ಎಲೆಕ್ಷನ್ ಚಿತ್ರ: ಮಳೆ ಹುಡುಗಿಯಾದ ಲಕ್ಕಿ ರಮ್ಯಾ
ಬೆಂಗಳೂರು, ಏ.25: ಪ್ರಚಾರ ಕಾರ್ಯ ಆರಂಭವಾದ ಮೊದಲ ದಿನದಿಂದಲೇ ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳದೆ ಹೈಟೆಕ್ ವಾಹನ, ಹೈಟೆಕ್ ತಂತ್ರಜ್ಞಾನ ಬಳಸಿ ಜೆಡಿಎಸ್ ಭರ್ಜರಿ ಪ್ರಚಾರ ಕಾರ್ಯ ಮುಂದುವರೆಸಿದೆ. ನಟಿ ರಮ್ಯಾ ಯಾಕೋ ಮಳೆ ಹುಡುಗಿಯಾಗಿದ್ದಾರೆ.
ಲಕ್ಕಿ ಸ್ಟಾರ್ ನಟಿ ರಮ್ಯಾ ಅವರು ಕಾಲಿಟ್ಟ ಕಡೆ ಮಳೆ ಸುರಿಯುತ್ತಿರುವುದರಿಂದ ರಮ್ಯಾಅವರನ್ನು 'ಮಳೆ ಹುಡುಗಿ' ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಕೆ.ಆರ್ ಪೇಟೆಯಲ್ಲಿ ರಮ್ಯಾ ಪ್ರಚಾರದ ವೇಳೆ ಮಳೆ ಎದುರಿಸಿದ್ದರು. ಇಂದು ಮಂಗಳೂರಿನ ಬಂಟ್ವಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಪರ ಪ್ರಚಾರ ಕೈಗೊಂಡಾಗಲೂ ಮಳೆ ಸುರಿದಿದೆ. ಆದರೆ, ಮಳೆ ನಡುವೆಯೂ ರಮ್ಯಾ ಪ್ರಚಾರ ಮುಂದುವರೆಸಿದ್ದಾರೆ.
ಕಾಂಗ್ರೆಸ್ ತನ್ನ ಭರ್ಜರಿ ಪ್ರಚಾರದ ಭರಾಟೆಯನ್ನು ಮುಂದುವರೆಸಿದೆ. ಸ್ಟಾರ್ ಪ್ರಚಾರಕರನ್ನು ಸೂಕ್ತವಾಗಿ ಕಾಂಗ್ರೆಸ್ ನಂತೆ ಬಿಜೆಪಿ ಕೂಡಾ ಬಳಸಿಕೊಳ್ಳುತ್ತಿದೆ. ದರ್ಶನ್ ತೂಗುದೀಪ ಅವರು ಇವತ್ತು ಕೂಡಾ ಜೆಡಿಎಸ್ ಅಭ್ಯರ್ಥಿ ಸಂಗೊಳ್ಳಿ ರಾಯಣ್ಣ ನಿರ್ಮಾಪಕ ಆನಂದ್ ಅಪ್ಪುಗೋಳ್ ಪರ ಪ್ರಚಾರ ನಡೆಸಿದ್ದಾರೆ.
ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ ಪರ ಪ್ರಚಾರಕ್ಕೆ ಇಳಿದಿದ್ದಾರೆ.ಬ್ಯಾಟರಾಯನಪುರ ವಿಧಾನಸಭಾ ವ್ಯಾಪ್ತಿಯ ಬಾಗಲೂರು, ಹೂವಿನಾಯಕನಹಳ್ಳಿ, ಬಂಡಿ ಕೊಡಿಗೇಹಳ್ಳಿ, ಜಲ ಹೊಬಳಿ ಸೇರಿದಂತೆ ವಿವಿಧೆಡೆ ನಡೆದ ರೋಡ್ ಶೋನಲ್ಲಿ ಬುಲೆಟ್ ಪ್ರಕಾಶ್ ಪಾಲ್ಗೊಂಡರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಲೋಕಸತ್ತಾ, ಕೆಜೆಪಿ ಸೇರಿದಂತೆ ರಂಗು ರಂಗಿನ ಚುನಾವಣಾ ಕಣದ ಚಿತ್ರಗಳು ನಿಮಗೆ ಇಲ್ಲಿ ಮಾತ್ರ ಸಿಗಲಿದೆ.. ನಿಮ್ಮ ನೆಚ್ಚಿನ ನಾಯಕರನ್ನು ಚಿತ್ರ ಸರಣಿಯಲ್ಲಿ ನೋಡಿ...

