ಮಂಡ್ಯ ಗೆದ್ದವರು ಕಾವೇರಿ ಕಾಯುವರೇ?
ಮಂಡ್ಯ, ಮೇ.10: ಇಲ್ಲಿನ 7 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಳೆಲ್ಲರೂ ಕಾವೇರಿ ನದಿ ನೀರು ಕಾಯುವ ಶಪಥ ಮಾಡುವರೇ? ಜನರ ನಂಬಿಕೆ ಉಳಿಸಿಕೊಳ್ಳುವರೆ? ಕಾದು ನೋಡಬೇಕಿದೆ. ಕಾವೇರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪಕ್ಷಗಳು ಸರಿಯಾದ ಲಾಭ ಪಡೆದಿವೆ, ರೈತರ ಪ್ರತಿನಿಧಿಯಾಗಿ ಕೆಎಸ್ ಪುಟ್ಟಣ್ಣಯ್ಯ ಅವರು ಆಯ್ಕೆಯಾಗಿರುವುದು ರಾಜಕೀಯ ಪಂಡಿತರ ಲೆಕ್ಕಾಚಾರ ತಲೆಕೆಳಗು ಮಾಡಿದೆ.
ಕಾವೇರಿ ನದಿ ನೀರಿನಲ್ಲೇ ತನ್ನ ಬೇಳೆ ಬೇಯಿಸಿಕೊಳ್ಳದೆ ನಿಷ್ಠೆಯಿಂದ ಎಲ್ಲಾ ಶಾಸಕರಿಂದಲೂ ಹೋರಾಡುತ್ತಾರೆ ಎಂಬ ಭರವಸೆಯನ್ನು ಸಕ್ಕರೆ ನಾಡಿನ ಜನತೆ ಹೊತ್ತುಕೊಂಡಿದ್ದಾರೆ. ಕೆಜೆಪಿಯೂ ಇಲ್ಲಿ ತಳವೂರಲು ಯತ್ನಿಸಿತ್ತು. ಕಾವೇರಿ ಹೋರಾಟದ ವೇಳೆ ಯಡಿಯೂರಪ್ಪ ತಮ್ಮ ಇರುವನ್ನು ಸಾಬೀತುಪಡಿಸಲು ಒಂದಷ್ಟು ಪ್ರಯತ್ನಿಸಿ ವಿಫಲರಾಗಿದ್ದಾರೆ.[ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
2013 ರಲ್ಲಿ ಮಂಡ್ಯದಿಂದ ಆಯ್ಕೆಗೊಂಡ ಶಾಸಕರು ಇವರು:
| ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಗಳಿಸಿದ ಮತಗಳು | ಪಕ್ಷ |
| ಮಳವಳ್ಳಿ ಪ.ಜಾ | ಪಿಎಂ ನರೇಂದ್ರಸ್ವಾಮಿ | 61869 | ಕಾಂಗ್ರೆಸ್ | ಡಾ. ಕೆ ಅನ್ನದಾನಿ | 61331 | ಜೆಡಿಎಸ್ |
| ಮದ್ದೂರು | ಡಿಸಿ ತಮ್ಮಣ್ಣ | 80926 | ಜೆಡಿಎಸ್ | ಮಧು ಜಿಎಂ | 48968 | ಕಾಂಗ್ರೆಸ್ |
| ಮೇಲುಕೋಟೆ | ಕೆಎಸ್ ಪುಟ್ಟಣ್ಣಯ್ಯ | 80041 | ಸಕಪ | ಸಿಎಸ್ ಪುಟ್ಟರಾಜು | 70193 | ಜೆಡಿಎಸ್ |
| ಶ್ರೀರಂಗಪಟ್ಟಣ | ರಮೇಶ ಬಂಡಿಸಿದ್ದೇಗೌಡ | 55204 | ಜೆಡಿಎಸ್ | ರವೀಂದ್ರ ಶ್ರೀಕಂಠಯ್ಯ | 41580 | ಪಕ್ಷೇತರ |
| ನಾಗಮಂಗಲ | ಚೆಲುವರಾಯಸ್ವಾಮಿ | 89203 | ಜೆಡಿಎಸ್ | ಕೆ ಸುರೇಶ್ ಗೌಡ | 68840 | ಕಾಂಗ್ರೆಸ್ |
| ಕೆಆರ್ ಪೇಟೆ | ನಾರಾಯಣ ಗೌಡ | 56784 | ಜೆಡಿಎಸ್ | ಕೆಬಿ ಚಂದ್ರಶೇಖರ್ | 47541 | ಕಾಂಗ್ರೆಸ್ |
| ಮಂಡ್ಯ | ಎಂಎಚ್ ಅಂಬರೀಷ್ | 90329 | ಕಾಂಗ್ರೆಸ್ | ಎಂ ಶ್ರೀನಿವಾಸ್ | 47392 | ಜೆಡಿಎಸ್ |
ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಶಿವಮೊಗ್ಗ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |












Click it and Unblock the Notifications