ಅಚ್ಚರಿ ಫಲಿತಾಂಶಕ್ಕೆ ಕಾದಿರುವ ಕೆ.ಆರ್. ನಗರ

ರಾಜಕೀಯ ಮಹತ್ವ : ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್ ಅವರ ನೆನಪಿಗೆ ಈ ಪ್ರದೇಶಕ್ಕೆ ಈ ಹೆಸರು ನೀಡಲಾಗಿದೆ. ಭತ್ತದ ಕಣಜವಾಗಿರುವ ಕೃಷ್ಣರಾಜನಗರ ಮೈಸೂರು ಸಂಸದ ಎಚ್. ವಿಶ್ವನಾಥ್ ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಕಳೆದ ಎರಡು ಚುನಾವಣೆಗಳಲ್ಲಿ ಇಲ್ಲಿ ವಿಶ್ವನಾಥ್ ಸೋಲು ಕಂಡಿದ್ದಾರೆ.
ಪ್ರಮುಖ ಸ್ಪರ್ಧಿಗಳು : ಕಾಂಗ್ರೆಸ್ಸಿನಿಂದ ಈ ಬಾರಿ ದೊಡ್ಡಸ್ವಾಮಿ ಹೆಸರು ಮುಂಚೂಣಿಯಲ್ಲಿದೆ. ಜೆಡಿಎಸ್‍ನಿಂದ ಶಾಸಕ ಸಾ.ರಾ ಮಹೇಶ್ ಸ್ಪರ್ಧಿಸಲಿದ್ದಾರೆ. ಕೆಜೆಪಿಯಿಂದ ಬಸಂತ್ ಕಣಕ್ಕಿಳಿಯಲಿದ್ದಾರೆ.
ಗೆಲುವಿನ ಲೆಕ್ಕಚಾರ : ಜೆಡಿಎಸ್ ಟಿಕೆಟ್ ಆಕಾಂಕ್ಷಿತರಾಗಿದ್ದ ಬಸಂತ್ ಕೆಜೆಪಿಗೆ ಜಿಗಿದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಹೇಶ್ ನಾಗಾಲೋಟಕ್ಕೆ ಇದರಿಂದ ತುಸು ಹಿನ್ನಡೆಯಾಗಬಹುದು. ಬಸಂತ್ ಒಕ್ಕಲಿಗರಾಗಿರೋ ಕಾರಣ ಅವರು ಒಕ್ಕಲಿಗರ ಮತಗಳು ಮತ್ತು ಲಿಂಗಾಯತ ಮತಗಳನ್ನು ಸೆಳೆಯಬಹುದು. ಜೆಡಿಎಸ್ ಮತ್ತು ಕೆಜೆಪಿ ಗುದ್ದಾಟದಲ್ಲಿ ಕಾಂಗ್ರೆಸ್‍ಗೆ ಅನುಕೂಲವಾದ್ರೆ ಅಚ್ಚರಿಯೇ ಬೇಡ.
ಸ್ಥಳೀಯ ಸಂಸ್ಥೆ ಚುನಾವಣೆ : ಕೆ.ಆರ್ ನಗರ ಪುರಸಭೆ ಕಾಂಗ್ರೆಸ್ ವಶವಾಗಿದೆ. 23 ಸ್ಥಾನಗಳಲ್ಲಿ 12 ಕಾಂಗ್ರೆಸ್, ಜೆಡಿಎಸ್ 10, ಪಕ್ಷೇತರ ಅಭ್ಯರ್ಥಿ 1 ಸ್ಥಾನ ಗಳಿಸಿದ್ದಾರೆ.
ಮತದಾರರ ವಿವರ
ಪುರುಷ ಮತದಾರರು - 98, 903
ಮಹಿಳಾ ಮತದಾರರು - 97,097
ಒಟ್ಟು ಮತದಾರರು - 1.96,000
ಹಾಲಿ ಶಾಸಕ - ಸಾ. ರಾ ಮಹೇಶ್ (ಜೆಡಿಎಸ್)
ಸೋತ ಅಭ್ಯರ್ಥಿ - ಎಚ್. ವಿಶ್ವನಾಥ್ (ಕಾಂಗ್ರೆಸ್)
ಗೆಲುವಿನ ಅಂತರ 20,300 ಮತಗಳು
ಜಾತಿವಾರು ಮತದಾರರು : ಒಕ್ಕಲಿಗರು - 50,000, ಕುರುಬರು - 45,000, ಲಿಂಗಾಯಿತರು - 15,000, ಪರಿಶಿಷ್ಟ ಜಾತಿ ಮತ್ತು ಪಂಗಡ - 31,000, ಮುಸ್ಲಿಂ - 15,000, ಇತರೆ - 40,000 ಮತಗಳು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications