
      * ಬೆಲೆ ವ್ಯತ್ಯಯದ ಸಂದರ್ಭದಲ್ಲಿ ರೈತರ ಬೆಂಬಲಕ್ಕಾಗಿ 5,000 ಕೋಟಿ "ರೈತ ಬಂಧು ಆವರ್ತ ನಿಧಿ".
      * ರೈತ ಸ್ನೇಹಿ ಯೋಜನೆಗಳ ಅನುಷ್ಠಾನದ ಸೂಕ್ತ ಮೇಲ್ವಿಚಾರಣೆಗಾಗಿ ಮುಖ್ಯಮಂತ್ರಿ ಕಚೇರಿಯಡಿ "ರೈತಬಂಧು ವಿಭಾಗ".
      * ಭೂರಹಿತ ಕೃಷಿ ಕಾರ್ಮಿಕರಿಗೆ "ಮುಖ್ಯಮಂತ್ರಿ ರೈತ ಸುರಕ್ಷಾ ವಿಮೆ ಯೋಜನೆ" ಉಚಿತ 2 ಲಕ್ಷದಷ್ಟು ಅಪಘಾತ ವಿಮೆ.
      * ರಾಜ್ಯದಲ್ಲಿ ಎಲ್ಲಾ ನೀರಾವರಿ ಯೋಜನೆಗಳನ್ನು 2023ರ ಒಳಗೆ ಪೂರ್ಣಗೊಳಿಸಲು 1.5 ಲಕ್ಷ ಕೋಟಿಯ "ಸುಜಲಾಂ
      ಸುಫಲಾಂ ಕರ್ನಾಟಕ".
      * ರಾಜ್ಯದಲ್ಲಿರುವ ಎಲ್ಲಾ ಕೆರೆಗಳ ಪುನಶ್ಚೇತನಕ್ಕಾಗಿ "ಮಿಶನ್ ಕಲ್ಯಾಣಿ" ಯೋಜನೆ.
      * ರೈತರ ಪಂಪ್ ಸೆಟ್ ಗೆ ಪ್ರತಿ ದಿನ 10 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಕೆ.
      * ಕೃಷಿ ಸಂಬಂಧಿತ ತರಬೇತಿ ಪಡೆಯುವ ರೈತರ ಮಕ್ಕಳಿಗಾಗಿ100 ಕೋಟಿ ಮೊತ್ತದ "ರೈತಬಂಧು ವಿದ್ಯಾರ್ಥಿ ವೇತನ".
      * "ಮುಖ್ಯಮಂತ್ರಿಗಳ ಕೃಷಿ ಫೆಲೊಶಿಪ್" ಅಡಿ ಕೃಷಿಯ ಅತ್ಯುತ್ತಮ ಪದ್ಧತಿ ಅರಿಯಲು ಪ್ರತಿ ವರ್ಷ 1,000 ರೈತರು ಇಸ್ರೇಲ್ ಮತ್ತು ಚೀನಾ ಭೇಟಿಗೆ ವ್ಯವಸ್ಥೆ.
      * ಭತ್ತ, ಕಬ್ಬು, ತೆಂಗು, ಅಡಿಕೆ, ಕಾಫಿ ಸೇರಿದಂತೆ ರಾಜ್ಯದಲ್ಲಿ ವ್ಯಾಪಕವಾಗಿ ಬೆಳೆಯುವ ಎಲ್ಲಾ ಬೆಳೆಗಳಿಗೆ ನಿರ್ದಿಷ್ಟ ಕಾರ್ಯತಂತ್ರ ರಚಿಸಲಾಗುವುದು
      * ಕೆಎಂಎಫ್ ಮೂಲಕ ಹಣ್ಣು ಮತ್ತು ತರಕಾರಿಗಳ ರಫ್ತಿನ ಉತ್ತೇಜನಕ್ಕಾಗಿ 3,000 ಕೋಟಿ ನಿಧಿ.
      * ಪಶು ಸಂಗೋಪನೆ, ಹೈನುಗಾರಿಕೆಗೆ ಬೇಕಾಗುವ ಮೂಲಸೌಕರ್ಯ ಅಭಿವೃದ್ಧಿಗೆ 3,000 ಕೋಟಿಯ "ಕಾಮಧೇನು ಅನುದಾನ".
      * ಗ್ರಾಮೀಣ ಪ್ರದೇಶಗಳಲ್ಲಿ ದನಕರುಗಳು ಮತ್ತು ಇತರ ಪ್ರಾಣಿಗಳಿಗೆ ಕರ್ನಾಟಕ ಹಾಲು ಒಕ್ಕೂಟದ ಮೂಲಕ ಪಶುವೈದ್ಯಕೀಯ ಸೇವೆ ಒದಗಿಸಲು 1,000 ಕೋಟಿ ಮೀಸಲಿಡಲಾಗುವುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+