ಚುನಾವಣಾ ಅಖಾಡದಲ್ಲಿ ತಾರಾ ಪ್ರಚಾರ
ಬೆಂಗಳೂರಿನ ಶಿವಾಜಿನಗರ ನಂತರ ಕೆಆರ್ ಪೇಟೆ, ಉಳ್ಳಾಲ, ಬಂಟ್ವಾಳ ಸೇರಿದಂತೆ ರಾಜ್ಯದ ವಿವಿಧೆಡೆ ಸುತ್ತುತ್ತಿರುವ ರಮ್ಯಾ ಮೇಡಂ ಸದ್ಯಕ್ಕೆ ಕರಾವಳಿಯಲ್ಲಿದ್ದಾರೆ. ಚಿತ್ರಕೃಪೆ: @umar shabbeer

ಚುನಾವಣಾ ಅಖಾಡದಲ್ಲಿ ತಾರಾ ಪ್ರಚಾರ
ಹಾವೇರಿಯಲ್ಲಿ ಕಂಡ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ

ಚುನಾವಣಾ ಅಖಾಡದಲ್ಲಿ ತಾರಾ ಪ್ರಚಾರ
ಹಿರಿಯ ನಾಗರೀಕರಿಗೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್ ಆಶೋಕ್ ತಲೆಬಾಗಿರುವುದು

ಚುನಾವಣಾ ಅಖಾಡದಲ್ಲಿ ತಾರಾ ಪ್ರಚಾರ
ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ ಪರ ಪ್ರಚಾರಕ್ಕೆ ಇಳಿದಿದ್ದಾರೆ.ಬ್ಯಾಟರಾಯನಪುರ ವಿಧಾನಸಭಾ ವ್ಯಾಪ್ತಿಯ ಬಾಗಲೂರು, ಹೂವಿನಾಯಕನಹಳ್ಳಿ, ಬಂಡಿ ಕೊಡಿಗೇಹಳ್ಳಿ, ಜಲ ಹೊಬಳಿ ಸೇರಿದಂತೆ ವಿವಿಧೆಡೆ ನಡೆದ ರೋಡ್ ಶೋನಲ್ಲಿ ಬುಲೆಟ್ ಪ್ರಕಾಶ್ ಪಾಲ್ಗೊಂಡರು.

ಚುನಾವಣಾ ಅಖಾಡದಲ್ಲಿ ತಾರಾ ಪ್ರಚಾರ
ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಅವರಿಗೆ ಅಜ್ಜಿಯ ಆಶೀರ್ವಾದ

ಚುನಾವಣಾ ಅಖಾಡದಲ್ಲಿ ತಾರಾ ಪ್ರಚಾರ
ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕಂಪ್ಲಿ ಕ್ಷೇತ್ರ ಅಭ್ಯರ್ಥಿ ಸುರೇಶ್ ಬಾಬು

ಚುನಾವಣಾ ಅಖಾಡದಲ್ಲಿ ತಾರಾ ಪ್ರಚಾರ
ಲೋಕಸತ್ತಾ ಪಕ್ಷದ ರಾಷ್ಟ್ರಾಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ಚುನಾವಣಾ ಪ್ರಚಾರಕ್ಕಾಗಿ ಶನಿವಾರ, 27 ಏಪ್ರಿಲ್ 2013 ಬೆಂಗಳೂರಿಗೆ ಆಗಮಿಸಲಿದ್ದಾರೆ
ಡಾ. ಜೆಪಿಯವರು ಬೆಳಿಗ್ಗೆ 11 ಗಂಟೆಯಿಂದ ಬೊಮ್ಮನಹಳ್ಳಿ ಹಾಗೂ ಬಿಟಿಎಮ್ ಲೇಔಟ್ ನ ಪ್ರಮುಖ ರಸ್ತಗಳಲ್ಲಿ ತೆರೆದ ವಾಹನದಲ್ಲಿ ಸಂಚರಿಸಿ ಬೊಮ್ಮನಹಳ್ಳಿ ಅಭ್ಯರ್ಥಿ ಡಾ.ಅಶ್ವಿನ್ ಮಹೇಶ್ ಮತ್ತು ಬಿಟಿಎಮ್ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ ಪರ ಮತ ಯಾಚಿಸಲಿದ್ದಾರೆ. ಸಂಜೆ 4 ಗಂಟೆಗೆ ಹೆಬ್ಬಾಳ ಕ್ಷೇತ್ರಕ್ಕೆ ತೆರಳಿ ಹೆಬ್ಬಾಳ ಅಭ್ಯರ್ಥಿ ಶ್ರೀಧರ್ ಪಬ್ಬಿಸೆಟ್ಟಿ ಪರವಾಗಿ ಮತ ಯಾಚಿಸಲಿದ್ದಾರೆ.