ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಪರಿಚಯ

R Ashok
ವಿಧಾನಸಭಾ ಕ್ಷೇತ್ರ ಸಂಖ್ಯೆ 171: ಹಾಲಿ ಶಾಸಕ- ಆರ್ ಅಶೋಕ್ (55 ವರ್ಷ)- ಬಿಜೆಪಿ. ಸೋತ ಅಭ್ಯರ್ಥಿ ಎಂವಿ ಪ್ರಸಾದ್ ಬಾಬು- ಜೆಡಿಎಸ್

* ಸಾಧನೆಗಳು: ಗೃಹ, ಸಾರಿಗೆ, ಉಪಮುಖ್ಯಮಂತ್ರಿ ಗೌರವಗಳು ಅಶೋಕ್ ಬತ್ತಳಿಕೆಯಲ್ಲಿವೆ. 2008ಕ್ಕೆ ಮುನ್ನ ರಾಜ್ಯದಲ್ಲೇ ಅತಿ ದೊಡ್ಡ ಕ್ಷೇತ್ರವೆನಿಸಿದ್ದ ಉತ್ತರಹಳ್ಳಿಯಿಂದ ಹ್ಯಾಟ್ರಿಕ್ ಗೆಲುವು ಕಂಡವರು. ಕ್ಷೇತ್ರ ಪುನರ್ವಿಂಗಡಣೆಯಿಂದ ಪದ್ಮನಾಭ ನಗರದಲ್ಲಿ ತಳವೂರಿದರು. ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ 3 ಬಸ್ ನಿಲ್ದಾಣಗಳ ಸ್ಥಾಪನೆ. ವಿಶೇಷವಾಗಿ ಆಟದ ಮೈದಾನ ಅಭಿವೃದ್ಧಿಯಾಗಿದೆ. ಬಹುತೇಕ ಎಲ್ಲ ಪಾರ್ಕುಗಳಿಗೂ ಮರುಜೀವ ತುಂಬಿದ್ದಾರೆ.

* ಸಮಸ್ಯೆಗಳು: ಏಕೈಕ ಹೆಸರಿಗೆ ಆಸ್ಪತ್ರೆ ಹೊರತುಪಡಿಸಿದರೆ ಬೇರೆ ಸರಕಾರಿ ಆಸ್ಪತ್ರೆಗಳೇ ಇಲ್ಲ. ಆಟದ ಮೈದಾನಗಳನ್ನು ಭೂಗಳ್ಳರು ಕದ್ದಿದ್ದಾರೆ ಎಂದು ಎಂವಿ ಪ್ರಸಾದ್ ಬಾಬು ಕಿಡಿಕಾರುತ್ತಾರೆ. ಸಾರ್ವಜನಿಕ ಸಾರಿಗೆಯಲ್ಲಿ ಮತ್ತಷ್ಟು ಸುಧಾರಣೆ ತರುವುದಕ್ಕೆ ಅವಕಾಶ ಇದೆ. ಕಾನೂನು ಸುವ್ಯವಸ್ಥೆ ಪರವಾಗಿಲ್ಲ.

* ವಾರ್ಡ್: ಹೊಸಕೆರೆ ಹಳ್ಳಿ, ಗಣೇಶ ಮಂದಿರ, ಕರಿಸಂದ್ರ, ಯಡಿಯೂರು, ಬನಶಂಕರಿ ದೇವಸ್ಥಾನ, ಕುಮಾರಸ್ವಾಮಿ ಬಡಾವಣೆ, ಪದ್ಮನಾಭ ನಗರ, ಚಿಕ್ಕಲಸಂದ್ರ

* ಮತದಾರರ ಸಂಖ್ಯೆ: 1,05,939 . ಕಳೆದ ಬಾರಿ ವೋಟ್ ಮಾಡಿದವರು ಶೇ. 54ರಷ್ಟು ಮಂದಿ. ಅದರಲ್ಲಿ ಆರ್ ಅಶೋಕ್ ಮತ ಗಳಿಕೆ ಪ್ರಮಾಣ ಶೇ. 52.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+