ಇಬ್ಬರು ಖ್ಯಾತ ನಿರ್ಮಾಪಕರಿಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ
ಪ್ರಮುಖ ಪಕ್ಷಗಳ ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚುವ ಪ್ರಕ್ರಿಯೆ ಅಂತಿಮ ಮಜಲಿನಲ್ಲಿದೆ. ಇದೇ ಶುಕ್ರವಾರ (ಏ 5) ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬಹುದು ಎನ್ನುವುದು ಸದ್ಯಕ್ಕೆ ದೊರೆಯುತ್ತಿರುವ ವರ್ತಮಾನ.
ಕೆಜೆಪಿ ಎರಡು ಹಂತದಲ್ಲಿ ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿ ಈ ವಿಷಯದಲ್ಲಿ ಮೇಲುಗೈ ಸಾಧಿಸಿದೆ. ಜೆಡಿಎಸ್ ಬೆಂಗಳೂರು ನಗರ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಕ್ಕೆ (ಚಾಮರಾಜಪೇಟೆ, ಶಿವಾಜಿನಗರ, ಹೆಬ್ಬಾಳ, ಜಯನಗರ) ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿದು ರಾಜಕೀಯ ಭವಿಷ್ಯದ ಹುಡುಕಾಟದಲ್ಲಿರುವ ಸಿನಿಮಾ ತಾರೆಯರ ಪಟ್ಟಿ ತುಂಬಾ ದೊಡ್ಡದು. ಅಂಬರೀಶ್, ಶಶಿಕುಮಾರ್, ರಕ್ಷಿತಾ, ಪೂಜಾಗಾಂಧಿ, ಶ್ರುತಿ, ಮಾಳವಿಕಾ, ಉಮಾಶ್ರೀ ಮುಂತಾದವರು ಟಿಕೆಟ್ ಆಕಾಂಕ್ಷಿಗಳು. ಇವರಲ್ಲಿ ಯಾರಿಗೆ ಟಿಕೆಟ್ ಒಲಿಯುತ್ತದೆ ಎನ್ನುವುದು ಇನ್ನು ಕೆಲವೇ ದಿನಗಳಲ್ಲಿ ಅಂತಿಮವಾಗಲಿದೆ.
ಅಂತಿಮ ಘೋಷಣೆಯೊಂದೇ ಬಾಕಿಯಿದ್ದು, ಇಬ್ಬರು ನಿರ್ಮಾಪಕರು ಸೇರಿ ಪ್ರಮುಖ ನಟಿಯರು ಕಣಕ್ಕಿಳಿಯುವ ಕ್ಷೇತ್ರಗಳು ಸ್ಲೈಡಿನಲ್ಲಿದೆ

ಆನಂದ ಅಪ್ಪುಗೋಳ್
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಮೂಲಕ ಕನ್ನಡಿಗರಿಗೆ ಅದ್ದೂರಿ ಚಿತ್ರ ನೀಡಿದ ಆನಂದ್ ಅಪ್ಪುಗೋಳ್ ಮೂಲತ: ಬೆಳಗಾವಿ ಜಿಲ್ಲೆಯವರು. ಇವರು ಕಿತ್ತೂರು ಕ್ಷೇತ್ರದಿಂದ ಸ್ಪರ್ಧಿಸ ಬಯಸಿದ್ದಾರೆ. ಸದ್ಯ ದೆಹಲಿಯಲ್ಲಿ ಲಾಬಿ ನಡೆಸುತ್ತಿರುವ ಆನಂದ್ ಅಪ್ಪುಗೋಳಿಗೆ ಟಿಕೆಟ್ ಕನ್ಫರ್ಮ್ ಎನ್ನಲಾಗುತ್ತಿದೆ.

ಮುನಿರತ್ನಂ ನಾಯ್ಡು
ಕನ್ನಡ ಚಿತ್ರರಂಗದ ಪ್ರಭಾವಿ ವ್ಯಕ್ತಿ ಮತ್ತು ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನಂ ನಾಯ್ಡು ಅವರಿಗೆ ಬೆಂಗಳೂರು ರಾಜರಾಜೇಶ್ವರಿ ನಗರದ ಟಿಕೆಟ್ ಸಿಗುವುದು ಖಚಿತ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಮುನಿರತ್ನ ಅವರು ಬೆಂಗಳೂರು ಯಶವಂತಪುರ ವಾರ್ಡಿನ ಕಾಂಗ್ರೆಸ್ ಸದಸ್ಯರು.

ಉಮಾಶ್ರೀ
ಕಳೆದ ಬಾರಿಯ ಚುನಾವಣೆಯಲ್ಲಿ ತೇರದಾಳ ಕ್ಷೇತ್ರದಲ್ಲಿ ಬಿಜೆಪಿಯ ಸಿದ್ದು ಸವದಿ ವಿರುದ್ದ ಸುಮಾರು ಹನ್ನೆರೆಡು ಸಾವಿರ ಮತಗಳಿಂದ ಪರಾಭವಗೊಂಡಿದ್ದ ಉಮಾಶ್ರೀಗೆ ಈ ಬಾರಿ ಕೂಡಾ ಕಾಂಗ್ರೆಸ್ ಟಿಕೆಟ್ ಇದೇ ಕ್ಷೇತ್ರದಿಂದ ಸಿಗುವುದು ಖಚಿತ ಎನ್ನುತ್ತವೆ ಮೂಲಗಳು.

ಮಯೂರ್ ಪಟೇಲ್
ನಟ, ನಿರ್ದೇಶಕ ಮತ್ತು ನಿರ್ಮಾಪಕ ಮದನ್ ಪಟೇಲ್ ಪುತ್ರ ಮಯೂರ್ ಪಟೇಲ್ ಬೆಂಗಳೂರು ಮಹದೇವಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಪೂಜಾಗಾಂಧಿ
ಪಕ್ಷಾಂತರ ಮಾಡುವಲ್ಲಿ ಹ್ಯಾಟ್ರಿಕ್ ಸಾಧಿಸಿರುವ ಪೂಜಾಗಾಂಧಿ BSR ಕಾಂಗ್ರೆಸ್ ಪಕ್ಷದಿಂದ ರಾಯಚೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ರಕ್ಷಿತಾ ಪ್ರೇಮ್
ನಟಿ ರಕ್ಷಿತಾ ಗದಗ ಕ್ಷೇತ್ರದಿಂದ BSR ಕಾಂಗ್ರೆಸ್ ಪಕ್ಷದ ಟಿಕೆಟಿನಿಂದ ಸ್ಪರ್ಧಿಸಲಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications