ಫಲಿತಾಂಶ: ಬೀದರ್ ನಲ್ಲಿ ಮುಕುಟ ಧರಿಸಿದವರು

ಪ್ರಮುಖ ಮೂರು ಪಕ್ಷಗಳ ಜೊತೆ ಈ ಬಾರಿ ಯಡಿಯೂರಪ್ಪ ಅವರ ಕೆಜೆಪಿ ಕೂಡಾ ಸೇರಲಿದೆ. ಬಿಎಸ್ ಆರ್ ಕಾಂಗ್ರೆಸ್ ಕೂಡಾ ತನ್ನ ಅದೃಷೃ ಪರೀಕ್ಷೆ ಮಾಡುತ್ತಿದ್ದು, ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ಅವರು ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದರು.
ಹಾಲಿ ಶಾಸಕರು: [2013 ಫಲಿತಾಂಶ: ಗೆದ್ದವರು, ಸೋತವರ ವಿವರ]
* ಬಸವಕಲ್ಯಾಣ: ಬಿಜೆಪಿ ಶಾಸಕ ಬಸವರಾಜ ಅಟ್ಟೂರ್ ಅವರು ರಾಜೀನಾಮೆ ನೀಡಿ ಕೆಜೆಪಿ ಸೇರಿದ್ದಾರೆ.
* ಹುಮ್ನಾಬಾದ್: ರಾಜಶೇಖರ ಪಾಟೀಲ (ಕಾಂಗ್ರೆಸ್)
* ಬೀದರ್ ದಕ್ಷಿಣ: ಬಂಡೆಪ್ಪ ಕಾಶಂಪುರ (ಜೆಡಿಎಸ್)
* ಬೀದರ್: ರಹೀಂ ಖಾನ್(ಕಾಂಗ್ರೆಸ್)
* ಭಾಲ್ಕಿ: ಈಶ್ವರ ಖಂಡ್ರೆ (ಕಾಂಗ್ರೆಸ್)
* ಔರಾದ್ (ಎಸ್ ಸಿ): ಪ್ರಭು ಚವ್ಹಾಣ (ಬಿಜೆಪಿ)
ಬೀದರ್ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು ಒಮ್ಮೆ ಬಿಎಸ್ಪಿಗೆ ಒಲಿದಿತ್ತು. ಈಗ ಕೆಜೆಪಿ ಹಾಗೂ ಬಿಜೆಪಿ ಜೊತೆ ಕಾಂಗ್ರೆಸ್ ಕ್ಷೇತ್ರ ಉಳಿಸಿಕೊಳ್ಳಲು ಹೋರಾಟ ನಡೆಸಿದೆ. ಬೀದರ್ ದಕ್ಷಿಣ ಬಹುತೇಕ ಜೆಡಿಎಸ್ ಪರ ಇದ್ದರೂ ಅಶೋಕ್ ಖೇಣಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆ ಕುತೂಹಲ ಕೆರಳಿಸಿತ್ತು.
ಭಾಲ್ಕಿಯಲ್ಲಿ ಖಂಡ್ರೆ ಸೋದರರ ಕಾಳಗ ಗಮನ ಸೆಳೆದಿದ್ದು, ಭೀಮಣ್ಣ ಖಂಡ್ರೆ ಅವರ ಸೋದರನ ಮಗನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಈಶ್ವರ್ ಖಂಡ್ರೆ, ಪ್ರಕಾಶ್ ಖಂಡ್ರೆ ಸೋಲಿಸುವ ಹುಮ್ಮಸ್ಸಿನಲ್ಲಿ ಕೆಜೆಪಿ ಅಭ್ಯರ್ಥಿ ಡಿ.ಕೆ ಸಿದ್ರಾಮ್ ಕಣಕ್ಕಿಳಿದಿದ್ದರು.
ಹುಮ್ನಾಬಾದಿನಲ್ಲಿ ರಾಜಶೇಖರ್ ಪಾಟೀಲ್ ಹ್ಯಾಟ್ರಿಕ್ ನಿರೀಕ್ಷೆಯಿದೆ. ಬಸವಕಲ್ಯಾಣ ಬಿಜೆಪಿ ಕೈ ತಪ್ಪಿದರೂ ಅಚ್ಚರಿಯೇನಿಲ್ಲ. ಕೆಜೆಪಿ ಮೇಲುಗೈ ಸಾಧಿಸುವ ಉತ್ಸಾಹದಲ್ಲಿದೆ. ಔರಾದ್ ಗಡಿಭಾಗದ ಮತದಾರರಲ್ಲಿ ಗೊಂದಲವಿದ್ದರೂ ಪ್ರಭು ಚವ್ಹಾಣ್ ಮತ್ತೆ ಬಿಜೆಪಿ ಬಾವುಟ ಹಾರಿಸುವ ನಿರೀಕ್ಷೆಯಿತ್ತು.
| ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಗಳಿಸಿದ ಮತಗಳು | ಪಕ್ಷ |
| ಬಸವಕಲ್ಯಾಣ | ಮಲ್ಲಿಕಾರ್ಜುನ ಖೂಬಾ | 37494 | ಜೆಡಿಎಸ್ | ನಾರಾಯಣರಾವ್ ಬಿ | 21601 | ಕಾಂಗ್ರೆಸ್ |
| ಹುಮ್ನಾಬಾದ್ | ರಾಜಶೇಖರ್ ಬಸವರಾಜ್ | 64694 | ಕಾಂಗ್ರೆಸ್ | ನಸಿಮುದ್ದೀನ್ ಪಟೇಲ್ | 40194 | ಜೆಡಿಎಸ್ |
| ಬೀದರ್ ದಕ್ಷಿಣ | ಅಶೋಕ್ ಖೇಣಿ | 47763 | ಕಮಪ | ಬಂಡೆಪ್ಪ ಕಾಶಂಪೂರ | 31975 | ಜೆಡಿಎಸ್ |
| ಬೀದರ್ | ಗುರುಪಾದಪ್ಪ ನಾಗಮಾರಪಳ್ಳಿ | 50718 | ಕೆಜೆಪಿ | ರಹೀಂ ಖಾನ್ | 48147 | ಕಾಂಗ್ರೆಸ್ |
| ಭಾಲ್ಕಿ | ಈಶ್ವರ್ ಖಂಡ್ರೆ | 58012 | ಕಾಂಗ್ರೆಸ್ | ಸಿ.ಕೆ ಸಿದ್ರಾಮ್ | 48343 | ಕೆಜೆಪಿ |
| ಔರಾದ್ | ಪ್ರಭು ಚವ್ಹಾಣ್ | 61826 | ಬಿಜೆಪಿ | ಧನಾಜಿ ಜಾದವ್ | 38635 | ಕೆಜೆಪಿ |
ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಶಿವಮೊಗ್ಗ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |












Click it and Unblock the Notifications