ದಕ್ಷಿಣ ಕನ್ನಡ ಜಿಲ್ಲೆ ವಿಧಾನಸಭಾ ಕ್ಷೇತ್ರ ಪರಿಚಯ
ಬ್ರಿಟಿಷ್ ಆಳ್ವಿಕೆಯಲ್ಲಿ ಇಂಪೀರಿಯಲ್ ಗೆಜೆಟರ್ ಆಫ್ ಇಂಡಿಯಾ 1908ರಲ್ಲಿ ಸೌತ್ ಕೆನರಾ, ತಂಜಾವೂರು ಮತ್ತು ಗಂಜಂ ಈ ಮೂರು ಪ್ರದೇಶಗಳನ್ನು ಜಿಲ್ಲೆಗಳನ್ನಾಗಿ ಪರಿವರ್ತಿಸಿ ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸಿದರು. 1947ರಲ್ಲಿ ಸೌತ್ ಕೆನರಾ ಜಿಲ್ಲೆಯನ್ನು ದಕ್ಷಿಣಕನ್ನಡ ಜಿಲ್ಲೆ ಎಂದು ಹೆಸರಿಸಲಾಯಿತು. ಕರ್ನಾಟಕ ಸರ್ಕಾರ ಆಗಸ್ಟ್ 1997ರಲ್ಲಿ, ಆಡಳಿತ ದೃಷ್ಟಿಯಿ೦ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾಗಿ ವಿ೦ಗಡಿಸಿತು.
ಪುರಾಣದಲ್ಲಿ ಹೇಳಿರುವಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಪಶ್ಚಿಮ ಘಟ್ಟದಿಂದ ಕರಾವಳಿವರೆಗಿನ 'ಪರಶುರಾಮ ಸೃಷ್ಟಿ'ಯ ಭಾಗವಾಗಿದೆ. ಕ್ಷತ್ರಿಯರನ್ನು ಭೂಲೋಕದಿಂದ ನಿರ್ಮೂಲನ ಮಾಡುವ ಪ್ರತಿಜ್ಙೆ ಕೈಗೊಂಡ ಪರಶುರಾಮನು ಭೂಮಿಯನ್ನು 21 ಬಾರಿ ಸುತ್ತಿ ಸಕಲ ಕ್ಷತ್ರಿಯರನ್ನೂ ನಿರ್ಮೂಲನ ಮಾಡಿದ ನಂತರ ತಾನು ನೆಲೆಸಲು ಕ್ಷತ್ರಿಯರು ಕಾಲಿಡದ ಜಾಗವೊಂದನ್ನು ಸೃಷ್ಟಿಸಲು ಸಬಯಸುತ್ತಾನೆ.
ಅದರಂತೆ ಪಶ್ಚಿಮ ಘಟ್ಟದ ಶಿಖರವೊಂದರ ಮೇಲೆ ನಿಂತು ರಕ್ತದಿಂದ ಮಲಿನವಾದ ತನ್ನ ಕೊಡಲಿ(ಪರಶು)ಯನ್ನು ಸಮುದ್ರದೆಡೆಗೆ ಎಸೆದಾಗ ಸಮುದ್ರ ರಾಜನು ಕೊಡಲಿ ಬಿದ್ದಲ್ಲಿಯವರೆಗೆ ಹಿಂದೆ ಸರಿಯುತ್ತಾನೆ. ಆಗ ಸೃಷ್ಟಿಯಾದ ಭೂಭಾಗವೇ ಈ ಪರಶುರಾಮ ಸೃಷ್ಟಿ ಎನ್ನುವುದು ನಂಬಿಕೆ.

ಮೂಲ ತುಳು ಭಾಷಿಗರು ಈ ಭಾಗದಲ್ಲಿ ಹೆಚ್ಚಾಗಿರುವುದರಿಂದ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ತುಳುನಾಡು ಎಂದೂ ಕರೆಯುತ್ತಾರೆ. ಹೊಸ ರಾಜ್ಯ ಬೇಕೆಂದು ತುಳುನಾಡಿಗರು ಹೋರಾಟವನ್ನೂ ನಡೆಸುತ್ತಿದ್ದಾರೆ. ಮುಸ್ಲಿಂ, ಕ್ರಿಸ್ಚಿಯನ್ ಸೇರಿದಂತೆ ಬ್ರಾಹ್ಮಣರು (ಶಿವಳ್ಳಿ, ಹವ್ಯಕ, ಕೋಟ), ಮೊಗವೀರ, ಕೊಂಕಣಿ, ಬಂಟ್ಸ್, ಬಿಲ್ಲವ ಪಂಗಡದವರು ಈ ಪ್ರದೇಶದಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ.
ಜಿಲ್ಲೆಯ ಒಟ್ಟು ವಿಸ್ತೀರ್ಣ - 4866 ಚದರ ಕಿ.ಮೀ.
ಜನಸಂಖ್ಯೆ : 19 ಲಕ್ಷ (2001ರ ಜನಗಣತಿಯಂತೆ)
ಪ್ರಮುಖ ಭಾಷೆಗಳು : ಕನ್ನಡ, ತುಳು, ಕೊಂಕಣಿ, ಬ್ಯಾರಿ
ಜಿಲ್ಲೆಯ ವ್ಯಾಪ್ತಿಗೆ ಬರುವ ತಾಲೂಕುಗಳು: ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
ಬೆಳ್ತಂಗಡಿ (ಹಾಲಿ ಶಾಸಕರು, ವಸಂತ ಬಂಗೇರಾ, ಕಾಂಗ್ರೆಸ್)
2008ರ ಚುನಾವಣೆಯಲ್ಲಿ ವಸಂತ ಬಂಗೇರಾ (ಪಡೆದ ಒಟ್ಟು ಮತಗಳು 59,528) ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ ಪ್ರಭಾಕರ್ ಬಂಗೇರಾ (43,425) ಅವರನ್ನು 16,103 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.
