ಆನೇಕಲ್- ರಾಜಧಾನಿಯಿಂದ ಹೊರಗಿರುವ ಕ್ಷೇತ್ರ

* ಸಾಧನೆಗಳು: ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದತ್ತ ಆಸಕ್ತಿ. ಸ್ಥಳೀಯ ಸಂಸ್ಥೆ ಮೂಲಕ ರಾಜಕೀಯ ಪ್ರವೇಶ. ಸತತ 4 ಬಾರಿ ಶಾಸಕರಾದವರು. ಪ್ರಸ್ತುತ ಬಂದೀಖಾನೆ ಸಚಿವರು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ.
ಸುತ್ತಮುತ್ತಲ ಹಳ್ಳಿಗಳಲ್ಲಿ ಸಿಮೆಂಟ್ ರಸ್ತೆಗಳ ನಿರ್ಮಾಣವಾಗಿದೆ. ಮುತ್ಯಾಲಮಡು ಯೋಜನೆ ಬಾಕಿಯಿದೆ. ಜನರ ಕಷ್ಟ-ಸುಖಕ್ಕೆ ಸಿಗುತ್ತಾರೆ. ನಾರಾಯಣಸ್ವಾಮಿಗೆ ಇದೇ ಶ್ರೀರಕ್ಷೆ.
* ಸಮಸ್ಯೆಗಳು: ಬೆಂಗಳೂರಿಗೆ ಹೊರಗಿನ ಕ್ಷೇತ್ರ ಎಂಬ ಟ್ಯಾಗ್ ಅಭಿವೃದ್ಧಿಗೆ ಹೊರೆಯಾಗಿದೆ. ಒಳಚರಂಡಿ, ವಿದ್ಯುತ್, ಕುಡಿಯುವ ನೀರು, ಕಾನೂನು ಸುವ್ಯವಸ್ಥೆ ಸಮಸ್ಯೆಗಳಾಗಿ ಕಾಡುತ್ತಿವೆ. ಖಾಸಗಿ ಉದ್ಯಮಿಗಳು, ಉದ್ಯೋಗಿಗಳು ಮತ್ತು ರೈತಾಪಿ ವರ್ಗ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಪ್ರತಿಪಕ್ಷಗಳು ಜಿದ್ದಿಗೆ ಬಿದ್ದು ಸ್ಪರ್ಧೆಗೆ ಇಳಿಯವುದು ದೂರದ ಮಾತು. ಆದರೆ ಆಡಳಿತ ವಿರೋಧಿ ಅಲೆಗೆ ಸಿಕ್ಕಿದರೆ ನಾರಾಯಣ ಸ್ವಾಮಿ ಪಡ್ಚಾ...
* ಮತದಾರರ ಸಂಖ್ಯೆ: 2,37,990. ಕಳೆದ ಬಾರಿ ವೋಟ್ ಮಾಡಿದವರು ಶೇ. 59ರಷ್ಟು ಮಂದಿ. ಅದರಲ್ಲಿ ನಾರಾಯಣ ಸ್ವಾಮಿ ಮತ ಗಳಿಕೆ ಪ್ರಮಾಣ ಶೇ. 45.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications