ದ.ಕನ್ನಡ:ಪ್ರಮುಖ ಪಕ್ಷಗಳಿಗೆ ಅಭ್ಯರ್ಥಿಗಳದ್ದೇ ಮಂಡೆಬಿಸಿ
ಮಂಗಳೂರು, ಮಾ 25: ಎಲ್ಲಾ ಜಿಲ್ಲೆಯಂತೆ ಈ ಜಿಲ್ಲೆಯಲ್ಲೂ ರಾಷ್ಟ್ರೀಯ ಪಕ್ಷಗಳಿಗೂ, ಪ್ರಾದೇಶಿಕ ಪಕ್ಷಗಳಿಗೂ ಬಂಡಾಯ ಅಭ್ಯರ್ಥಿಗಳದ್ದೇ ತಲೆನೋವು. ಅವರಿಗೆ ಟಿಕೆಟ್ ಕೊಟ್ಟರೆ ಇನ್ನೊಬ್ಬರಿಗಾಗಲ್ಲ, ಇನ್ನೊಬ್ಬರಿಗೆ ಕೊಟ್ಟರೆ ಮತ್ತೊಬ್ಬರಿಗಾಗಲ್ಲ.
ಒಟ್ಟಿನಲ್ಲಿ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಷ್ಟರಲ್ಲಿ ಕರಾವಳಿಯ ಬಿಸಿಲಿನ ತಾಪಕ್ಕಿಂತ ಹೆಚ್ಚಾಗಿ ಚುನಾವಣೆಯ ತಾಪಕ್ಕೆ ವರಿಷ್ಠರು ಹೈರಾಣರಾಗುತ್ತಿದ್ದಾರೆ.
ಇಲ್ಲಿ ಏನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ್ದೇ ಕಾರುಬಾರು. ಮೂಡಬಿದರೆ ಕ್ಷೇತ್ರವೊಂದು ಹೊರತು ಪಡಿಸಿ ಮಿಕ್ಕೆಲ್ಲಾ ಕಡೆ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಹಣಾಹಣಿ. ಮೂಡಬಿದರೆಯಲ್ಲಿ ತೆನೆಹೊತ್ತ ಮಹಿಳೆಯ ಹವಾ ತುಸು ಬೀಸುತ್ತಿದೆ.
ಇನ್ನು ಕೆಜೆಪಿಯ ಲೆಕ್ಕಾಚಾರ ಸಿಂಪಲ್ ಗೆಲ್ಲಲಾಗದಿದ್ದರೆ ಓಕೆ, ಬಿಜೆಪಿಯ ಮತವನ್ನು ಒಡಿಯ ಬೇಕೆನ್ನುವುದು. ಹೀಗಾಗಿ ಕಮಲದ ಪಕ್ಷಕ್ಕೆ ಒಂದು ಕಡೆ ಬಂಡಾಯ ಅಭ್ಯರ್ಥಿಗಳು, ಇನ್ನೊಂದು ಕಡೆ ಕೆಜೆಪಿಯ ಮಂಡೆಬಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಬಗ್ಗೆ ರೌಂಡ್ ಅಪ್. ಜಿಲ್ಲೆಯಲ್ಲಿರುವ ವಿಧಾನಸಭಾ ಕ್ಷೇತ್ರಗಳೆಂದರೆ ಮಂಗಳೂರು (ಉಳ್ಳಾಲ), ಮಂಗಳೂರು (ಉತ್ತರ), ಮಂಗಳೂರು (ದಕ್ಷಿಣ), ಮೂಡಬಿದರೆ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ.
ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳು ಸ್ಲೈಡಿನಲ್ಲಿ

ಮಂಗಳೂರು (ಉಳ್ಳಾಲ)
ಮಂಗಳೂರು (ಉಳ್ಳಾಲ)
ಕಾಂಗ್ರೆಸ್ : ಯು ಟಿ ಖಾದರ್
ಬಿಜೆಪಿ: ಚಂದ್ರಹಾಸ ಉಳ್ಳಾಲ
(ಚಿತ್ರದಲ್ಲಿ ಹಾಲಿ ಶಾಸಕ ಯು ಟಿ ಖಾದರ್)