ಮೂಡಬಿದಿರೆ (ಹಾಲಿ ಶಾಸಕರು, ಕೆ ಅಭಯ ಚಂದ್ರ ಜೈನ್, ಕಾಂಗ್ರೆಸ್)
2008ರ ಚುನಾವಣೆಯಲ್ಲಿ ಅಭಯ ಚಂದ್ರ (ಪಡೆದ ಒಟ್ಟು ಮತಗಳು 44,744) ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ ಪಿ ಜಗದೀಶ್ ಅಧಿಕಾರಿ (34,841) ಅವರನ್ನು 9,903 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.
ಮಂಗಳೂರು ಉತ್ತರ (ಹಾಲಿ ಶಾಸಕರು, ಜೆ ಕೃಷ್ಣ ಪಾಲೇಮಾರ್, ಬಿಜೆಪಿ)
2008ರ ಚುನಾವಣೆಯಲ್ಲಿ ಕೃಷ್ಣ ಪಾಲೇಮಾರ್ (ಪಡೆದ ಒಟ್ಟು ಮತಗಳು 70.057) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಬಿ ಎ ಮೊಯುದ್ದೀನ್ ಬಾವ (55,631) ಅವರನ್ನು 14,426 ಮತಗಳಿಂದ ಸೋಲಿಸಿ ಚುನಾಯಿತರಾಗಿದ್ದರು.
ಮಂಗಳೂರು ದಕ್ಷಿಣ (ಹಾಲಿ ಶಾಸಕರು, ಎನ್ ಯೋಗೀಶ್ ಭಟ್, ಬಿಜೆಪಿ)
2008ರ ಚುನಾವಣೆಯಲ್ಲಿ ಯೋಗೀಶ್ ಭಟ್ (ಪಡೆದ ಒಟ್ಟು ಮತಗಳು 60,133) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಇವಾನ್ ಡಿಸೋಜಾ (51,373) ಅವರನ್ನು 8,760 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು
ಮಂಗಳೂರು (ಉಳ್ಳಾಲ) (ಹಾಲಿ ಶಾಸಕರು, ಯು ಟಿ ಖಾದರ್, ಕಾಂಗ್ರೆಸ್)
2008ರ ಚುನಾವಣೆಯಲ್ಲಿ ಖಾದರ್ (ಪಡೆದ ಒಟ್ಟು ಮತಗಳು 50,718) ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ ಪದ್ಮನಾಭ ಕೊಟ್ಟಾರಿ (43,669) ಅವರನ್ನು 7,049 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.
ಬಂಟ್ವಾಳ (ಹಾಲಿ ಶಾಸಕರು, ಬಿ ರಮಾನಾಥ ರೈ, ಕಾಂಗ್ರೆಸ್)
2008ರ ಚುನಾವಣೆಯಲ್ಲಿ ರಮಾನಾಥ ರೈ (ಪಡೆದ ಒಟ್ಟು ಮತಗಳು 61,560) ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಿ ನಾಗರಾಜ ಶೆಟ್ಟಿ (60,309) ಅವರನ್ನು ಕೇವಲ 1,251 ಮತಗಳಿಂದ ಸೋಲಿಸಿದ್ದರು.
ಪುತ್ತೂರು (ಹಾಲಿ ಶಾಸಕಿ, ಮಲ್ಲಿಕಾ ಪ್ರಸಾದ್, ಬಿಜೆಪಿ)
2008ರ ಚುನಾವಣೆಯಲ್ಲಿ ಮಲ್ಲಿಕಾ ಪ್ರಸಾದ್ (ಪಡೆದ ಒಟ್ಟು ಮತಗಳು 46,605) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಬೊಂದಾಲ ಜಗನ್ನಾಥ ಶೆಟ್ಟಿ (45,180) ಅವರನ್ನು 1,425 ಮತಗಳಿಂದ ಸೋಲಿಸಿ ಚುನಾಯಿತರಾಗಿದ್ದರು.
ಸುಳ್ಯ (ಹಾಲಿ ಶಾಸಕ, ಅಂಗಾರ ಎಸ್, ಬಿಜೆಪಿ)
2008ರ ಚುನಾವಣೆಯಲ್ಲಿ ಅಂಗಾರ (ಪಡೆದ ಒಟ್ಟು ಮತಗಳು 61,144) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಡಾ. ಬಿ ರಘು (56,822) ಅವರನ್ನು 4,322 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.
ಜಿಲ್ಲೆಯ ಪ್ರಮುಖ ಸಮಸ್ಯೆಗಳು
* ಕುಲಗೆಟ್ಟು ಹೋಗಿರುವ ರಸ್ತೆಗಳು.
* ಬೀಡಿ ಕಾರ್ಮಿಕರಿಗೆ ದಿನಗೂಲಿ ವೇತನದಲ್ಲಿ ಪರಿಷ್ಕರಣೆ.
* ಸರಕಾರಿ ಶಾಲೆಯಲ್ಲಿ ಬದಲಾವಣೆ ಕಾಣದ ಗುಣಮಟ್ಟದ ವಿದ್ಯಾಭ್ಯಾಸ.
* ಬರೀ ಭರವಸೆಯಾಗಿಯೇ ಉಳಿದಿರುವ ಮೀನುಗಾರರಿಗೆ ಸರಕಾರದಿಂದ ವಿಮಾ ಪಾಲಿಸಿ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications