ಕೈವಶವಾದ ಪುತ್ತೂರು, ಶಕುಂತಳಾ ಶೆಟ್ಟಿ ಗೆಲುವು

ಬಿಜೆಪಿಯ ಪ್ರಬಲ ಪೈಟೋಟಿ ಎದುರಿಸಿಯೂ ಶಕುಂತಳಾ ಶೆಟ್ಟಿ 2,600ಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ. ಶಕುಂತಳಾ ಶೆಟ್ಟಿ ಅವರು 2004ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಯಭೇರಿ ಬಾರಿಸಿದ್ದರು.
2008ರಲ್ಲಿ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿತ್ತು. ಇದರಿಂದಾಗಿ ಶಕುಂತಳಾ ಶೆಟ್ಟಿ ರಾಜಕೀಯ ಗುರು ಉರಿಮಜಲು ರಾಮ್ ಭಟ್ ,ಡಿ.ವಿ.ಸದಾನಂದ ಗೌಡ ಸೇರಿದಂತೆ ಹಿರಿಯ ನಾಯಕರ ಮೇಲೆ ಮುನಿಸಿಕೊಂಡು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು.
ಈ ಬಾರಿ ಕಾಂಗ್ರೆಸ್ ಸೇರಿದ್ದ ಅವರು ಗೆಲುವು ಸಾಧಿಸುವ ಮೂಲಕ ಸದಾನಂದ ಗೌಡರಿಗೆ ತಿರುಗೇಟು ನೀಡಿದ್ದಾರೆ. ಸ್ವ ಕ್ಷೇತ್ರವನ್ನೇ ಸದಾನಂದ ಗೌಡರು ಕೈಗೊಪ್ಪಿಸಿದ್ದಾರೆ.












Click it and Unblock the Notifications