ಬಾಗಲಕೋಟೆ ಜಿಲ್ಲೆ ಅಭ್ಯರ್ಥಿಗಳು: ಕೆಜೆಪಿ ನಿರ್ಣಾಯಕ
ರಾಜ್ಯದ ಇಬ್ಬರು ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ (ಚಿತ್ರದುರ್ಗ) ಮತ್ತು ಎಸ್ ನಿಜನಿಂಗಪ್ಪ (ಚಿಕ್ಕಮಗಳೂರು) ಈ ಎರಡು ಜಿಲ್ಲೆಯಲ್ಲಿ ಕ್ರಮವಾಗಿ ಪರಾಭವಗೊಂಡ ನಂತರ ಮತ್ತೆ ರಾಜಕೀಯ ಭವಿಷ್ಯ ನೀಡಿದ ಜಿಲ್ಲೆಯೇ ಬಸವಣ್ಣನ ಜನ್ಮಸ್ಥಾನ ಕೂಡಲ ಸಂಗಮವಿರುವ 'ಬಾಗಲಕೋಟೆ'.
ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ಎಲ್ಲಾ ಏಳು ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಲಿಂಗಾಯತರೇ ಕ್ಷೇತ್ರದಲ್ಲಿ ನಿರ್ಣಾಯಕರ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇದ್ದ ನೇರ ಪೈಪೋಟಿಯ ಮಧ್ಯೆ ಯಡಿಯೂರಪ್ಪನವರ ಕೆಜೆಪಿ ತಲೆಯೆತ್ತಿರುವುದು ಈ ಬಾರಿಯ ಚುನಾವಣೆ ಭಾರೀ ಕುತೂಹಲ ಮೂಡಿಸುವಂತೆ ಮಾಡಿದೆ.

ಘಟಪ್ರಭಾ, ಮಲಪ್ರಭಾ, ಮತ್ತು ಕೃಷ್ಣಾ ನದಿಗಳು ಜಿಲ್ಲಾ ವ್ಯಾಪ್ತಿಯಲ್ಲಿ ಹರಿಯುತ್ತಿದ್ದರೂ ನೀರಿನ ಸಮಸ್ಯೆ ವಿಪರೀತ ಎನ್ನುವಷ್ಟು ಇರುವುದು ವಿಪರ್ಯಾಸವಲ್ಲದೆ ಮತ್ತೇನು. ಕಪ್ಪು ಮಣ್ಣಿರುವ ಫಲವತ್ತಾದ ನಾಡಿನಲ್ಲಿ ಗುಡಿ ಕೈಗಾರಿಕೆ ಜಿಲ್ಲೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ರೇಷ್ಮೆ ತ್ತು ಕೈಮಗ್ಗಕ್ಕೂ ಜಿಲ್ಲೆ ಹೆಸರುವಾಸಿಯಾಗಿದೆ.
ಬಾಗಲಕೋಟೆ ಜಿಲ್ಲಾ ವ್ಯಾಪ್ತಿಗೆ ಬರುವ ತಾಲೂಕುಗಳು : ಬಾದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ
2008ರಲ್ಲಿ ಗೆದ್ದವರ ಪಟ್ಟಿ | 2013 ಫಲಿತಾಂಶ: ಗೆದ್ದವರು, ಸೋತವರ ವಿವರ
ಮುಧೋಳ : ಗೋವಿಂದ ಕಾರಜೋಳ, ಬಿಜೆಪಿ, ಗೆದ್ದ ಮತದ ಅಂತರ 7,378.
ತೇರದಾಳ : ಸಿದ್ದು ಸವದಿ, ಬಿಜೆಪಿ, ಗೆದ್ದ ಮತದ ಅಂತರ 12,244.
ಜಮಖಂಡಿ : ಕುಲ್ಕರ್ಣಿ ಶ್ರೀಕಾಂತ್ ಸುಬ್ಬರಾವ್, ಬಿಜೆಪಿ, ಗೆದ್ದ ಮತದ ಅಂತರ 19,690.
ಬೀಳಗಿ : ಮುರುಗೇಶ್ ನಿರಾಣಿ, ಬಿಜೆಪಿ, ಗೆದ್ದ ಮತದ ಅಂತರ, 3,124.
ಬಾದಾಮಿ : ಎಂ ಕೆ ಪಟ್ಟಣಶೆಟ್ಟಿ, ಬಿಜೆಪಿ, ಗೆದ್ದ ಮತದ ಅಂತರ 5,107.
ಬಾಗಲಕೋಟೆ : ಸಿ ವಿ ಚಂದ್ರಶೇಖರಯ್ಯ, ಬಿಜೆಪಿ, ಗೆದ್ದ ಮತದ ಅಂತರ 9,246.