ಮಂಗಳೂರು (ಉತ್ತರ)
ಮಂಗಳೂರು (ಉತ್ತರ)
ಬಿಜೆಪಿ: ಕೃಷ್ಣ ಪಾಲೇಮಾರ್
ಕಾಂಗ್ರೆಸ್ : ಮೊಯುದ್ದೀನ್ ಬಾವ, ವಿಜಯ್ ಕುಮಾರ್ ಶೆಟ್ಟಿ
(ಚಿತ್ರದಲ್ಲಿ ಹಾಲಿ ಶಾಸಕ ಕೃಷ್ಣ ಪಾಲೇಮಾರ್)

ಮಂಗಳೂರು (ದಕ್ಷಿಣ)
ಮಂಗಳೂರು (ದಕ್ಷಿಣ)
ಬಿಜೆಪಿ: ಯೋಗೀಶ್ ಭಟ್, ಶ್ರೀಕರ ಪ್ರಭು
ಕಾಂಗ್ರೆಸ್ : ಜೆ ಆರ್ ಲೋಬೊ, ಐವಿನ್ ಡಿಸೋಜಾ
(ಚಿತ್ರದಲ್ಲಿ ಹಾಲಿ ಶಾಸಕ ಯೋಗೀಶ್ ಭಟ್)

ಸುಳ್ಯ
ಸುಳ್ಯ
ಬಿಜೆಪಿ: ಅಂಗಾರ
ಕಾಂಗ್ರೆಸ್ : ಡಾ. ರಘು
(ಚಿತ್ರದಲ್ಲಿ ಹಾಲಿ ಶಾಸಕ ಅಂಗಾರ)

ಬಂಟ್ವಾಳ
ಬಂಟ್ವಾಳ
ಬಿಜೆಪಿ: ರಾಜೇಶ್ ನಾಯಕ್, ತುಂಗಪ್ಪ ಬಂಗೇರಾ, ಪದ್ಮನಾಭ ಕೊಟ್ಟಾರಿ
ಕಾಂಗ್ರೆಸ್ : ರಮಾನಾಥ ರೈ
(ಚಿತ್ರದಲ್ಲಿ ಹಾಲಿ ಶಾಸಕ ರಮಾನಾಥ ರೈ)

ಬೆಳ್ತಂಗಡಿ
ಬೆಳ್ತಂಗಡಿ
ಕಾಂಗ್ರೆಸ್: ವಸಂತ ಬಂಗೇರಾ, ಹರೀಶ್ ಕುಮಾರ್
ಬಿಜೆಪಿ: ಪ್ರಭಾಕರ ಬಂಗೇರಾ, ಪ್ರತಾಪ್ ಸಿಂಹ ನಾಯಕ್, ಶಾರದಾ, ರಂಜನ್ ಗೌಡ, ಕುಶಾಲಪ್ಪ ಗೌಡ
(ಚಿತ್ರದಲ್ಲಿ ಹಾಲಿ ಶಾಸಕ ವಸಂತ ಬಂಗೇರಾ)

ಪುತ್ತೂರು
ಪುತ್ತೂರು
ಕಾಂಗ್ರೆಸ್ : ಶಕುಂತಲಾ ಶೆಟ್ಟಿ, ಹೇಮನಾಥ ಶೆಟ್ಟಿ
ಬಿಜೆಪಿ: ಸದಾನಂದ ಗೌಡ, ಮಲ್ಲಿಕಾ ಪ್ರಸಾದ್, ಶೈಲಜಾ ಭಟ್, ಡಾ. ಸುಧಾಕರ್ ರಾವ್
(ಚಿತ್ರದಲ್ಲಿ ಹಾಲಿ ಶಾಸಕಿ ಮಲ್ಲಿಕಾ ಪ್ರಸಾದ್)

ಮೂಡಬಿದ್ರೆ
ಮೂಡಬಿದ್ರೆ
ಕಾಂಗ್ರೆಸ್: ಅಭಯಚಂದ್ರ ಜೈನ್
ಬಿಜೆಪಿ: ಜಗದೀಶ್ ಅಧಿಕಾರಿ, ಉಮಾನಾಥ್ ಕೋಟ್ಯಾನ್, ಸತ್ಯಜಿತ್ ಸುರತ್ಕಲ್, ನಳಿನ್ ಕುಮಾರ್ ಕಟೀಲ್
ಜೆಡಿಎಸ್: ಅಮರನಾಥ್ ಶೆಟ್ಟಿ
(ಚಿತ್ರದಲ್ಲಿ ಹಾಲಿ ಶಾಸಕ ಅಭಯಚಂದ್ರ ಜೈನ್)












Click it and Unblock the Notifications