ಹುನಗುಂದ : ದೊಡ್ಡನಗೌಡ ಪಾಟೀಲ್, ಬಿಜೆಪಿ, ಗೆದ್ದ ಮತದ ಅಂತರ 5,069.
2013 ಕರ್ನಾಟಕ ವಿಧಾನಸಭೆ ಚುನಾವಣೆ ಬಾಗಲಕೋಟೆ ಜಿಲ್ಲೆ ಅಭ್ಯರ್ಥಿಗಳು:
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಕಾಂಗ್ರೆಸ್ | ಬಿಜೆಪಿ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ / ಸಿಪಿ / ಪಕ್ಷೇತರರು /ಇತರರು |
| 19 | ಮುಧೋಳ (ಮೀಸಲು) | ಆರ್ ಬಿ ತಿಮ್ಮಾಪುರ | ಗೋವಿಂದ ಕಾರಜೋಳ | ಶಂಕರ್ ಎನ್ ನಾಯಕ್ | ಸ್ಪರ್ಧಿಸಿಲ್ಲ | ಅಶೋಕ್ ರಮೇಶ್ ಲಿಂಬಾವಳಿ (BSR) ಒಟ್ಟು 5 ಮಂದಿ ಕಣದಲ್ಲಿ |
| 20 | ತೇರದಾಳ | ಉಮಾಶ್ರೀ | ಸಿದ್ದು ಸವದಿ | ರಂಗಣ್ಣ ಗೌಡ ಪಾಟೀಲ್ | ಬಸವರಾಜ್ ಐ ಬಾಳೇಕಾಯಿ | ರಮೇಶ್ ಕೆಸರಗೊಪ್ಪ (BSR) ಸೇರಿ ಒಟ್ಟು ಏಳು ಮಂದಿ ಕಣದಲ್ಲಿ |
| 21 | ಜಮಖಂಡಿ | ಸಿದ್ದು ನ್ಯಾಮೇಗೌಡ | ಶ್ರೀಕಾಂತ ಕುಲ್ಕರ್ಣಿ | ಬಿ ಎಸ್ ಸಿಂಧೂರ | ಉಮೇಶ್ ಮಹಾಬಳ ಶೆಟ್ಟಿ | ಒಟ್ಟು ಹತ್ತು ಮಂದಿ ಕಣದಲ್ಲಿ |
| 22 | ಬೀಳಗಿ | ಜಗದೀಶ್ ಸಿ ಪಾಟೀಲ್ | ಮುರುಗೇಶ್ ನಿರಾಣಿ | ಬಸವ ಪ್ರಭು ಸರನಾಡ ಗೌಡ | ಸ್ಪರ್ಧಿಸಿಲ್ಲ | ಡಿ ಬಿ ಪೂಜಾರ್ (BSR) ಸೇರಿದಂತೆ ಒಟ್ಟು 14 ಮಂದಿ ಕಣದಲ್ಲಿ. |
| 23 | ಬಾದಾಮಿ | ಬಿ ಬಿ ಚಿಮ್ಮನಕಟ್ಟಿ | ಎಂ ಕೆ ಪಟ್ಟಣಶೆಟ್ಟಿ | ಮಹಾಂತೇಶ್ ಮಮಲಾಪುರ | ಬಿ ಪಿ ಹಳ್ಳೂರ | ಎಂ ಎಸ್ ಪಾಟೀಲ್ (BSR) ಸೇರಿದಂತೆ ಒಟ್ಟು ಎಂಟು ಮಂದಿ ಕಣದಲ್ಲಿ. |
| 24 | ಬಾಗಲಕೋಟೆ | ಎಚ್ ವೈ ಮೇಟಿ | ವೀರಣ್ಣ ಚರಂತಿಮಠ | ಬಸವನಗೌಡ ಜ ಪಾಟೀಲ | ಸ್ಪರ್ಧಿಸಿಲ್ಲ | ಒಟ್ಟು ಆರು ಮಂದಿ ಕಣದಲ್ಲಿ. |
| 25 | ಹುನಗುಂದ | ವಿಜಯಾನಂದ ಎಸ್ ಕಾಶಪ್ಪನವರ್ | ದೊಡ್ಡನಗೌಡ ಪಾಟೀಲ್ | ಅಬ್ದುಲ್ ಜಬ್ಬರ್ ಕಲ್ಬುರ್ಗಿ | ಕೆ ಜಿ ಹಲಗತ್ತಿ | ಸಂಗನಗೌಡ ಗೌಡರ (BSR) ಸೇರಿ ಒಟ್ಟು ಆರು ಮಂದಿ ಕಣದಲ್ಲಿ. |












Click it and Unblock the Notifications